ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿ–ಸಿಂಹಧಾಮಕ್ಕೆ ಶೀಘ್ರ ಎರಡು ಸಿಂಹಗಳ ಸೇರ್ಪಡೆ

ತಿಂಗಳ ಒಳಗೆ ಬರುವ ನಿರೀಕ್ಷೆ
Last Updated 19 ಜೂನ್ 2017, 5:38 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯ ವನ್ಯಜೀವಿ ತಾಣ ತ್ಯಾವರೆಕೊಪ್ಪ ಹುಲಿ–ಸಿಂಹಧಾಮಕ್ಕೆ ಜೂನ್‌ ಅಂತ್ಯದ ಒಳಗೆ ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ದಿಂದ ಎರಡು ಸಿಂಹಗಳು ಸೇರ್ಪಡೆಯಾಗಲಿವೆ.

ಪ್ರಸ್ತುತ ಆರ್ಯ (6) ಮತ್ತು ಮಾನ್ಯ (12) ಎಂಬ 2 ಸಿಂಹಗಳು ಧಾಮದಲ್ಲಿದೆ. ಧಾಮದಲ್ಲಿ ಸಿಂಹಗಳ ಸಂಖ್ಯೆ ಕೇವಲ ಎರಡೇ ಇರುವ ಕಾರಣ 3 ತಿಂಗಳ ಹಿಂದೆಯೇ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಸಿಂಹಗಳ ಅಗತ್ಯವಿದೆ ಎಂದು ಪ್ರಸ್ತಾವ ಸಲ್ಲಿಸಲಾಗಿತ್ತು. ಬನ್ನೇರುಘಟ್ಟದ 5 ವರ್ಷದ 2 ಸಿಂಹಗಳು ಬರುವ ನಿರೀಕ್ಷೆ ಇದೆ ಎಂದು ಹುಲಿ– ಸಿಂಹಧಾಮದ ವಲಯ ಅರಣ್ಯಾಧಿಕಾರಿ ಪ್ರದೀಪ್ ಹಾಲಭಾವಿ ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ಕೇವಲ 10 ಕಿ.ಮೀ. ದೂರದಲ್ಲಿರುವ ಈ ತಾಣವನ್ನು ಸಿಂಹಧಾಮ ಎಂದೇ ಜನರು ಕರೆಯುತ್ತಾರೆ. ಹುಲಿಗಳು 7, ಚಿರತೆಗಳ ಸಂಖ್ಯೆ 21 ಇದೆ. 602 ಹೆಕ್ಟೇರ್ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿದೆ. 

ಈ ಧಾಮದಲ್ಲಿ 305 ವಿವಿಧ ಬಗೆಯ ಪ್ರಾಣಿ, ಪಕ್ಷಿಗಳಿವೆ. 115 ವಿವಿಧ ಜಾತಿಯ, ವಿವಿಧ ದೇಶಗಳ ಪಕ್ಷಿಗಳಿವೆ. ಹೆಬ್ಬಾವು ಸೇರಿದಂತೆ 5 ಪ್ರಭೇದದ ಸರೀಸೃಪಗಳಿವೆ. 

ಹುಲಿ–ಸಿಂಹಗಳಿಗೆ ಪ್ರತ್ಯೇಕ ಪ್ರದೇಶ: ಈ ಪ್ರದೇಶದಲ್ಲಿ ಹುಲಿ ಮತ್ತು ಸಿಂಹಗಳಿಗಾಗಿಯೇ ಪ್ರತ್ಯೇಕ ಪ್ರದೇಶ ಮೀಸಲಿಡಲಾಗಿದೆ. ಪ್ರಸ್ತುತ 2 ಸಿಂಹ, 7 ಹುಲಿಗಳಿವೆ. ಹಿಂದೆ 27.5 ಹೆಕ್ಟೇರ್‌ನಲ್ಲಿ ಎಲ್ಲ ಪ್ರಾಣಿಗಳಿಗೂ ಅವಕಾಶ ಕಲ್ಪಿಸಲಾಗಿತ್ತು. ನಂತರ ಪ್ರಾಣಿಗಳ ಸಂಖ್ಯೆ ಹೆಚ್ಚಾದಂತೆ ಸಿಂಹಗಳಿಗಾಗಿ 35 ಹೆಕ್ಟೇರ್ ಹಾಗೂ ಹುಲಿಗಳಿಗಾಗಿಯೇ 35 ಹೆಕ್ಟೇರ್ ಪ್ರತ್ಯೇಕ ಸ್ಥಳ ಮೀಸಲಿಡಲಾಗಿದೆ.

***

2.54 ಲಕ್ಷ ಪ್ರವಾಸಿಗರ ಭೇಟಿ
ತ್ಯಾವರೆಕೊಪ್ಪದ ಹುಲಿ–ಸಿಂಹಧಾಮಕ್ಕೆ ಕಳೆದ ವರ್ಷ 2,54,028 ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದರಲ್ಲಿ 2,12,667 ಹಿರಿಯರು, 41,361 ಮಕ್ಕಳು ಸಿಂಹಧಾಮ ವೀಕ್ಷಿಸಿದ್ದಾರೆ.

2017ರ ಪ್ರಸಕ್ತ ಬೇಸಿಗೆ ಸಮಯ ಮಾರ್ಚ್‌ನಿಂದ ಮೇ ಅಂತ್ಯದವರೆಗೆ  25 ಸಾವಿರ ಹಿರಿಯರು ಹಾಗೂ 8 ಸಾವಿರ ಮಕ್ಕಳು ಭೇಟಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT