ನಿಜವಾಗಲೂ ಹುಚ್ಚ ವೆಂಕಟ್‌ಗೆ ಲವ್‌ ಆಗಿತ್ತ? ಆತ್ಮಹತ್ಯೆಗೆ ಯತ್ನಿಸಿದ್ದು ಯಾಕೆ?

7

ನಿಜವಾಗಲೂ ಹುಚ್ಚ ವೆಂಕಟ್‌ಗೆ ಲವ್‌ ಆಗಿತ್ತ? ಆತ್ಮಹತ್ಯೆಗೆ ಯತ್ನಿಸಿದ್ದು ಯಾಕೆ?

Published:
Updated:
ನಿಜವಾಗಲೂ ಹುಚ್ಚ ವೆಂಕಟ್‌ಗೆ ಲವ್‌ ಆಗಿತ್ತ? ಆತ್ಮಹತ್ಯೆಗೆ ಯತ್ನಿಸಿದ್ದು ಯಾಕೆ?

ಬೆಂಗಳೂರು:  ಹುಚ್ಚ ವೆಂಕಟ್! ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ತನ್ನ ವಿಭಿನ್ನ ಹಾವಭಾವ ಹಾಗೂ ಅತಿಕೇರಕದ ಮಾತುಗಾರಿಕೆಯಿಂದ ಬೆಳ್ಳಿತೆರೆಯಿಂದ ಕಿರುತೆರೆಯವರೆಗೆ ಜನಪ್ರಿಯತೆ ಗಳಿಸಿರುವ ವೆಂಕಟ್ ಇದೀಗ ಪ್ರೇಮ ವೈಫಲ್ಯಕೆ ಒಳಗಾಗಿದ್ದಾರಂತೇ!

ಅವರೇ ಹೇಳುವಂತೆ ‘ನನಗೂ  ನಟಿ ರಚನಾ ನಡುವೆ ಪ್ರೇಮಾಂಕುರವಾಗಿತ್ತು. ನಮ್ಮ ಮದುವೆಗೆ ಅವರ ಮನೆಯವರು ಒಪ್ಪಿಗೆ ನೀಡಿಲ್ಲ! ಹಾಗಾಗಿ ರಚನಾ ನನ್ನಿಂದ ದೂರವಾಗಿದ್ದಾಳೆ ಎಂದು ಹುಚ್ಚ ವೆಂಕಟ್‌ ಸುದ್ದಿ ವಾಹಿನಿಗಳ ಮುಂದೆ ಹೇಳಿಕೆ ನೀಡಿದ್ದಾರೆ.

ಈ ಹಿಂದೆ ರಿಯಾಲಿಟಿ ಷೋ ‘ಬಿಗ್‌ಬಾಸ್’ ಮನೆಗೆ ಹೋಗಿ ಹುಚ್ಚ ವೆಂಕಟ್ ಆವಾಂತರ ಮಾಡಿಕೊಂಡಿದ್ದರು. ನಂತರ ಸೂಪರ್‌ ಜೋಡಿಯಲ್ಲಿ ನಟಿಸಿ ಜನಪ್ರಿಯತೆಗಳಿಸಿದ್ದರು. ಸೂಪರ್‌ ಜೋಡಿಯಲ್ಲಿ ನಟಿ ರಚನಾ ಹುಚ್ಚ ವೆಂಕಟ್‌ಗೆ ಜೋಡಿಯಾಗಿದ್ದರು.

ಭಾನುವಾರ ಹುಚ್ಚ ವೆಂಕಟ್‌ ಅವರು ಪ್ರೇಮ ವೈಪಲ್ಯದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗೆಳೆಯರಿಗೆ ಸಂದೇಶ ಕಳುಹಿಸಿ ಪಿನಾಯಿಲ್‌ ಕುಡಿದು ಆಸ್ಪತ್ರೆಗೆ ದಾಖಲಾಗಿದ್ದರು.  ಇದೀಗ ಹುಚ್ಚ ವೆಂಕಟ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ರಚನಾ ಸ್ಪಷ್ಟನೆ: ನನ್ನ ಮತ್ತು ಹುಚ್ಚ ವೆಂಕಟ್ ನಡುವೆ ಪ್ರೀತಿ ಇರಲಿಲ್ಲ. ಸೂಪರ್‌ ಜೋಡಿಯಲ್ಲಿ ಜೋಡಿಯಾಗಿದ್ದರಿಂದ ನಮ್ಮ  ನಡುವೆ ಗೆಳೆತನವಿತ್ತು  ಅಷ್ಟೇ.  ನಮ್ಮ ನಡುವೆ ಪ್ರೀತಿ ಇತ್ತು ಎಂದು ಹುಚ್ಚ ವೆಂಕಟ್‌ ಸುಳ್ಳು ಹೇಳುತ್ತಿದ್ದಾರೆ ಎಂದು ರಚನಾ ಸ್ಪಷ್ಟನೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry