ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಮಣಿದ ಕೆನಡಾ

ಹಾಕಿ ವಿಶ್ವ ಲೀಗ್‌ ಸೆಮಿಫೈನಲ್; ಕ್ವಾರ್ಟರ್‌ ಸ್ಥಾನ ಖಚಿತ
Last Updated 17 ಜೂನ್ 2017, 19:30 IST
ಅಕ್ಷರ ಗಾತ್ರ

ಲಂಡನ್: ಗೆಲುವಿನ ಓಟ ಮುಂದುವರಿಸಿರುವ ಭಾರತ ತಂಡ ಹಾಕಿ ವಿಶ್ವ ಲೀಗ್ ಸೆಮಿಫೈನಲ್‌ನಲ್ಲಿ ಶನಿವಾರ ಕೆನಡಾವನ್ನು ಮಣಿಸಿದೆ.
ಭಾರತ 3–0ಗೋಲುಗಳಲ್ಲಿ ಕೆನಡಾ ಎದುರು ಜಯ ದಾಖಲಿಸಿದೆ.

ಟೂರ್ನಿಯ ಮೊದಲ ಪಂದ್ಯದಲ್ಲಿ 4–1 ಗೋಲುಗಳಲ್ಲಿ ಸ್ಕಾಟ್ಲೆಂಡ್‌ ವಿರುದ್ಧ ಗೆದ್ದು ವಿಶ್ವಾಸ ಹೆಚ್ಚಿಸಿಕೊಂಡಿದ್ದ ಭಾರತ ತಂಡಕ್ಕೆ ಕೆನಡಾ ಸುಲಭ ತುತ್ತಾಯಿತು. ಈ ಗೆಲುವಿನಿಂದ ಭಾರತದ ಕ್ವಾರ್ಟರ್‌ ಫೈನಲ್‌ ಪ್ರವೇಶ ಖಚಿತಗೊಂಡಿದೆ.

ಭಾರತ ಈ ಪಂದ್ಯದಲ್ಲಿ ಮೂರು ಫೀಲ್ಡ್‌ ಗೋಲುಗಳನ್ನು ದಾಖಲಿಸಿತು. ಎಸ್‌.ವಿ ಸುನಿಲ್ ಪಂದ್ಯದ ಐದನೇ ನಿಮಿಷದಲ್ಲಿ ಗೋಲಿನ ಆರಂಭ ನೀಡಿದರು. ಆಕಾಶ್‌ ದೀಪ್ ಸಿಂಗ್‌ ಹಾಗೂ ಸರ್ದಾರ್‌ ಸಿಂಗ್‌ 10 ಮತ್ತು 18ನೇ ನಿಮಿಷದಲ್ಲಿ ಮೂರು ಗೋಲುಗಳ ಮುನ್ನಡೆಗೆ ಕಾರಣರಾದರು.

ಪಂದ್ಯದ ಮೊದಲ ನಿಮಿಷದಲ್ಲೇ ಭಾರತ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿತ್ತು. ಆದರೆ ಹರ್ಮನ್‌ಪ್ರೀತ್ ಅವರ ಪ್ರಯತ್ನಕ್ಕೆ ಯಶಸ್ಸು ಸಿಗಲಿಲ್ಲ.
ಎರಡು ನಿಮಿಷದ ಬಳಿಕ ರಮಣದೀಪ್ ಸಿಂಗ್‌ ಚೆಂಡನ್ನು ಗೋಲು ಪೆಟ್ಟಿಗೆಯೊಳಕ್ಕೆ ನುಗ್ಗಿಸಲು ಮುಂದಾ ದರು. ಆದರೆ ಕೆನಡಾದ ಗೋಲ್‌ಕೀಪರ್‌ ಡೇವಿಡ್‌ ಕಾರ್ಟರ್‌ ಅಮೋಘವಾಗಿ ತಡೆದರು.

ಸುನಿಲ್‌ 5ನೇ ನಿಮಿಷದಲ್ಲಿ ಸುಲಭ ಗೋಲು ಗಳಿಸಿದರು. 10ನೇ ನಿಮಿಷದಲ್ಲಿ ರಮಣ್‌ದೀಪ್ ನೀಡಿದ ಪಾಸ್‌ನಲ್ಲಿ ಆಕಾಶ್‌ ಚೆಂಡನ್ನು ಗುರಿ ಸೇರಿಸಿದರು.
ಎರಡನೇ ಕ್ವಾರ್ಟರ್‌ನಲ್ಲಿ 18ನೇ ನಿಮಿಷದಲ್ಲಿ ಕೂಡ ರಮಣ್‌ದೀಪ್ ತಮ್ಮ ಅಮೋಘ ಆಟವನ್ನು ಮುಂದುವರಿಸಿ ದರು. ಅಲ್ಲದೇ ಅತ್ಯುತ್ತಮ ಪಾಸ್ ನೀಡಿ ದರು. ಇದನ್ನು ಬಳಸಿಕೊಂಡ ಸರ್ದಾರ್‌ ಗೋಲು ದಾಖಲಿಸಿ ಮಿಂಚಿದರು.

25ನೇ ನಿಮಿಷದಲ್ಲಿ ಭಾರತ ಎರಡನೇ ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿತು. ಜಸ್ಜೀತ್ ಸಿಂಗ್‌ ಅವರ ಪ್ರಯತ್ನದಲ್ಲಿ ಚೆಂಡು ಗೋಲು ಪೆಟ್ಟಿಗೆ ಸೇರಲಿಲ್ಲ. ಭಾರತ ಮೊದಲ ಕ್ವಾರ್ಟರ್‌ ನಲ್ಲಿ ಮೂರು ಗೋಲುಗಳ ಮುನ್ನಡೆ ಗಿಟ್ಟಿಸಿತು.

ದ್ವಿತೀಯಾರ್ಧದ ಮೂರನೇ ನಿಮಿಷದಲ್ಲಿ ಕೆನಡಾ ಪೆನಾಲ್ಟಿ ಕಾರ್ನರ್‌ ಅವಕಾಶ ಪಡೆಯಿತು. ಆದರೆ ಭಾರತದ ಗೋಲ್‌ಕೀಪರ್‌ ಆಕಾಶ್‌ ಚಿಕ್ತೆ ಗೋಲು ತಡೆದರು.

ಆಕಾಶ್‌ ಪಂದ್ಯದಲ್ಲಿ ಮೂರು ಗೋಲುಗಳನ್ನು ಯಶಸ್ವಿಯಾಗಿ ತಡೆದರು. ಒಂದು ನಿಮಿಷದ ಅಂತರ ದಲ್ಲಿ ಭಾರತ ಮೂರನೇ ಪೆನಾಲ್ಟಿ ಕಾರ್ನರ್ ಪಡೆಯಿತು. ಮನ್‌ಪ್ರೀತ್ ಸಿಂಗ್ ಅವರ ಪ್ರಯತ್ನವನ್ನು ಕಾರ್ಟರ್‌ ಅಮೋಘವಾಗಿ ತಡೆದರು. ಆಕ್ರಮಣ ಕಾರಿಯಾಗಿ ಆಡಿದ ಭಾರತ ಬಳಿಕ ಇನ್ನೂ ಎರಡು ಪೆನಾಲ್ಟಿ ಕಾರ್ನರ್ ಪಡೆ ಯಿತು. ಆದರೆ ಯಶಸ್ಸು ಸಿಗಲಿಲ್ಲ.

‘ಭಾರತ ತಂಡ ಪಂದ್ಯ ಗೆದ್ದಿರ ಬಹುದು. ಆದರೆ ಪೆನಾಲ್ಟಿ ಕಾರ್ನರ್‌ ಗಳಲ್ಲಿ ಆಡಿದ ರೀತಿ ಚಿಂತೆಗೆ ಕಾರಣವಾಗಿದೆ’ ಎಂದು ಕೋಚ್ ರೋಲಂಟ್ ಓಲ್ಟಮಸ್ ಹೇಳಿದ್ದಾರೆ. ದಿನದ ಇನ್ನೊಂದು ಪಂದ್ಯದಲ್ಲಿ ಚೀನಾ 5–2 ಗೋಲುಗಳಲ್ಲಿ ಕೊರಿಯಾ ತಂಡವನ್ನು ಮಣಿಸಿತು.

ಇಂದು ಪಾಕ್‌ ವಿರುದ್ಧ ಪಂದ್ಯ
ಹಾಕಿ ಲೀಗ್‌ನಲ್ಲಿ ಭಾರತ ತಂಡದ ಭಾನುವಾರ ಪಾಕಿಸ್ತಾನವನ್ನು ಎದುರಿಸಲಿದೆ. ಎರಡು ಪಂದ್ಯಗಳನ್ನು ಗೆದ್ದು ಬೀಗುತ್ತಿರುವ ಭಾರತ ಎರಡೂ ಪಂದ್ಯಗಳಲ್ಲಿ ಸೋಲುಂಡಿರುವ ಪಾಕಿಸ್ತಾನದ ಸವಾಲನ್ನು ಸುಲಭವಾಗಿ ಮೆಟ್ಟಿನಿಲ್ಲುವ ಭರವಸೆಯಲ್ಲಿದೆ. ಪಾಕಿಸ್ತಾನ ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ 4–0 ಗೋಲುಗಳ ಸೋಲು ಕಂಡಿದ್ದರೆ, ನಂತರದ ಪಂದ್ಯದಲ್ಲಿ ಕೆನಡಾ 6–0 ಗೋಲುಗಳಿಂದ ಪಾಕಿಸ್ತಾನವನ್ನು ಪರಾಭವಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT