ಕ್ರಿಕೆಟ್‌ ಜ್ವರ: ಭಾರತ ಗೆಲುವಿಗೆ ಪೂಜೆ, ಪ್ರಾರ್ಥನೆ, ಯೋಧರ ಡ್ಯಾನ್ಸ್ ಸಂಭ್ರಮ

7

ಕ್ರಿಕೆಟ್‌ ಜ್ವರ: ಭಾರತ ಗೆಲುವಿಗೆ ಪೂಜೆ, ಪ್ರಾರ್ಥನೆ, ಯೋಧರ ಡ್ಯಾನ್ಸ್ ಸಂಭ್ರಮ

Published:
Updated:
ಕ್ರಿಕೆಟ್‌ ಜ್ವರ: ಭಾರತ ಗೆಲುವಿಗೆ ಪೂಜೆ, ಪ್ರಾರ್ಥನೆ, ಯೋಧರ ಡ್ಯಾನ್ಸ್ ಸಂಭ್ರಮ

ಬೆಂಗಳೂರು: ಕ್ರಿಕೆಟ್‌ ಅಭಿಮಾನಿಗಳಲ್ಲಿ ಕತೂಹಲ ಕೆರಳಿಸಿರುವ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಭಾರತ–ಪಾಕಿಸ್ತಾನ ನಡುವಿನ ಫೈನಲ್ ಪಂದ್ಯದಲ್ಲಿ ಭಾರತ ಚಾಂಪಿಯನ್‌ ಆಗಿ ಹೊರ ಹೊಮ್ಮಲಿ ಎಂಬುದು ಎಲ್ಲ ಭಾರತೀಯರ ಹಂಬಲ.

ಭಾನುವಾರ ಕೆನಿಂಗ್ಟನ್ ಓವಲ್‌ನಲ್ಲಿ ನಡೆಯಲಿರುವ ಫೈನಲ್‌ ಹಣಾಹಣಿಯಲ್ಲಿ ಭಾರತ ವಿಜಯಶಾಲಿಯಾಗಲಿ ಎಂದು ಅಭಿಮಾನಿಗಳು ಪೂಜೆ ಪ್ರಾರ್ಥನೆಯಲ್ಲಿ ತೊಡಗಿದ್ದಾರೆ. ಮತ್ತೊಂದೆಡೆ ಯೋಧರು ಭಾರತ ಗೆದ್ದುಬರಲಿ ಎಂದು ಹರ್ಷ ವ್ಯಕ್ತಪಡಿಸಿ ಡ್ಯಾನ್ಸ್‌ ಕೂಡಾ ಮಾಡಿದ್ದಾರೆ.

ವಾರಣಾಸಿಯಲ್ಲಿ ಕ್ರಿಕೆಟ್‌ ಅಭಿಮಾನಿಗಳು ಭಾರತ ಗೆಲುವು ಸಾಧಿಸಲಿ ಎಂದು ಪೂಜೆ ಸಲ್ಲಿಸಿ ಪ್ರಾರ್ಥನೆ ನೆರವೇರಿಸಿದ್ದಾರೆ.

ಜಮ್ಮು ಕಾಶ್ಮೀರದ ಗಡಿಯ ಆರ್‌ಎಸ್‌ ಪುರದಲ್ಲಿ ಯೋಧರು ಭಾರತ ವಿಜಯಶಾಲಿಯಾಗಲಿ ಎಂದು ಹರ್ಷ ವ್ಯಕ್ತಪಡಿಸಿ ನೃತ್ಯ ಮಾಡಿ ಸಂಭ್ರಮಿಸುತ್ತಿದ್ದಾರೆ.

ಹಾಲಿ ಚಾಂಪಿಯನ್ ಭಾರತ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಶ್ರಮಿಸಿದರೆ, ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಮೊದಲ ಬಾರಿ ಪ್ರಶಸ್ತಿ ಸುತ್ತು ಪ್ರವೇಶಿಸಿರುವ ಪಾಕಿಸ್ತಾನ ಚೊಚ್ಚಲ ಅವಕಾಶವನ್ನು ಸ್ಮರಣೀಯವಾಗಿಸಲು ಪ್ರಯತ್ನಿಸಲಿದೆ.
ಪಂದ್ಯ ಆರಂಭ: ಸಂಜೆ 3 (ಭಾರತೀಯ ಕಾಲಮಾನ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry