ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನಕ್ಕೆ ಅನುಷ್ಕಾ ಶರ್ಮಾಳನ್ನು ಟ್ರೋಲ್ ಮಾಡಿದ ನೆಟಿಜನ್‍ಗಳು!

7

ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನಕ್ಕೆ ಅನುಷ್ಕಾ ಶರ್ಮಾಳನ್ನು ಟ್ರೋಲ್ ಮಾಡಿದ ನೆಟಿಜನ್‍ಗಳು!

Published:
Updated:
ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನಕ್ಕೆ ಅನುಷ್ಕಾ ಶರ್ಮಾಳನ್ನು ಟ್ರೋಲ್ ಮಾಡಿದ ನೆಟಿಜನ್‍ಗಳು!

ಲಂಡನ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಟೀಕಾ ಪ್ರಹಾರಗಳಾಗುತ್ತಿದ್ದಂತೆಯೇ ಇತ್ತ ಟ್ವಿಟರ್‍‍ನಲ್ಲಿ ಕೊಹ್ಲಿ ಪ್ರೇಯಸಿ, ನಟಿ ಅನುಷ್ಕಾ ಶರ್ಮಾಳನ್ನು ಟ್ರೋಲ್‍ ಮಾಡಲಾಗಿದೆ.

ಪಾಕಿಸ್ತಾನದ ವಿರುದ್ಧ ಪರಾಭವಗೊಂಡಿರುವುದಕ್ಕೆ ಸಾಮಾಜಿಕ ತಾಣಗಳಲ್ಲಿ ಮೀಮ್, ಕಾರ್ಟೂನ್‍ ಮತ್ತು ವಿಡಿಯೊಗಳಿಂದ ಟೀಂ ಇಂಡಿಯಾವನ್ನು ನೆಟಿಜನ್‍ಗಳು ಟ್ರೋಲ್ ಮಾಡಿದರೆ, अनुष्का कही ಎಂಬ ಹ್ಯಾಶ್ ಟ್ಯಾಗ್ ಟ್ವಿಟರ್‍‍ನಲ್ಲಿ ಟ್ರೆಂಡ್ ಆಗಿದೆ.

ಭಾನುವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 5 ರನ್‍‍ಗಳನ್ನು ಗಳಿಸಿದ್ದರು. ವಿರಾಟ್ ಕೊಹ್ಲಿ ಬೇಗನೆ ಪೆವಿಲಿಯನ್ ಮರಳಿದ್ದನ್ನು ಲೇವಡಿ ಮಾಡಿದ ನೆಟಿಜನ್‍ಗಳು ಅನುಷ್ಕಾಳನ್ನು ಉಗ್ರರು ಸೆರೆ ಹಿಡಿದಿದ್ದಾರೆಯೇ? ಎಂದು ಪ್ರಶ್ನಿಸಿ अनुष्का कही ಎಂಬ ಹ್ಯಾಶ್‌ಟ್ಯಾಗ್ ಮೂಲಕ ಕುಹಕವಾಡಿದ್ದಾರೆ.

ಅದೇ ವೇಳೆ ಕೊಹ್ಲಿ ಕಳಪೆ ಪ್ರದರ್ಶನಕ್ಕೆ ಅನುಷ್ಕಾಳನ್ನು ಹೀಗೆಳೆಯುವ ಜನರ ವಿರುದ್ಧವೂ ಕೆಲವು ನೆಟಿಜನ್‍ಗಳು ಕಿಡಿಕಾರಿದ್ದಾರೆ.

ತಮ್ಮ ಹತಾಶೆಯಿಂದ ಹೊರಬರಲು ಭಾರತೀಯರು अनुष्का कही ಟ್ರೆಂಡ್ ಮಾಡುತ್ತಿದ್ದಾರೆ

ಈ ಹಿಂದೆ ವಿಶ್ವಕಪ್ ಪಂದ್ಯದ ವೇಳೆ ಅನುಷ್ಕಾ ಉಪಸ್ಥಿತರಿದ್ದ ಕಾರಣವೇ ಟೀಂ ಇಂಡಿಯಾ ಸೋತು ಹೋಯಿತು. ಅನುಷ್ಕಾ ಶರ್ಮಾಳ ಕಾಲ್ಗುಣ ಚೆನ್ನಾಗಿಲ್ಲ ಎಂಬ ಕುಹಕ ಮಾತುಗಳು ಕೇಳಿಬಂದಿದ್ದವು. ಟೀಂ ಇಂಡಿಯಾ ಪರಾಭವಕ್ಕೆ ಅನುಷ್ಕಾಳನ್ನು ಹೀಗೆಳೆದ ಜನರಿಗೆ ಕೊಹ್ಲಿ ಸಾಮಾಜಿಕ ತಾಣದಲ್ಲಿ ತಕ್ಕ ಉತ್ತರವನ್ನೂ ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry