ಸರಕುಗಳ ಬೆಲೆ ಇಳಿಕೆ ನಿರೀಕ್ಷೆ

7

ಸರಕುಗಳ ಬೆಲೆ ಇಳಿಕೆ ನಿರೀಕ್ಷೆ

Published:
Updated:
ಸರಕುಗಳ ಬೆಲೆ ಇಳಿಕೆ ನಿರೀಕ್ಷೆ

ಮುಂಬೈ: ಜುಲೈ 1ರಿಂದ ರಿಲಯನ್ಸ್‌ ರಿಟೇಲ್‌, ಫ್ಯೂಚರ್ ಗ್ರೂಪ್‌, ಟ್ರೆಂಟ್‌ ಹೈಪರ್ ಸಿಟಿ ಮತ್ತು ಡಿಮಾರ್ಟ್‌ನಂತಹ ದೊಡ್ಡ ಪ್ರಮಾಣದ ಸಂಘಟಿತ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ವಿವಿಧ ಸರಕುಗಳ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗುವ ನಿರೀಕ್ಷೆ ಇದೆ.

ಲಾಭದ ವಿಷಯದಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳದೆ,  ಸರಕುಗಳ ಮಾರಾಟವೂ ಇಳಿಕೆ ಕಾಣದಂತೆ ಬೆಲೆ ನಿರ್ಧರಿಸಲು ಚಿಲ್ಲರೆ ಮಾರಾಟ ಕಂಪೆನಿಗಳು ನಿರ್ಧರಿಸಿವೆ.

ತ್ವರಿತವಾಗಿ ಮಾರಾಟವಾಗುವ ಗ್ರಾಹಕ ಸರಕುಗಳನ್ನು ತಯಾರಿಸುವ (ಎಫ್‌ಎಂಸಿಜಿ) ಕಂಪೆನಿಗಳಿಗೆ ನೀಡುವ ಲಾಭದಲ್ಲಿ ಬದಲಾವಣೆ ಆಗದಂತೆ ನೋಡಿಕೊಳ್ಳಲಾಗುವುದು. ಜತೆಗೆ, ಗ್ರಾಹಕರಿಗೂ ಕಡಿಮೆ ಬೆಲೆಗೆ ಸರಕುಗಳನ್ನು ನೀಡುತ್ತೇವೆ ಎನ್ನುವುದು ದೊಡ್ಡ ಪ್ರಮಾಣದಲ್ಲಿ ವಹಿವಾಟು ನಡೆಸುವ ಚಿಲ್ಲರೆ ವರ್ತಕರ ಭರವಸೆಯಾಗಿದೆ.

‘ವಿವಿಧ ಗ್ರಾಹಕ ಬಳಕೆ ಸರಕುಗಳ ಬೆಲೆಯಲ್ಲಿ ಶೇ 2 ರಿಂದ ಶೇ 20ರವರೆಗೂ ಇಳಿಕೆ ಆಗಲಿದೆ’ ಎಂದು ಫ್ಯೂಚರ್ ಗ್ರೂಪ್‌ನ ಮುಖ್ಯ ಕಾರ್ಯಕಾರಿ ಅಧಿಕಾರಿ ಕಿಶೋರ್‌ ಬಿಯಾನಿ ತಿಳಿಸಿದ್ದಾರೆ.

ಭರದ ಸಿದ್ಧತೆ: ಜಿಎಸ್‌ಟಿಗಾಗಿ ಚಿಲ್ಲರೆ ವರ್ತಕರೂ ಭರದ ಸಿದ್ಧತೆ ನಡೆಸುತ್ತಿದ್ದಾರೆ.

‘ಜುಲೈ 1 ರಿಂದ ಜಿಎಸ್‌ಟಿ ಜಾರಿಯಾಗಲಿದೆ. ನಾವು ಅದಕ್ಕೆ ಸಿದ್ಧರಿರಬೇಕು. ಹೊಸ ವ್ಯವಸ್ಥೆಯಿಂದ ಇನ್ನೂ ಹೆಚ್ಚು ಸಂಘಟಿತ ರೂಪದಲ್ಲಿ ವ್ಯವಹಾರ ನಡೆಸಲು ಸಾಧ್ಯವಾಗಲಿದೆ’ ಎಂದು ರಿಲಯನ್ಸ್ ರಿಟೇಲ್‌ ಕಂಪೆನಿಯ ಮುಖ್ಯ ಹಣಕಾಸು ಅಧಿಕಾರಿ ಅಶ್ವಿನ್‌ ಖಾಸಗಿವಾಲಾ ಅವರು ಹೇಳಿದ್ದಾರೆ.

‘ತಯಾರಕರು ಬೆಲೆಯಲ್ಲಿ ವ್ಯತ್ಯಾಸ ಮಾಡಿದಾಗ ಅದರಿಂದ ಚಿಲ್ಲರೆ ವರ್ತಕರಿಗೆ ಬರುವ ಲಾಭ–ನಷ್ಟದಲ್ಲಿ ಬದಲಾವಣೆ ಆಗುತ್ತದೆ. ಅದನ್ನೇ ನಾವು ಗ್ರಾಹಕರಿಗೆ ವರ್ಗಾಯಿಸುತ್ತೇವೆ’ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry