ರಿತೇಶ್‌ಗೆ ಮಗನ ಉಡುಗೊರೆ

7

ರಿತೇಶ್‌ಗೆ ಮಗನ ಉಡುಗೊರೆ

Published:
Updated:
ರಿತೇಶ್‌ಗೆ ಮಗನ ಉಡುಗೊರೆ

ಅಪ್ಪಂದಿರ ದಿನದ ನಿಮಿತ್ತ ಬಾಲಿವುಡ್ ನಟ ರಿತೇಶ್ ದೇಶ್‌ಮುಖ್‌ಗೆ ಮಗ ರಿಯಾನ್ ವಿಶಿಷ್ಟ ಉಡುಗೊರೆ ನೀಡಿದ್ದಾನೆ. ಬಣ್ಣದ ಗೆರೆಗಳಲ್ಲಿ ಅಪ್ಪನ ಚಿತ್ರ ಬಿಡಿಸಿರುವ ಗ್ರೀಟಿಂಗ್ ಕಾರ್ಡನ್ನು ಅಪ್ಪನಿಗೆ ರಿಯಾನ್ ಉಡುಗೊರೆಯಾಗಿ ಕೊಟ್ಟಿದ್ದಾನೆ.

ಮಗನ ಈ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ತಾಯಿ ಜೆನಿಲಿಯಾ ಡಿಸೋಜಾ ಮಕ್ಕಳ ಪರವಾಗಿ  ಪುಟ್ಟ ಬರಹವನ್ನೂ ಬರೆದಿದ್ದಾರೆ.

‘ಡಿಯರ್ ಬಾಬಾ, ನಾವಿನ್ನೂ  ಚಿಕ್ಕವರು. ಆದರೆ, ನಿಮ್ಮ ಕಣ್ಣುಗಳಲ್ಲಿ ನಮ್ಮೆಡೆಗಿರುವ ಅಪಾರ ಪ್ರೀತಿಯನ್ನು  ಗುರುತಿಸಬಲ್ಲೆವು. ಇಡೀ ಜಗತ್ತಿನಲ್ಲಿ ನಮ್ಮ ನೆಚ್ಚಿನ ತಾಣವೆಂದರೆ ನಿಮ್ಮ ತೋಳುಗಳ ಮೇಲೆ ಮಲಗುವುದು... ನಾವು ನಿಜಕ್ಕೂ ಅದೃಷ್ಟವಂತರು. ಐ ಲವ್  ಯೂ...’ ಎಂದು ಜೆನಿಲಿಯಾ ಮಕ್ಕಳ ಪರವಾಗಿ ಪತಿ ರಿತೇಶ್‌ಗೆ ಶುಭಾಶಯ ಕೋರಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry