ನದಿ ಜೋಡಣೆ: ರಜನಿ ಬೆಂಬಲ

7

ನದಿ ಜೋಡಣೆ: ರಜನಿ ಬೆಂಬಲ

Published:
Updated:
ನದಿ ಜೋಡಣೆ: ರಜನಿ ಬೆಂಬಲ

ಚೆನ್ನೈ: ಪಿ. ಅಯ್ಯಕನ್ನು ನೇತೃತ್ವದ 16 ರೈತರ ನಿಯೋಗವನ್ನು ಭಾನುವಾರ ಭೇಟಿ ಮಾಡಿದ ನಟ ರಜನಿಕಾಂತ್, ನದಿಗಳ ಜೋಡಣೆ ಮಾಡಬೇಕೆಂಬ ಅವರ ಮನವಿಯನ್ನು ಬೆಂಬಲಿಸುವುದಾಗಿ ಭರವಸೆ ನೀಡಿದ್ದಾರೆ.

‘ನದಿ ಜೋಡಣೆ ಸಂಬಂಧ ಆಸಕ್ತಿ ತೋರಿರುವ ರಜನಿಕಾಂತ್ ಅವರು, ಆರಂಭದಲ್ಲಿ ಮಹಾನದಿ, ಗೋದಾವರಿ, ಕೃಷ್ಣಾ, ಪಾಲಾರು ಮತ್ತು ಕಾವೇರಿ ನದಿಗಳ ಜೋಡಣೆ ಆಗಬೇಕು ಎಂದಿದ್ದಾರೆ’ ಎಂದು ನಟನ ಜೊತೆ ಭಾನುವಾರ ನಡೆದ ಭೇಟಿಯ ನಂತರ, ರಾಷ್ಟ್ರೀಯ ದಕ್ಷಿಣ ಭಾರತ ನದಿ ಜೋಡಣಾ ರೈತರ ಸಂಘದ ಅಧ್ಯಕ್ಷ ಅಯ್ಯಕನ್ನು ಹೇಳಿದ್ದಾರೆ.

ಕಳೆದ ವಾರವಷ್ಟೇ ತಮ್ಮ ಅಭಿಮಾನಿಗಳಿಗೆ, ‘ಯುದ್ಧಕ್ಕೆ ಸಿದ್ಧರಾಗಿ’ ಎಂದು ಕರೆ ನೀಡಿದ್ದ ನಟ, ಈಗ ರೈತರ ಮನವಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿವರಿಸಲು ಸಿದ್ಧರಾಗಿದ್ದಾರೆ. ಅದಕ್ಕಾಗಿ ₹ 1 ಕೋಟಿ ಮೀಸಲಿಟ್ಟಿದ್ದಾರೆ.

‘ಅವರು ನೇರವಾಗಿ ಪ್ರಧಾನಿಯವರನ್ನು ಭೇಟಿಯಾಗುವ ಕುರಿತು ಏನೂ ಹೇಳಲಿಲ್ಲ. ಆದರೆ ಅವರು ಕೊಡುತ್ತೇನೆ ಎಂದ ಹಣವನ್ನು ಯೋಜನೆಯ ಜಾರಿಗಾಗಿ ಪ್ರಧಾನಿ ಅವರಿಗೇ ಹಸ್ತಾಂತರಿಸಲು ಕೇಳಿಕೊಂಡಿದ್ದೇವೆ’ ಎಂದು ಅಯ್ಯಕನ್ನು ಹೇಳಿದ್ದಾರೆ.

ಕಾವೇರಿ ನದಿ ವಿಚಾರವಾಗಿ 2002ರಲ್ಲಿ ಉಪವಾಸ ಕೂತಿದ್ದ ರಜನಿಕಾಂತ್ ತಮ್ಮ ಧರಣಿಯ ನಂತರ, ಹಿಮಾಲಯದ ಮತ್ತು ಪರ್ಯಾಯ ದ್ವೀಪಗಳ ನದಿ ಜೋಡಣೆಗಾಗಿ ₹ 1 ಕೋಟಿ ನೀಡುವುದಾಗಿ ಹೇಳಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry