ಕೆನಿಂಗ್ಟನ್ ಓವಲ್‌ ‘ಅಖಾಡ’ಕ್ಕೆ ಬಂದ ಕೊಹ್ಲಿ ಸೇನೆ...

7

ಕೆನಿಂಗ್ಟನ್ ಓವಲ್‌ ‘ಅಖಾಡ’ಕ್ಕೆ ಬಂದ ಕೊಹ್ಲಿ ಸೇನೆ...

Published:
Updated:
ಕೆನಿಂಗ್ಟನ್ ಓವಲ್‌ ‘ಅಖಾಡ’ಕ್ಕೆ ಬಂದ ಕೊಹ್ಲಿ ಸೇನೆ...

ಲಂಡನ್‌: ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿರುವ ಉಭಯ ತಂಡಗಳ ಹಣಾಹಣಿಗೆ ಕ್ಷಣಗಣನೆ ಆರಂಭವಾಗಿದ್ದು, ರೋಚಕ ಆಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕ್ಷಣಗಣನೆ ಆರಂಭಿಸಿದ್ದಾರೆ.

ಅಭಿಮಾನಿಗಳು ಧ್ವಜ ಹಿಡಿದು, ಮುಖಕ್ಕೆ ತ್ರಿವರ್ಣ ಹಚ್ಚಿಕೊಂಡು ಅಭಿಮಾನ ಮೆರೆಯುತ್ತಿರುವುದು ಒಂದಡೆಯಾದರೆ.  ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಭಾರತ–ಪಾಕಿಸ್ತಾನ ನಡುವಿನ ಫೈನಲ್ ಪಂದ್ಯದ ಅಖಾಡಕ್ಕೆ(ಕೆನಿಂಗ್ಟನ್ ಓವಲ್‌)  ಭಾರತದ ತಂಡದ ಆಟಗಾರರು ಆಗಮಿಸಿದ್ದಾರೆ.

ನಾಯಕ ವಿರಾಟ್‌ ಕೋಹ್ಲಿ ನೇತೃತ್ವದಲ್ಲಿ ಶಿಖರ್ ಧವನ್‌, ರೋಹಿತ್ ಶರ್ಮಾ, ಯುವರಾಜ್ ಸಿಂಗ್‌, ಎಂ.ಎಸ್‌.ದೋನಿ (ವಿಕೆಟ್ ಕೀಪರ್‌), ಕೇದಾರ್ ಜಾಧವ್‌, ಹಾರ್ದಿಕ್‌ ಪಾಂಡ್ಯ, ರವಿಚಂದ್ರನ್ ಅಶ್ವಿನ್‌, ರವೀಂದ್ರ ಜಡೇಜ, ಜಸ್‌ಪ್ರೀತ್‌ ಬೂಮ್ರಾ, ಭುವನೇಶ್ವರ್‌ ಕುಮಾರ್‌, ದಿನೇಶ್‌ ಕಾರ್ತಿಕ್‌, ಮಹಮ್ಮದ್ ಶಮಿ, ಅಜಿಂಕ್ಯ ರಹಾನೆ, ಉಮೇಶ್ ಯಾದವ್‌ ಅವರನ್ನೊಳಗೊಂಡ ತಂಡ ಮೈದಾನಕ್ಕೆ ಪ್ರವೇಶಿಸಿತು. ಅಭಿಮಾನಿಗಳು ಹರ್ಷೋದ್ಘಾರದೊಂದಿಗೆ ಸ್ವಾಗತ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry