ಶಂಕಿತ ಐಎಸ್‌ ಏಜೆಂಟ್ ಅರ್ಜಿ ತಿರಸ್ಕೃತ

7

ಶಂಕಿತ ಐಎಸ್‌ ಏಜೆಂಟ್ ಅರ್ಜಿ ತಿರಸ್ಕೃತ

Published:
Updated:
ಶಂಕಿತ ಐಎಸ್‌ ಏಜೆಂಟ್ ಅರ್ಜಿ ತಿರಸ್ಕೃತ

ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನ್ನ ವಿರುದ್ಧ ಸಲ್ಲಿಸಿದ್ದ ದಾಖಲೆ ಪರಿಶೀಲಿಸಲು ಅನುಮತಿ ನೀಡುವಂತೆ ಕೋರಿ ಐಎಸ್‌ ಉಗ್ರ ಸಂಘಟನೆಯ ಶಂಕಿತ ಏಜೆಂಟ್‌ ಮುಫ್ತಿ ಅಬ್ದುಸ್ ಸಮಿ ಖಾಸ್ಮಿ ಸಲ್ಲಿಸಿದ್ದ  ಅರ್ಜಿಯನ್ನು ದೆಹಲಿ ಹೈಕೋರ್ಟ್‌  ತಿರಸ್ಕರಿಸಿದೆ.

ಐಎಸ್‌ಗೆ ಹಣಕಾಸು ನೆರವು ಮತ್ತು ಯುವಕರ ನೇಮಕಾತಿ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿಯ ಇಸ್ಲಾಂ ಪಂಡಿತ ಖಾಸ್ಮಿ ವಿರುದ್ಧ  ಎನ್‌ಐಎ, ವಿಶೇಷ ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ದಾಖಲೆ ಸಲ್ಲಿಸಿತ್ತು.

ಪರಿಶೀಲನೆಗೆ ಈ ದಾಖಲೆ ನೀಡಲು ನಿರಾಕರಿಸಿದ್ದ ವಿಶೇಷ  ನ್ಯಾಯಾಲಯದ ಆದೇಶದ ವಿರುದ್ಧ  ಖಾಸ್ಮಿ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದ. ವಿಚಾರಣೆ ನಡೆಸಿದ ಹೈಕೋರ್ಟ್‌ ಖಾಸ್ಮಿ ಕೋರಿಕೆ ತಳ್ಳಿಹಾಕಿದ್ದು, ವಿಶೇಷ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ.

ಈ ಪ್ರಕರಣ  ದೊಡ್ಡ ಸಂಚಿಗೆ ಸಂಬಂಧಿಸಿದ್ದು ಇನ್ನೂ ವಿಚಾರಣೆ ನಡೆಯುತ್ತಿದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಆರೋಪಪಟ್ಟಿಯನ್ನೂ ಸಲ್ಲಿಸಲಾಗಿದೆ ಎಂದು ಹೈಕೋರ್ಟ್‌ ಹೇಳಿದೆ.

ಎನ್‌ಐಎ ಅಧಿಕಾರಿಗಳು ಖಾಸ್ಮಿಯನ್ನು 2016ರಲ್ಲಿ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯಲ್ಲಿ ಬಂಧಿಸಿದ್ದರು. ಇದೇ ಪ್ರಕರಣದ ಸಂಬಂಧ ಇತರ 18 ಶಂಕಿತರನ್ನು ದೇಶದ ವಿವಿಧೆಡೆ ಬಂಧಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry