ಟೀಂ ಇಂಡಿಯಾ ಬಗ್ಗೆ ಸಾಮಾಜಿಕ ತಾಣದಲ್ಲಿ ಟ್ರೋಲ್ ಮಳೆ

7

ಟೀಂ ಇಂಡಿಯಾ ಬಗ್ಗೆ ಸಾಮಾಜಿಕ ತಾಣದಲ್ಲಿ ಟ್ರೋಲ್ ಮಳೆ

Published:
Updated:
ಟೀಂ ಇಂಡಿಯಾ ಬಗ್ಗೆ ಸಾಮಾಜಿಕ ತಾಣದಲ್ಲಿ ಟ್ರೋಲ್ ಮಳೆ

ಲಂಡನ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಪರಾಭವಗೊಂಡಿರುವ ಟೀಂ ಇಂಡಿಯಾ ಬಗ್ಗೆ ಸಾಮಾಜಿಕ ತಾಣದಲ್ಲಿ ಟ್ರೋಲ್ ಮಳೆಯಾಗಿದೆ.

ಭಾನುವಾರ ಲಂಡನ್‍ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಭಾರತವನ್ನು 180 ರನ್‌ಗಳಿಂದ ಪರಾಭವಗೊಳಿಸಿತ್ತು. ಚಾಂಪಿಯನ್ಸ್ ಟ್ರೋಫಿಯನ್ನು ಟೀಂ ಇಂಡಿಯಾ ಗೆದ್ದೇ  ಗೆಲ್ಲುತ್ತದೆ ಎಂದ ಭಾರಿ ನಿರೀಕ್ಷೆ ಭಾರತದ ಕ್ರಿಕೆಟ್ ಆಭಿಮಾನಿಗಳದ್ದಾಗಿತ್ತು. ಮೊದಲು ಬ್ಯಾಟಿಂಗ್‍ಗಿಳಿದ ಪಾಕ್ ಆರಂಭದಲ್ಲೇ ರಕ್ಷಣಾತ್ಮಕ ಆಟ ಆಡಿದ್ದು, ಭಾರತಕ್ಕೆ 339 ರನ್‍ಗಳ ಗುರಿ ನೀಡಿತ್ತು.

ಈ ಗುರಿಯನ್ನು ಬೆನ್ನಟ್ಟಲು ಹೊರಟ ಟೀಂ ಇಂಡಿಯಾದ ಪ್ರಮುಖ ದಾಂಡಿಗರು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್‍ಗೆ ಮರಳಿದಾಗ, ಭಾರತದ ಸ್ಕೋರ್ ಕೂಡಾ ಮಂದಗತಿಯಲ್ಲಿ ಸಾಗತೊಡಗಿತು.

ಉತ್ತಮ ಕ್ಷೇತ್ರ ರಕ್ಷಣೆ ಮತ್ತು ಬೌಲಿಂಗ್ ಪ್ರದರ್ಶಿಸಿದ ಪಾಕ್ ಆಟಗಾರರು ಭಾರತವನ್ನು 31 ನೇ ಓವರ್‍‍ನಲ್ಲಿ ಆಲೌಟ್ ಮಾಡಿ 180 ರನ್‍ಗಳ ಗೆಲುವು ಸಾಧಿಸುವಲ್ಲಿ ಸಫಲರಾದರು. 

ಟ್ವೀಟ್ ಪ್ರತಿಕ್ರಿಯೆಗಳು

ಲಂಡನ್‍ನ ಓವಲ್‍ನಲ್ಲಿ 11 ಮಂದಿ ಭಾರತೀಯರು ಸಿಲುಕಿಕೊಂಡಿದ್ದಾರೆ. ಮೇಡಂ ಸುಷ್ಮಾ ಸ್ವರಾಜ್ ಅವರೇ, ದಯವಿಟ್ಟು ಅವರನ್ನು ರಕ್ಷಿಸಿ

ಭಾರತಕ್ಕೆ ಮರಳುತ್ತಿರುವ ಟೀಂ ಇಂಡಿಯಾ ಆಟಗಾರರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry