‘ಅಗ್ರಿ ಎಕ್ಸ್‌ಫರ್ಟ್‌ ಸಿಸ್ಟಂ ಆ್ಯಪ್‌ ಅಭಿವೃದ್ಧಿ’

7

‘ಅಗ್ರಿ ಎಕ್ಸ್‌ಫರ್ಟ್‌ ಸಿಸ್ಟಂ ಆ್ಯಪ್‌ ಅಭಿವೃದ್ಧಿ’

Published:
Updated:
‘ಅಗ್ರಿ ಎಕ್ಸ್‌ಫರ್ಟ್‌ ಸಿಸ್ಟಂ ಆ್ಯಪ್‌ ಅಭಿವೃದ್ಧಿ’

ಬೆಂಗಳೂರು: ‘ಬೆಳೆಗಳಲ್ಲಿ ಕಾಣಿಸಿಕೊಳ್ಳುವ ರೋಗಗಳಿಗೆ ಸುಲಭವಾಗಿ ಪರಿಹಾರ ಸೂಚಿಸಲು ಅಗ್ರಿ ಎಕ್ಸ್‌ಫರ್ಟ್‌ ಸಿಸ್ಟಂ ಎಂಬ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ’ ಎಂದು ಕೃಷಿ ವಿಶ್ವವಿದ್ಯಾಲಯದ ಸಸ್ಯರೋಗಶಾಸ್ತ್ರ ವಿಭಾಗದ ವಿಜ್ಞಾನಿ ಸಿ.ಪಿ.ಮಂಜುಳಾ ತಿಳಿಸಿದರು.ಕೃಷಿ ಇಲಾಖೆ ವತಿಯಿಂದ ಚಿಕ್ಕಜಾಲ ಗ್ರಾಮದಲ್ಲಿ ಆಯೋಜಿಸಿದ್ದ ‘ಕೃಷಿ ಅಭಿಯಾನ’ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.‘ರೈತರು ಹೆಸರು ನೋಂದಾಯಿಸಿಕೊಳ್ಳಬೇಕು. ಬೆಳೆಗೆ ರೋಗ ಬಂದಾಗ ಅದರ ಚಿತ್ರಗಳನ್ನು ತೆಗೆದು ಆ್ಯಪ್‌ ಮೂಲಕ ಕಳುಹಿಸಬಹುದು. ವಿಜ್ಞಾನಿಗಳು ಅದನ್ನು ಪರಿಶೀಲಿಸಿ, ರೋಗ ಹತೋಟಿಗೆ ಕೈಗೊಳ್ಳಬೇಕಾದ ಕ್ರಮಗಳನ್ನು ತಿಳಿಸುತ್ತಾರೆ’ ಎಂದು ಹೇಳಿದರು.ಸಿರಿಧಾನ್ಯಗಳ ಪ್ರದರ್ಶನದ ಜೊತೆಗೆ ಬಿತ್ತನೆ ಬೀಜ, ಉತ್ಪಾದನೆ ಮತ್ತು ಮಾರಾಟದ ಬಗ್ಗೆ ತಜ್ಞರು ಮಾಹಿತಿ ನೀಡಿದರು.ಸೌಲಭ್ಯಗಳ ವಿತರಣೆ: ಕೃಷಿಭಾಗ್ಯ ಯೋಜನೆಯಡಿ ಕೃಷಿಹೊಂಡ ನಿರ್ಮಾಣ ಮಾಡಲು ರೈತರಿಗೆ ಸಹಾಯಧನ, ಸಾವಯವ ಭಾಗ್ಯ ಯೋಜನೆಯಡಿ ವಿವಿಧ ಘಟಕಗಳನ್ನು ನಿರ್ಮಾಣ ಮಾಡಿದ ಫಲಾನುಭವಿಗಳಿಗೆ ಸಹಾಯಧನ, ಪಾರಂಪರಿಕ ಕೃಷಿ ವಿಕಾಸ ಯೋಜನೆಯಡಿ ಸಾವಯವ ಕೃಷಿಯನ್ನು ಉತ್ತೇಜಿಸಲು ಟ್ರೈಕೋಡರ್ಮಾ ಜೈವಿಕ ಗೊಬ್ಬರ ಮತ್ತು ಹಸಿರೆಲೆ ಗೊಬ್ಬರದ ಬೀಜಗಳು ಹಾಗೂ ಸಸಿಗಳನ್ನು ವಿತರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry