ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಅಂಗಳದಲ್ಲಿ ಸಿಹಿ; ಕ್ರಿಕೆಟ್‌ನಲ್ಲಿ ಕಹಿ

Last Updated 18 ಜೂನ್ 2017, 19:24 IST
ಅಕ್ಷರ ಗಾತ್ರ

ಲಂಡನ್: ಭಾನುವಾರ ರಾತ್ರಿ ಭಾರತದ ಕ್ರೀಡಾ ಪ್ರೇಮಿಗಳಿಗೆ ಸಿಹಿ ಮತ್ತು ಕಹಿಯ ಅನುಭವಗಳೆರಡೂ ಒಟ್ಟಿಗೇ ಲಭಿಸಿದವು.

ವಿಶ್ವ ಹಾಕಿ ಸೆಮಿಫೈನಲ್‌ ಲೀಗ್‌ ಟೂರ್ನಿಯ ಎಂಟರ ಘಟ್ಟದಲ್ಲಿ ಪಾಕಿಸ್ತಾನದ ವಿರುದ್ಧ ಗೆದ್ದ ಭಾರತ ಹಾಕಿ ತಂಡದ ಆಟಗಾರರು ಜಯದ ಸಿಹಿ ಉಣಿಸಿದರು. ಆದರೆ, ಚಾಂಪಿಯನ್ಸ್‌ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಬಳಗವು ಕೋಟಿ ಕೋಟಿ ಅಭಿಮಾನಿಗಳಿಗೆ ಸೋಲಿನ ಕಹಿ ನೀಡಿತು.

ಹಾಕಿಯಲ್ಲಿ ಸಂಭ್ರಮ
ಟೆನಿಸ್ ಸೆಂಟರ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡ್ರ್ಯಾಗ್‌ಫ್ಲಿಕರ್ ಹರ್ಮನ್‌ಪ್ರೀತ್ ಸಿಂಗ್, ತಲ್ವಿಂದರ್ ಸಿಂಗ್ ಮತ್ತು ಆಕಾಶ್‌ ದೀಪ್ ಸಿಂಗ್ ಅವರು ಗಳಿಸಿದ ತಲಾ ಎರಡು ಗೋಲುಗಳ ಬಲದಿಂದ ಭಾರತ ತಂಡವು 7–1ರಿಂದ ಪಾಕಿಸ್ತಾನ ತಂಡವನ್ನು ಮಣಿಸಿತು.

*

ಗೋಲು ವಿವರ

7- ಭಾರತ 1- ಪಾಕಿಸ್ತಾನ

ಕೊಹ್ಲಿ ಬಳಗಕ್ಕೆ ಸೋಲು
ವಿರಾಟ್ ಕೊಹ್ಲಿ ನಾಯಕತ್ವದ ಭಾರತ  ಕ್ರಿಕೆಟ್ ತಂಡವು  ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ 180 ರನ್‌ಗಳಿಂದ ಸೋತಿತು.

ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡವು ಫಖ್ರ್ ಜಮಾನ್ (114 ರನ್) ಅವರ ಅಮೋಘ ಶತಕದ ಬಲದಿಂದ 50 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 338 ರನ್‌ಗಳನ್ನು ಗಳಿಸಿತು. ನಂತರ ಬ್ಯಾಟಿಂಗ್‌ ಮಾಡಿದ ಭಾರತ ತಂಡವು 30.3 ಓವರ್‌ಗಳಲ್ಲಿ 158 ರನ್‌ ಗಳಿಸಿ ಸೋತಿತು. ಇದೇ ಮೊದಲ ಬಾರಿಗೆ ಪ್ರಶಸ್ತಿ ಗೆದ್ದ ಪಾಕ್ ತಂಡ ಸಂಭ್ರಮಿಸಿತು. ಟೂರ್ನಿಯ ಇತಿಹಾಸದಲ್ಲಿ ಇದೇ ಪ್ರಥಮ ಸಲ ಭಾರತ ತಂಡವು ಪಾಕ್ ಎದುರು ಶರಣಾಯಿತು.

*

ಪಾಕಿಸ್ತಾನ– 4ಕ್ಕೆ 338(50 ಓವರ್‌ಗಳಲ್ಲಿ)

ಭಾರತ– 158(30.3 ಓವರ್‌ಗಳಲ್ಲಿ)

ಫಲಿತಾಂಶ: ಪಾಕಿಸ್ತಾನ ತಂಡಕ್ಕೆ 180 ರನ್‌ಗಳ ಜಯ ಮತ್ತು ಚಾಂಪಿಯನ್ಸ್‌ ಟ್ರೋಫಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT