ಕಿದಂಬಿ ಶ್ರೀಕಾಂತ್‌ಗೆ ಇಂಡೊನೇಷ್ಯಾ ಸೂಪರ್ ಸೀರಿಸ್ ಪ್ರೀಮಿಯರ್ ಕಿರೀಟ

7

ಕಿದಂಬಿ ಶ್ರೀಕಾಂತ್‌ಗೆ ಇಂಡೊನೇಷ್ಯಾ ಸೂಪರ್ ಸೀರಿಸ್ ಪ್ರೀಮಿಯರ್ ಕಿರೀಟ

Published:
Updated:
ಕಿದಂಬಿ ಶ್ರೀಕಾಂತ್‌ಗೆ ಇಂಡೊನೇಷ್ಯಾ ಸೂಪರ್ ಸೀರಿಸ್ ಪ್ರೀಮಿಯರ್ ಕಿರೀಟ

ಜಕಾರ್ತ: ಭಾರತದ ಭರವಸೆಯ ಆಟಗಾರ ಕಿದಂಬಿ ಶ್ರೀಕಾಂತ್ ಇಂಡೊನೇಷ್ಯಾ ಸೂಪರ್ ಸೀರಿಸ್ ಪ್ರೀಮಿಯರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರ ಹೊಮ್ಮಿದರು.

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ 24 ವರ್ಷ ವಯಸ್ಸಿನ ಭಾರತದ ಆಟಗಾರ ಶ್ರೀಕಾಂತ್‌ ಜಪಾನ್‌ನ ಕಜು ಮಸಾ ಸಕೈ ಅವರ ವಿರುದ್ಧ ಗೆಲುವು ಸಾಧಿಸಿ ಚಾಂಪಿಯನ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಅತ್ಯಂತ ಕುತೂಹಲದ ಪಂದ್ಯದಲ್ಲಿ ಅಮೋಘ ಸಾಮರ್ಥ್ಯದಿಂದ ಆಡಿದ ವಿಶ್ವದ 22ನೇ ಶ್ರೇಯಾಂಕದ ಶ್ರೀಕಾಂತ್‌ ಅವರು 37 ನಿಮಿಷಗಳ ಹೋರಾಟದಲ್ಲಿ ಕಜು ಮಸಾ ಸಕೈ ಅವರ ವಿರುದ್ಧ 21–11, 21–19ರಲ್ಲಿ ಜಯ ಸಾಧಿಸಿದರು.

ಶ್ರೀಕಾಂತ್‌ ಅವರಿಗೆ ಸಂದ ಎರಡನೇ ಸೂಪರ್ ಸೀರಿಸ್‌ ಪ್ರೀಮಿಯರ್‌ ಪ್ರಶಸ್ತಿ ಇದಾಗಿದೆ. 2014ರಲ್ಲಿ ಚೀನಾ ಓಪನ್‌ನಲ್ಲಿ ಸೂಪರ್ ಸೀರಿಸ್ ಪ್ರೀಮಿಯರ್‌ ಗೆಲುವು ಪಡೆದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry