ನಾಸಾ ರಾಕೆಟ್‌ನಲ್ಲಿ ಭಾರತೀಯ ವಿದ್ಯಾರ್ಥಿ ನಿರ್ಮಿಸಿದ ಅತಿ ಹಗುರ ಉಪಗ್ರಹ: ಉಡಾವಣೆ ಯಶಸ್ವಿ

7

ನಾಸಾ ರಾಕೆಟ್‌ನಲ್ಲಿ ಭಾರತೀಯ ವಿದ್ಯಾರ್ಥಿ ನಿರ್ಮಿಸಿದ ಅತಿ ಹಗುರ ಉಪಗ್ರಹ: ಉಡಾವಣೆ ಯಶಸ್ವಿ

Published:
Updated:
ನಾಸಾ ರಾಕೆಟ್‌ನಲ್ಲಿ ಭಾರತೀಯ ವಿದ್ಯಾರ್ಥಿ ನಿರ್ಮಿಸಿದ ಅತಿ ಹಗುರ ಉಪಗ್ರಹ: ಉಡಾವಣೆ ಯಶಸ್ವಿ

ನವದೆಹಲಿ: ಭಾರತೀಯ ವಿದ್ಯಾರ್ಥಿ ನಿರ್ಮಿಸಿದ ಜಗತ್ತಿನ ಅತಿ ಹಗುರ ಹಾಗೂ ಚಿಕ್ಕ ಉಪಗ್ರಹ ನಾಸಾದ ಉಡಾವಣಾ ನೆಲೆಯಿಂದ ಯಶಸ್ವಿಯಾಗಿ ಉಡಾವಣೆಗೊಂಡಿದೆ.

ತಮಿಳುನಾಡಿನ 18 ವರ್ಷದ ವಿದ್ಯಾರ್ಥಿ ರಿಫತ್‌ ಷರೂಕ್‌  ವಿನ್ಯಾಸಗೊಳಿಸಿರುವ ಜಗತ್ತಿನ ಅತಿ ಹಗುರ ಉಪಗ್ರಹವು ಗುರುವಾರ ಉಡಾವಣೆಗೊಂಡಿದ್ದು, ರಿಫತ್‌ ಹಾಗೂ ಸ್ನೇಹಿತರು ಸಂಭ್ರಮಿಸಿರುವ ಫೋಟೋಗಳನ್ನು ಎಎನ್‌ಐ ಪ್ರಕಟಿಸಿದೆ.

ರಿಫತ್‌ ಮತ್ತು ಆತನ ಆರು ಸಹಪಾಠಿಗಳು ಜತೆಯಾಗಿ ಸಿದ್ಧಪಡಿಸಿರುವ ‘ಕಲಾಂಸ್ಯಾಟ್‌’ ಉಡಾವಣೆಗೊಂಡಿರುವ ಜಗತ್ತಿನ ಅತಿ ಹಗುರ ಉಪಗ್ರಹವಾಗಿದೆ.

ಕೇವಲ 64 ಗ್ರಾಂ ತೂಕದ ಉಪಗ್ರಹವು ನಾಸಾ ಸಂಸ್ಥೆಯ ರಾಕೆಟ್‌ ಮೂಲಕ ಕಕ್ಷೆ ಸೇರಿದೆ. ಕಲಾಂಸ್ಯಾಟ್‌ ಮಿಷನ್‌ ಒಟ್ಟು ಅವಧಿ 240 ನಿಮಿಷಗಳಾಗಿದ್ದು, ಉಪಗ್ರಹವು ಅತಿ ಕಡಿಮೆ ಗುರುತ್ವ ವಾತಾವರಣದ ಉಪ–ಕಕ್ಷೆಯಲ್ಲಿ 12 ನಿಮಿಷಗಳ ವರೆಗೂ ಕಾರ್ಯನಿರ್ವಹಿಸಲಿದೆ. ಕಾರ್ಬನ್‌ ಫೈಬರ್‌ 3ಡಿ ಪ್ರಿಂಟ್‌ ಮೂಲಕ ರೂಪಿಸಲಾಗಿರುವ ಉಪಗ್ರಹದ ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ಪರೀಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಪಲ್ಲಪಟ್ಟಿಯ ರಿಫತ್‌ ವಿವರಿಸಿರುವುದಾಗಿ ಟೈಮ್ಸ್‌ ಆಫ್‌ ಇಂಡಿಯಾ ಈ ಹಿಂದೆ ವರದಿ ಮಾಡಿತ್ತು.

ನಾಸಾ ಮತ್ತು ಐ ಡೂಡಲ್‌ ಲರ್ನಿಂಗ್‌ ಸಂಸ್ಥೆಗಳ ‘ಕ್ಯೂಬ್ಸ್‌ ಇನ್‌ ಸ್ಪೇಸ್‌’ ಸ್ಪರ್ಧೆಯ ಮೂಲಕ ರಿಫತ್‌ ಅವರ 64 ಗ್ರಾಂ ಉಪಗ್ರಹ ಆಯ್ಕೆಯಾಗಿತ್ತು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry