ಜಮ್ಮು– ಕಾಶ್ಮೀರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯನ್ನು ಹೊಡೆದು ಕೊಂದ ಉದ್ರಿಕ್ತರ ಗುಂಪು

7

ಜಮ್ಮು– ಕಾಶ್ಮೀರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯನ್ನು ಹೊಡೆದು ಕೊಂದ ಉದ್ರಿಕ್ತರ ಗುಂಪು

Published:
Updated:
ಜಮ್ಮು– ಕಾಶ್ಮೀರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯನ್ನು ಹೊಡೆದು ಕೊಂದ ಉದ್ರಿಕ್ತರ ಗುಂಪು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದ ಜಾಮಿಯಾ ಮಸೀದಿಯ ಎದುರು ಗುರುವಾರ ರಾತ್ರಿ ನಡೆದ ಗಲಭೆಯಲ್ಲಿ ಉದ್ರಿಕ್ತರ ಗುಂಪು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರನ್ನು ಹೊಡೆದು ಕೊಂದಿದೆ.

ಡಿವೈಎಸ್ಪಿ ಮೊಹಮ್ಮದ್‌ ಆಯೂಬ್‌ ಪಂಡಿತ್‌ ಮೃತ ಪೊಲೀಸ್‌ ಅಧಿಕಾರಿ.

‘ಉದ್ರಿಕ್ತರ ಗುಂಪು ಆಯೂಬ್‌ ಅವರೊಂದಿಗೆ ಮಾತಿನ ಚಕಮಕಿ ನಡೆಸಿದೆ. ಗಲಭೆ ಹೆಚ್ಚಾದಾಗ ಆಯೂಬ್‌ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದರಿಂದ ಮತ್ತಷ್ಟು ಕೆರಳಿದ ಜನರ ಗುಂಪು ನೌಹಟ್ಟಾ ಪ್ರದೇಶದ ಬಾಟಾ ಚೌಕದ ಬಳಿ ಅವರನ್ನು ಹೊಡೆದು ಕೊಂದಿದೆ’ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

‘ಘಟನೆ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಮತ್ತೊಬ್ಬನ ಹುಡುಕಾಟ ನಡೆಯುತ್ತಿದೆ’ ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ಎಸ್‌.ಪಿ. ವೈದ್‌ ತಿಳಿಸಿದ್ದಾರೆ.

‘ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂಬುದನ್ನು ಗುರುತಿಸುವುದನ್ನು ಜನ ಕಲಿಯಬೇಕು. ಜನರ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಅಧಿಕಾರಿಯನ್ನು ಜನರೇ ಕೊಂದಿರುವುದು ದುರಂತ’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry