ಬುಧವಾರ, ಅಕ್ಟೋಬರ್ 28, 2020
28 °C

ಕಾರ್ಟೊಸ್ಯಾಟ್‌–2: ಉಡಾವಣೆ

ಪಿಟಿಐ Updated:

ಅಕ್ಷರ ಗಾತ್ರ : | |

ಕಾರ್ಟೊಸ್ಯಾಟ್‌–2: ಉಡಾವಣೆ

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಕಾರ್ಟೊಸ್ಯಾಟ್‌ 2 ಸರಣಿಯ ಉಪಗ್ರಹವನ್ನು ಶುಕ್ರವಾರ ಉಡಾವಣೆ ಮಾಡಿದೆ. ಈ ಬಾರಿ ಭಾರತದ ಒಂದು ದೊಡ್ಡ ಮತ್ತು ಒಂದು ಸಣ್ಣ ಉಪಗ್ರಹಗಳ ಜತೆಗೆ 14 ದೇಶಗಳ 29 ಉಪಗ್ರಹಗಳನ್ನೂ ಇಸ್ರೊ ಕಕ್ಷೆಗೆ ಸೇರಲಿವೆ.

ಅಮೆರಿಕ, ಬ್ರಿಟನ್‌, ಜರ್ಮನಿ, ಫ್ರಾನ್ಸ್‌ನಂತಹ ದೇಶಗಳ ಉಪಗ್ರಹಗಳೂ ಇದರಲ್ಲಿ ಇವೆ. ಇಸ್ರೊದ ವಾಣಿಜ್ಯ ವಿಭಾಗ ಅಂತರಿಕ್ಷ ಕಾರ್ಪೊರೇಷನ್‌ ಲಿ.  ವಿವಿಧ ದೇಶಗಳ ಜತೆಗೆ ಮಾಡಿಕೊಂಡಿರುವ ಒಪ್ಪಂದ ಪ್ರಕಾರ ವಿದೇಶಗಳ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಗುತ್ತಿದೆ.

**

ಉಪಗ್ರಹಗಳು

*   ಕಾರ್ಟೊಸ್ಯಾಟ್‌ 2 ಸರಣಿಯ ಭೂ ವೀಕ್ಷಣಾ ಉಪಗ್ರಹ (ತೂಕ: 712 ಕೆ.ಜಿ)
*   ಇತರ 30 ಸಣ್ಣ ಉಪಗ್ರಹಗಳು (ಒಟ್ಟು ತೂಕ: 243 ಕೆ.ಜಿ)
*   30 ಸಣ್ಣ ಉಪಗ್ರಹಗಳ ಪೈಕಿ 29  ಉಪಗ್ರಹಗಳು 14 ದೇಶಗಳಿಗೆ ಸೇರಿದ್ದಾಗಿವೆ. ಒಂದು ಸಣ್ಣ ಉಪಗ್ರಹ ಭಾರತದ್ದು.

**

ಪ್ರಯೋಜನಗಳು

* ಭೂ ನಕ್ಷೆ ತಯಾರಿ

* ನಗರ, ಗ್ರಾಮೀಣ ಪ್ರದೇಶಗಳು, ಕರಾವಳಿ ಪ್ರದೇಶಗಳ ಭೂ ಬಳಕೆ ಗುರುತಿಸುವಿಕೆ ಮತ್ತು ನಿಯಂತ್ರಣ
* ರಸ್ತೆ ಜಾಲದ ಮೇಲೆ ನಿಗಾ, ನೀರು ವಿತರಣೆ
* ಭೂ ಬಳಕೆಯಲ್ಲಿನ ಪರಿವರ್ತನೆ ಗುರುತಿಸುವಿಕೆ
* ಭೌಗೋಳಿಕ ಮಾಹಿತಿ ವ್ಯವಸ್ಥೆ

**

* ಕಾರ್ಟೊಸ್ಯಾಟ್‌ 2 ಉಪಗ್ರಹವನ್ನು ಧ್ರುವೀಯ ಸೂರ್ಯ ಸಮನ್ವಯ ಕಕ್ಷೆಗೆ ಸೇರಿಸಲಾಗುವುದು
* ಕಾರ್ಟೊಸ್ಯಾಟ್‌–2 ದೂರ ಸಂವೇದಿ ಉಪಗ್ರಹವಾಗಿದ್ದು, ಈ ಸರಣಿಯ ಹಿಂದಿನ ಉಪಗ್ರಹಗಳ ರೀತಿಯಲ್ಲಿಯೇ ಇದೆ
* ಉತ್ತಮ ಗುಣಮಟ್ಟದ ಚಿತ್ರಗಳನ್ನು ಭೂಮಿಗೆ ಕಳುಹಿಸುವುದು ಇದರ ಉದ್ದೇಶ.
* ಅದಕ್ಕಾಗಿ ಸದಾ ಒಂದೇ ರೀತಿಯಲ್ಲಿ ಸೂರ್ಯನ ಬೆಳಕು ಬೀಳುವ ಕಕ್ಷೆಯಲ್ಲಿ (ಸೂರ್ಯ ಸಮನ್ವಯ ಕಕ್ಷೆ) ಉಪಗ್ರಹವನ್ನು ಇರಿಸಲಾಗುತ್ತದೆ

**

ಗುರುವಾರ– ಬೆಳಗ್ಗೆ 5.29ಕ್ಕೆ 28 ತಾಸುಗಳ ಕ್ಷಣಗಣನೆ ಆರಂಭ

ಶುಕ್ರವಾರ– ಬೆಳಗ್ಗೆ 9.20ಕ್ಕೆ ಉಡಾವಣೆ

ಶ್ರೀಹರಿಕೋಟ ಉಡಾವಣಾ ಕೇಂದ್ರದಿಂದ ಉಡಾವಣೆ

ಭೂಮಿಯಿಂದ ಕಕ್ಷೆಯ ದೂರ  505ಕಿ.ಮೀ

ವಾಹಕ: ಪಿಎಸ್‌ಎಲ್‌ವಿ–ಸಿ38
ಇದು ಪಿಎಸ್‌ಎಲ್‌ವಿಯ 40ನೇ ಹಾರಾಟ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.