ಚೀನಾದಲ್ಲಿ ಗುಡ್ಡ ಕುಸಿತ: 140ಕ್ಕೂ ಹೆಚ್ಚು ಮಂದಿ ಸಾವು

7

ಚೀನಾದಲ್ಲಿ ಗುಡ್ಡ ಕುಸಿತ: 140ಕ್ಕೂ ಹೆಚ್ಚು ಮಂದಿ ಸಾವು

Published:
Updated:
ಚೀನಾದಲ್ಲಿ ಗುಡ್ಡ ಕುಸಿತ: 140ಕ್ಕೂ ಹೆಚ್ಚು ಮಂದಿ ಸಾವು

ಬೀಜಿಂಗ್‌: ಚೀನಾದ ಗುಡ್ಡಗಾಡು ಪ್ರದೇಶ ನೈರುತ್ಯ ಸಿಚುಅನ್‌ ಪ್ರಾಂತ್ಯದಲ್ಲಿ ಶನಿವಾರ ಗುಡ್ಡ ಕುಸಿತದಿಂದ 140ಕ್ಕೂ ಹೆಚ್ಚು ಮಂದಿ ಕಲ್ಲು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ಗುಡ್ಡ ಪ್ರದೇಶದ ಕ್ಸಿನ್ಮೊ ಗ್ರಾಮದ 40ಕ್ಕೂ ಹೆಚ್ಚು ಮನೆಗಳ ಮೇಲೆ ಭಾರಿ ಪ್ರಮಾಣದ ಗುಡ್ಡ ಕುಸಿದು ಬಿದ್ದಿದೆ.‘ಕಲ್ಲು ಮಣ್ಣಿನಡಿ ಹಲವರು ಸಿಲುಕಿದ್ದಾರೆ. ಅವರನ್ನು ರಕ್ಷಿಸಲು ಕಾರ್ಯಾಚರಣೆ ನಡೆಯುತ್ತಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಲ್ಲು ಮಣ್ಣಿನಡಿ ಸಿಲುಕಿರುವ ಬಹುತೇಕರು ಮೃತಪಟ್ಟಿರುವ ಸಾಧ್ಯತೆ ಇದೆ. ಹೀಗಾಗಿ ಸಾವಿನ ಸಂಖ್ಯೆಯೂ ಹೆಚ್ಚಾಗಬಹುದು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry