‘ಯುದ್ಧ ಬಯಸುವವರನ್ನು ಗಡಿಗೆ ಕಳುಹಿಸಬೇಕು’ ಸಲ್ಮಾನ್ ಹೇಳಿಕೆಗೆ ಕಬೀರ್‌ ಖಾನ್‌ ಬೆಂಬಲ

7

‘ಯುದ್ಧ ಬಯಸುವವರನ್ನು ಗಡಿಗೆ ಕಳುಹಿಸಬೇಕು’ ಸಲ್ಮಾನ್ ಹೇಳಿಕೆಗೆ ಕಬೀರ್‌ ಖಾನ್‌ ಬೆಂಬಲ

Published:
Updated:
‘ಯುದ್ಧ ಬಯಸುವವರನ್ನು ಗಡಿಗೆ ಕಳುಹಿಸಬೇಕು’ ಸಲ್ಮಾನ್ ಹೇಳಿಕೆಗೆ ಕಬೀರ್‌ ಖಾನ್‌ ಬೆಂಬಲ

ಮುಂಬೈ: ಭಾರತ–ಪಾಕಿಸ್ತಾನದ ನಡುವಣ ಉದ್ವಿಗ್ನ ಸ್ಥಿತಿ ಶಮನಗೊಳಿಸಲು ಶಾಂತಿ ಮಾತುಕತೆಯೇ ಪರಿಹಾರ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿಪ್ರಾಯಪಟ್ಟಿದ್ದರು.

ತಮ್ಮ ಹೊಸ ಸಿನಿಮಾ ‘ಟ್ಯೂಬ್‌ಲೈಟ್’ ಪ್ರಚಾರಾರ್ಥ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯುದ್ಧಕ್ಕೆ ಬಯಸುವವರನ್ನು ಗಡಿಗೆ ಕಳುಹಿಸಬೇಕು. ಆಗ ಅವರ ಕೈಗಳು ನಡುಗಲಾರಂಭಿಸುತ್ತವೆ. ಒಂದೇ ದಿನದಲ್ಲಿ ಯುದ್ಧ ಕೊನೆಗೊಳ್ಳುತ್ತದೆ. ಯುದ್ಧವಾಗಬೇಕು ಎಂದವರು ಮೇಜಿನ ಸುತ್ತ ಮಾತುಕತೆಗೆ ಕುಳಿತುಕೊಳ್ಳುತ್ತಾರೆ’ ಎಂದು ಹೇಳಿದ್ದರು.

ಸಲ್ಮಾನ್‌ ಖಾನ್‌ ಹೇಳಿಕೆ ಕುರಿತು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕುರಿತು ‘ಟ್ಯೂಬ್‌ಲೈಟ್’ ನಿರ್ದೇಶಕ ಕಬೀರ್‌ ಖಾನ್‌ ಮಾತನಾಡಿ, ‘ಸಾರ್ವಜನಿಕರು ವದಂತಿಗಳಿಗೆ ಹೆಚ್ಚು ಮಹತ್ವ ನೀಡುತ್ತಾರೆ. ಒಂದು ವಿಚಾರದ ಬಗ್ಗೆ ಇತರರು ಏನಾದರೂ ಹೇಳಿದರೆ ಅದನ್ನು ವಿವೇಚನೆಯಿಂದ ಪರಿಶೀಲಿಸದೆ ಏಕಾಏಕಿ ಕಿರುಚಾಡುವುದು ಸರಿಯಲ್ಲ. ಅವರ ವಿಚಾರದಲ್ಲಿರುವ ಗಟ್ಟಿತನವನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳುವ ಮೂಲಕ ಸಲ್ಮಾನ್‌ ಖಾನ್‌ ಅವರ ಅಭಿಪ್ರಾಯ ಸರಿಯಾಗಿದೆ ಎಂದು ಬೆಂಬಲ ಸೂಚಿಸಿದ್ದಾರೆ.

‘ಟ್ಯೂಬ್‌ಲೈಟ್‌’ ಚಿತ್ರ ವಿಶ್ವದಾದ್ಯಂತ ಜೂನ್‌ 23 ರಂದು ಬಿಡುಗಡೆಯಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry