ಇನ್ಫೊಸಿಸ್‌ ಹುದ್ದೆಗೆ ದದ್ಲಾನಿ ರಾಜೀನಾಮೆ

7

ಇನ್ಫೊಸಿಸ್‌ ಹುದ್ದೆಗೆ ದದ್ಲಾನಿ ರಾಜೀನಾಮೆ

Published:
Updated:
ಇನ್ಫೊಸಿಸ್‌ ಹುದ್ದೆಗೆ ದದ್ಲಾನಿ ರಾಜೀನಾಮೆ

ನವದೆಹಲಿ: ಇನ್ಫೊಸಿಸ್‌ನ ಅಮೆರಿಕದಲ್ಲಿನ ವಹಿವಾಟಿನ ಮುಖ್ಯಸ್ಥ ಸಂದೀಪ್‌ ದದ್ಲಾನಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.ಇತ್ತೀಚೆಗಷ್ಟೇ ಅವರಿಗೆ ಹೆಚ್ಚುವರಿ ಹೊಣೆಗಾರಿಕೆ ಒಪ್ಪಿಸಲಾಗಿತ್ತು. ಹೀಗಾಗಿ ಅವರ ಹಠಾತ್‌ ನಿರ್ಗಮನವು ಅಚ್ಚರಿ ಮೂಡಿಸಿದೆ.‘ಕಳೆದ ಮೂರು ವರ್ಷಗಳಲ್ಲಿ ಸಂಸ್ಥೆಯ  ಬೆಳವಣಿಗೆಯಲ್ಲಿ ಸಂದೀಪ್‌ ಮಹತ್ವದ ಕೊಡುಗೆ ನೀಡಿದ್ದಾರೆ’ ಎಂದು ಸಂಸ್ಥೆಯ ಸಿಇಒ ವಿಶಾಲ್‌ ಸಿಕ್ಕಾ ಹೇಳಿದ್ದಾರೆ. ದದ್ಲಾನಿ ರಾಜೀನಾಮೆಯು ಸಿಕ್ಕಾ ಅವರಿಗೆ ಆದ ಹಿನ್ನಡೆ ಎಂದೇ ವಿಶ್ಲೇಷಿಸಲಾಗಿದೆ.ನೇಮಕ: ವಿಪ್ರೊದ ಮಾಜಿ ಉದ್ಯೋಗಿ ಇಂದರ್‌ಪ್ರೀತ್‌ ಸಹಾನಿ ಅವರನ್ನು ಇನ್ಫೊಸಿಸ್‌ನ  ಪ್ರಧಾನ ಸಲಹೆಗಾರ್ತಿಯಾಗಿ ನೇಮಕ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry