ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದ ಮುಡಿಗೇರಿದ ಮಿನಿ ವಿಶ್ವಕಪ್: ಭಾರತಕ್ಕೆ ದಯನೀಯ ಸೋಲು

Last Updated 18 ಜೂನ್ 2017, 16:22 IST
ಅಕ್ಷರ ಗಾತ್ರ

ಲಂಡನ್‌: ಮಿನಿ ವಿಶ್ವಕಪ್ ಎಂದೇ ಕರೆಯಲಾಗುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಪಾಕಿಸ್ತಾನ ತಂಡವು 180 ರನ್‌ ಅಂತರದಿಂದ ಜಯ ಸಾಧಿಸಿದೆ.

ಭಾರತ ತಂಡವು 30.3 ಓವರ್‌ಗಳಲ್ಲಿ 158 ರನ್‌ ಗಳಿಸಿ ಆಲೌಟ್ ಆಯಿತು. ಪಾಕಿಸ್ತಾನ ತಂಡವು 50 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 338 ರನ್ ಗಳಿಸಿತ್ತು.

ಕೆನಿಂಗ್ಟನ್ ಓವಲ್‌ನಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಪಾಕಿಸ್ತಾನ ವಿರುದ್ಧ ಟಾಸ್‌ ಗೆದ್ದ ಭಾರತ ತಂಡ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತ್ತು.

ಫಕರ್‌ ಜಮನ್‌ ಶತಕ (114), ಹಾಗೂ ಅಜರ್‌ ಅಲಿ (59) ಅರ್ಧಶತಕದ ಉತ್ತಮ ಜತೆಯಾಟದ ನೆರವಿನಿಂದ ಪಾಕ್‌ 338 ರನ್‌ ಗಳಿಸಿತ್ತು. ಇದನ್ನು ಬೆನ್ನತ್ತಿದ ಭಾರತ ತಂಡಕ್ಕೆ ಆರಂಭದಲ್ಲೇ ಆಘಾತ ಕಾದಿತ್ತು.

ಆರಂಭಿಕ ಆಟಗಾರ ರೋಹಿತ್ ಶರ್ಮಾ (0), ಶಿಖರ್ ಧವನ್ (21), ವಿರಾಟ್ ಕೊಹ್ಲಿ (5)ಕ್ಕೆ ಔಟಾಗಿ ತಂಡ ಸಂಕಷ್ಟಕ್ಕೆ ಸಿಲುಕಿತು. ಯುವರಾಜ್ ಚೇತರಿಸುವ ಲಕ್ಷಣ ಕಂಡುಬಂದರೂ 22 ರನ್ ಗಳಿಸಿ ಆಡುತ್ತಿದ್ದ ಅವರು ಶಾದಬ್ ಖಾನ್‌ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಪಾಂಡ್ಯ ಅವರು 76 ರನ್ ಗಳಿಸಿದ್ದು ಬಿಟ್ಟರೆ ಉಳಿದಂತೆ ಮೂವರು ಆಟಗಾರು ಮಾತ್ರ ಎರಡಂಕೆ ತಲುಪಲು ಸಾಧ್ಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT