ಕಾಂಗ್ರೆಸ್‌ಗೆ ವಿನಾಶ ಕಾಲೇ ವಿಪರೀತ ಬುದ್ದಿ:  ಗುಜರಾತ್ ಸಿಎಂ ವಿಜಯ ರೂಪಾನಿ

7

ಕಾಂಗ್ರೆಸ್‌ಗೆ ವಿನಾಶ ಕಾಲೇ ವಿಪರೀತ ಬುದ್ದಿ:  ಗುಜರಾತ್ ಸಿಎಂ ವಿಜಯ ರೂಪಾನಿ

Published:
Updated:
ಕಾಂಗ್ರೆಸ್‌ಗೆ ವಿನಾಶ ಕಾಲೇ ವಿಪರೀತ ಬುದ್ದಿ:  ಗುಜರಾತ್ ಸಿಎಂ ವಿಜಯ ರೂಪಾನಿ

ಹಾವೇರಿ: ಮೋದಿ ಸರ್ಕಾರ ಮೂರು ವರ್ಷದಲ್ಲಿ ಭ್ರಷ್ಟಾಚಾರ ರಹಿತ,  ಉತ್ತಮ ಆಡಳಿತ ನೀಡಿದೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ ರೂಪಾನಿ ಸೋಮವಾರ ಹೇಳಿದ್ದಾರೆ.

ಇಲ್ಲಿ ನಡೆಯುತ್ತಿರುವ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.  ಕಾಂಗ್ರೆಸ್‌ಗೆ ವಿನಾಶ ಕಾಲೇ ವಿಪರೀತ ಬುದ್ದಿ ಇದಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ಯುಪಿಎ ಸರ್ಕಾರ 10 ವರ್ಷಗಳಲ್ಲಿ ಸಾಕಷ್ಟು ಹಗರಣ ಮಾಡಿತ್ತು. ಮೋದಿ ಸರ್ಕಾರ ಮೂರು ವರ್ಷದಲ್ಲಿ ಭ್ರಷ್ಟಾಚಾರ ರಹಿತ,  ಉತ್ತಮ ಆಡಳಿತ ನೀಡಿದೆ ಎಂದರು.

ಕೇಂದ್ರ ಸರ್ಕಾರ ರೈತರಿಗಾಗಿ ಪ್ರಧಾನ ಮಂತ್ರಿ ಫಸಲ್  ಬಿಮಾ ಯೋಜನೆ ನೀಡಿದೆ,  ದೇಶದಲ್ಲಿ ಓನ್ ನೇಷನ್ ಓನ್ ಟ್ಯಾಕ್ಸ್ ಜಾರಿಗೆ ಬರುವ ನಿಟ್ಟಿನಲ್ಲಿ ಮೋದಿಜೀ GST ಯನ್ನು ದಿಟ್ಟವಾಗಿ ಜಾರಿಗೆ ತಂದಿದ್ದಾರೆ.

ದೇಶದಲ್ಲಿ ಈಗ ಅಭಿವೃದ್ಧಿ ಪರ್ವ ಆರಂಭವಾಗಿದೆ. ನಿವೃತ್ತ ಸೈನಿಕರ ಬಹುದಿನದ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದನೆ ನೀಡಿ, ಓನ್ ರ್ಯಾಂಕ್  ಪೆನ್ಷನ್ ಯೋಜನೆ ಜಾರಿಗೆ ತಂದಿದೆ,  ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ  ಉತ್ಪಾದನೆ ಹೆಚ್ಚಳ, ಉಜ್ವಲ ಯೋಜನೆ ಅಡಿ ಎರಡು ಕೋಟಿ ಜನರಿಗೆ ಉಚಿತ ಅಡುಗೆ ಅನಿಲ ನೀಡಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry