ಹೋಟೆಲ್‌ ‘ಸಮಾಧಿ’!

7

ಹೋಟೆಲ್‌ ‘ಸಮಾಧಿ’!

Published:
Updated:
ಹೋಟೆಲ್‌ ‘ಸಮಾಧಿ’!

ಈ ಹೋಟೆಲ್‌ ಒಳಗಡೆ ಸಾಲು ಸಾಲು ಸಮಾಧಿಗಳಿವೆ. ಗ್ರಾಹಕರು ಅದರ ಪಕ್ಕದಲ್ಲೇ ಇರುವ ಟೇಬಲ್‌ನಲ್ಲಿ ಕುಳಿತು, ಯಾವುದೇ ಭಯವಿಲ್ಲದೇ ಕಾಫಿ, ತಿಂಡಿ ಸವಿದು ತೆರಳುತ್ತಾರೆ.

ಅಹಮದಾಬಾದ್‌ನಲ್ಲಿನ ‘ನ್ಯೂ ಲಕ್ಕಿ’ ಎಂಬ ರೆಸ್ಟೊರೆಂಟ್‌ನ ಒಳಗಡೆ 10ಕ್ಕೂ ಹೆಚ್ಚು ಸಮಾಧಿಗಳಿವೆ. ಹಸಿರು ಬಟ್ಟೆ ಹೊದ್ದ ಈ ಸಮಾಧಿ ಸುತ್ತ ಕಬ್ಬಿಣದ ಸರಳುಗಳಿಂದ ಬೇಲಿ ಹಾಕಲಾಗಿದೆ. ಹೋಟೆಲ್‌ ಮಾಲೀಕರಾದ  ಕೃಷ್ಣನ್‌ ಕುಟ್ಟಿ ಅವರು ಆ ಜಾಗದಲ್ಲಿದ್ದ ಸಮಾಧಿಯನ್ನು ಹಾಗೇ ಉಳಿಸಿಕೊಂಡು ಹೋಟೆಲ್‌ ಕಟ್ಟಿಸಿದರು.

ಈ ಮೂಲಕ ಗ್ರಾಹಕರಿಗೆ ವಿಭಿನ್ನ ಅನುಭವ ಕಟ್ಟಿಕೊಡುವುದು ಅವರ ಉದ್ದೇಶ.  ಈ ಸಮಾಧಿಗಳು 16ನೇ ಶತಮಾನದ ಸೂಫಿ ಸಂತರದ್ದು ಎನ್ನಲಾಗಿದೆ. ಈ ಹೋಟೆಲ್‌ ಆರಂಭ ಆದಾಗಿನಿಂದಲೂ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ ಎಂದು ಮಾಲೀಕ ಹೇಳಿಕೊಂಡಿದ್ದಾರೆ.

*ಈ ಹೋಟೆಲ್‌ಗೆ ಹೋದರೆ ಕೈಗೆ ಕೋಳ ಹಾಕ್ತಾರೆ!

ಈ ಹೋಟೆಲ್‌ನಲ್ಲಿ ಊಟ, ತಿಂಡಿ ಎಲ್ಲಾ ಸಖತ್ತಾಗಿರುತ್ತದಂತೆ. ಆದರೆ ಅಲ್ಲಿ ಹೋದರೆ ಕೈಗೆ ಕೋಳ ಜಡಿದು ಕಂಬಿ ಹಿಂದೆ ಕೂರಿಸುತ್ತಾರೆ. ಆಮೇಲೆ ‘ಕೈದಿ’ಗಳು ಕೇಳಿದ ಊಟ, ಉಪಾಹಾರವನ್ನು ತಂದುಕೊಡುತ್ತಾರೆ. ಜಪಾನ್‌ನ ಟೋಕಿಯೊದ ಹೋಟೆಲ್‌ವೊಂದು ಗ್ರಾಹಕರಿಗೆ ಬೇರೆಲ್ಲೂ ಸಿಗದ ವಿಭಿನ್ನ ‘ಅನುಭವ’ವನ್ನು ಕೊಡಲು ಕಂಡುಕೊಂಡ ಉಪಾಯವಿದು!

ಗ್ರಾಹಕರು ಹೋಟೆಲ್‌ ಒಳಗಡೆ ಕಾಲಿಟ್ಟೊಡನೆ ಅವರ ಕೈಗೆ ಕೋಳ ತೊಡಿಸಿ ಜೈಲು ಕಂಬಿಯ ಹಿಂದೆ ಕೂರಿಸಲಾಗುತ್ತದೆ. ಬಂದ ಗ್ರಾಹಕರನ್ನು ಕಂಬಿಯ ಹಿಂದೆ ಕೈದಿಗಳಂತೆ ಕೂರಿಸಿ ಮೆನು ನೀಡಲಾಗುತ್ತದೆ. ಗ್ರಾಹಕರು ತಮಗೆ ಬೇಕಾದ ಆಹಾರವನ್ನು ಆಯ್ಕೆ ಮಾಡಿಕೊಂಡು ಕೋಳ ತೊಟ್ಟುಕೊಂಡೇ ತಿನ್ನಬೇಕು.

*ಕಮೋಡ್‌ನಂತಹ ಕುರ್ಚಿ

ಊಟ ಮಾಡುವಾಗ ಟಾಯ್ಲೆಟ್‌ಎಂಬ ಪದ ಕೇಳಿದರೇ ಎದ್ದು ಹೋಗುವವರಿದ್ದಾರೆ. ಆದರೆ ತೈವಾನ್‌ನ ತೈಪೆಯಲ್ಲಿ  ರೆಸ್ಟೊರೆಂಟ್‌ ಒಂದರಲ್ಲಿ ಕುರ್ಚಿಗಳು ಆಧುನಿಕ ಕಮೋಡ್‌ ಆಕೃತಿಯಲ್ಲಿವೆ. ಗ್ರಾಹಕರು ಇದರಲ್ಲೇ ಕುಳಿತುಕೊಂಡು ಆಹಾರವನ್ನು ಸವಿಯುತ್ತಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry