ನಿರ್ದೇಶಕ ಜಾನ್‌ ಜಿ ಅವಿಲ್ಡ್‌ಸೆನ್ ನಿಧನ

7

ನಿರ್ದೇಶಕ ಜಾನ್‌ ಜಿ ಅವಿಲ್ಡ್‌ಸೆನ್ ನಿಧನ

Published:
Updated:
ನಿರ್ದೇಶಕ ಜಾನ್‌ ಜಿ ಅವಿಲ್ಡ್‌ಸೆನ್ ನಿಧನ

ಲಾಸ್‌ಏಂಜಲೀಸ್‌: ಹಾಲಿವುಡ್‌ನ ಜನಪ್ರಿಯ ‘ರಾಕಿ’ ಚಿತ್ರದ ನಿರ್ದೇಶಕ ಜಾನ್‌ ಜಿ ಅವಿಲ್ಡ್‌ಸೆನ್ (81) ಶುಕ್ರವಾರ ನಿಧನರಾದರು.‘ತಂದೆ ಕಿಬ್ಬೊಟ್ಟೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು’ ಎಂದು ಜಾನ್‌ ಜಿ ಅವಿಲ್ಡ್‌ಸೆನ್ ಅವರ ಪುತ್ರ ಆಂಟನಿ ಅವಿಲ್ಡ್‌ಸೆನ್ ತಿಳಿಸಿದ್ದಾರೆ.1976ರಲ್ಲಿ ತೆರೆಕಂಡ ‘ರಾಕಿ’ ಚಿತ್ರ,  ನಿರ್ದೇಶನ, ಸಂಕಲನ, ಉತ್ತಮ ಚಿತ್ರ ವಿಭಾಗಗಳಲ್ಲಿ  ಆಸ್ಕರ್‌ ಪ್ರಶಸ್ತಿ ಪಡೆದಿತ್ತು.1989ರಲ್ಲಿ ಬಿಡುಗಡೆಯಾದ ‘ದಿ ಕರಾಟೆ ಕಿಡ್‌’ ಚಿತ್ರ ಸಹ ಯಶಸ್ಸು ಗಳಿಸಿತ್ತು. ನಂತರದ ‘ಸೇವ್‌ ದಿ ಟೈಗರ್‌’ ಚಿತ್ರ ಸಹ 46ನೇ  ಆಸ್ಕರ್‌ಗೆ ಮೂರು ಬಾರಿ ನಾಮನಿರ್ದೇಶನಗೊಂಡಿತ್ತು.ಇಲಿನಾಯ್‌ನ ಓಕ್ ಪಾರ್ಕ್‌ನ ಅವಿಲ್ಡ್‌ಸನ್‌, 1970 ರಲ್ಲಿ ನಿರ್ದೇಶಿಸಿದ ‘ಜೋ’ ನಾಟಕದ ಮೂಲಕ ಮುನ್ನೆಲೆಗೆ ಬಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry