ಪಾಕ್‌ ವಿರುದ್ಧ ಟಾಸ್‌ ಗೆದ್ದ ಭಾರತ ಬೌಲಿಂಗ್‌ ಆಯ್ಕೆ

7
ಚಾಂಪಿಯನ್ಸ್‌ ಟ್ರೋಫಿ

ಪಾಕ್‌ ವಿರುದ್ಧ ಟಾಸ್‌ ಗೆದ್ದ ಭಾರತ ಬೌಲಿಂಗ್‌ ಆಯ್ಕೆ

Published:
Updated:
ಪಾಕ್‌ ವಿರುದ್ಧ ಟಾಸ್‌ ಗೆದ್ದ ಭಾರತ ಬೌಲಿಂಗ್‌ ಆಯ್ಕೆ

ಲಂಡನ್‌: ರೋಮಾಂಚಕ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದೆ. ಕ್ರಿಕೆಟ್‌ ಅಭಿಮಾನಿಗಳ ನಿರೀಕ್ಷೆ ಗರಿಗೆದರಿದೆ. ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿಯ ಭಾರತ–ಪಾಕಿಸ್ತಾನ ನಡುವಿನ ಫೈನಲ್ ಪಂದ್ಯ ಭಾನುವಾರ ಇಲ್ಲಿನ ಕೆನಿಂಗ್ಟನ್ ಓವಲ್‌ನಲ್ಲಿ ನಡೆಯಲಿದೆ.

ಪಾಕ್‌ ವಿರುದ್ಧ ಟಾಸ್‌ ಗೆದ್ದ ಭಾರತ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. 

ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿರುವ ಉಭಯ ತಂಡಗಳ ಹಣಾಹಣಿಯ ಫಲಿತಾಂಶಕ್ಕಾಗಿ ಕ್ರಿಕೆಟ್‌ ಜಗತ್ತು ಕಾತರಗೊಂಡಿದೆ. ಹಾಲಿ ಚಾಂಪಿಯನ್ ಭಾರತ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಶ್ರಮಿಸಿದರೆ, ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಮೊದಲ ಬಾರಿ ಪ್ರಶಸ್ತಿ ಸುತ್ತು ಪ್ರವೇಶಿಸಿರುವ ಪಾಕಿಸ್ತಾನ ಚೊಚ್ಚಲ ಅವಕಾಶವನ್ನು ಸ್ಮರಣೀಯವಾಗಿಸಲು ಪ್ರಯತ್ನಿಸಲಿದೆ.

ತಂಡಗಳು ಇಂತಿವೆ

ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್‌, ರೋಹಿತ್ ಶರ್ಮಾ, ಯುವರಾಜ್ ಸಿಂಗ್‌, ಎಂ.ಎಸ್‌.ದೋನಿ (ವಿಕೆಟ್ ಕೀಪರ್‌), ಕೇದಾರ್ ಜಾಧವ್‌, ಹಾರ್ದಿಕ್‌ ಪಾಂಡ್ಯ, ರವಿಚಂದ್ರನ್ ಅಶ್ವಿನ್‌, ರವೀಂದ್ರ ಜಡೇಜ, ಜಸ್‌ಪ್ರೀತ್‌ ಬೂಮ್ರಾ, ಭುವನೇಶ್ವರ್‌ ಕುಮಾರ್‌, ದಿನೇಶ್‌ ಕಾರ್ತಿಕ್‌, ಮಹಮ್ಮದ್ ಶಮಿ, ಅಜಿಂಕ್ಯ ರಹಾನೆ, ಉಮೇಶ್ ಯಾದವ್‌.

ಪಾಕಿಸ್ತಾನ: ಸರ್ಫರಾಜ್ ಅಹಮ್ಮದ್‌ (ನಾಯಕ), ಅಹಮ್ಮದ್‌ ಶಹಜಾದ್‌, ಅಜರ್‌ ಅಲಿ, ಬಾಬರ್ ಆಜಮ್‌, ಮಹಮ್ಮದ್ ಹಫೀಜ್‌, ಶೊಯೆಬ್‌ ಮಲಿಕ್‌, ಹಸನ್ ಅಲಿ, ಮಹಮ್ಮದ್ ಅಮೀರ್‌, ರುಮನ್‌ ರಯೀಸ್‌, ಜುನೈದ್ ಖಾನ್‌, ಐಮದ್ ವಾಸಿಮ್‌, ಫಾಹಿಮ್ ಅಶ್ರಫ್‌, ಶಾದಬ್ ಖಾನ್‌, ಫಕರ್ ಜಮನ್‌, ಹ್ಯಾರಿಸ್ ಸೊಹೈಲ್‌.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry