ಪಾಕ್ ಗೆಲುವಿಗೆ ಕಾಶ್ಮೀರದಲ್ಲಿ ಸಂಭ್ರಮಾಚರಣೆ?

7

ಪಾಕ್ ಗೆಲುವಿಗೆ ಕಾಶ್ಮೀರದಲ್ಲಿ ಸಂಭ್ರಮಾಚರಣೆ?

Published:
Updated:
ಪಾಕ್ ಗೆಲುವಿಗೆ ಕಾಶ್ಮೀರದಲ್ಲಿ ಸಂಭ್ರಮಾಚರಣೆ?

ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಗೆಲುವಿಗೆ ಕಾಶ್ಮೀರದಲ್ಲಿ ಸಂಭ್ರಮಾಚರಣೆ ನಡೆದಿದೆ.

ಫೈನಲ್ ಪಂದ್ಯದಲ್ಲಿ ಭಾರತವನ್ನು 180 ರನ್‍ಗಳಿಂದ ಪರಾಭವಗೊಳಿಸಿ ಪಾಕ್ ಚಾಂಪಿಯನ್ಸ್ ಟ್ರೋಫಿ ಮುಡಿಗೇರಿಸುತ್ತಿದ್ದಂತೆ ಶ್ರೀನಗರ ಮತ್ತು ಭಾರತ ಅಧೀನದಲ್ಲಿರುವ ಕಾಶ್ಮೀರದಲ್ಲಿ ಸಂಭ್ರಮಾಚರಣೆ ನಡೆದಿದ್ದು, ಇದರ ವಿಡಿಯೊ ಟ್ವೀಟ್  ಮಾಡಲಾಗಿದೆ.

ಫ್ರಂಟ್‍ಲೈನ್ ಕಾಶ್ಮೀರ್ ಎಂಬ ಟ್ವಿಟರ್ ಖಾತೆಯಿಂದ ಈ ವಿಡಿಯೊ ಟ್ವೀಟ್ ಆಗಿದ್ದು, ಈದ್‍ಗೆ ಮುನ್ನವೇ ಈದ್ ಆಚರಣೆ ನಡೆದಿದೆ ಎಂಬ ಅಡಿಬರಹವನ್ನೂ ವಿಡಿಯೊಗೆ ನೀಡಲಾಗಿದೆ.

ಜನರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡುತ್ತಿರುವ ಕೆಲವೊಂದು ಚಿತ್ರಗಳೂ ಟ್ವೀಟ್ ಆಗಿವೆ.ಕಾಶ್ಮೀರದಲ್ಲಿ ಪಾಕ್ ಗೆಲುವಿಗೆ ಸಂಭ್ರಮಾಚರಣೆ ನಡೆಸುತ್ತಿರುವ ವಿಡಿಯೊಗಳು ಸಾಮಾಜಿಕ ತಾಣಗಳಲ್ಲಿ ಮಾತ್ರ ಹರಿದಾಡುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry