ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್‌ ಐಡಿ, ಪಾಸ್‌ವರ್ಡ್‌ ಬಳಕೆ ಬಗ್ಗೆ ಇರಲಿ ಎಚ್ಚರ

Last Updated 28 ಜೂನ್ 2017, 19:30 IST
ಅಕ್ಷರ ಗಾತ್ರ

ಇಮೇಲ್‌ ಐಡಿ, ಪಾಸ್‌ವರ್ಡ್ ಬಳಕೆ ಬಗ್ಗೆ ಈಗ ಎಷ್ಟೇ ಎಚ್ಚರದಿಂದಿದ್ದರೂ ಅದು ಕಡಿಮೆಯೇ. ಕುತಂತ್ರಿಗಳು ನಮ್ಮ ಮಾಹಿತಿಗಳನ್ನು ಕದಿಯಲು ಸದಾ ಹವಣಿಸುತ್ತಲೇ ಇರುತ್ತಾರೆ. ನಮ್ಮ ಒಂದು ಸಣ್ಣ ತಪ್ಪೂ ಸಾಕು ನಾವು ಅವರ ಗಾಳಕ್ಕೆ ಸಿಲುಕಲು. ಹೀಗಿರುವಾಗ ಇಮೇಲ್‌ ಐಡಿ ಮತ್ತು ಪಾಸ್‌ವರ್ಡ್ ಬಳಕೆ ಬಗ್ಗೆ ಸಾಕಷ್ಟು ಎಚ್ಚರ ವಹಿಸುವುದು ಈಗ ಅನಿವಾರ್ಯ.

ಹಲವು ಸೇವೆಗಳಿಗೆ ಇಮೇಲ್‌ ಐಡಿಯನ್ನು ಯೂಸರ್‌ ನೇಮ್‌ ಆಗಿ ಬಳಸುವುದು ಈಗ ರೂಢಿ. ಫೇಸ್‌ಬುಕ್‌, ಟ್ವಿಟರ್‌ ಖಾತೆಗಳಿಗೆ ಇಮೇಲ್‌ ಐಡಿಯನ್ನು ಯೂಸರ್‌ ನೇಮ್‌ ಆಗಿ ಬಳಸುವಂತೆಯೇ ಇತರೆ ಅಂತರ್ಜಾಲ ಸೇವೆಗಳಿಗೂ ಇಮೇಲ್‌ ಐಡಿಯನ್ನು ಯೂಸರ್‌ ನೇಮ್‌ ಆಗಿಸಿಕೊಳ್ಳುವುದು ಹಲವರ ಅಭ್ಯಾಸ. ಆದರೆ,  ಹೀಗೆ ಯೂಸರ್‌ ನೇಮ್‌ ಆಗಿ ಮೇಲ್‌ ಐಡಿ ನೀಡುವಾಗ ನೀವು ಲಾಗ್‌ಇನ್‌ ಆಗುತ್ತಿರುವ ಜಾಲತಾಣ ಎಷ್ಟು ಸುರಕ್ಷಿತ ಎಂಬುದನ್ನು ಮೊದಲು ಪರೀಕ್ಷಿಸಿಕೊಳ್ಳಿ.

ಸಾಕಷ್ಟು ಜಾಲತಾಣಗಳು ಖಾತೆಗೆ ಕನ್ನ ಹಾಕಲೆಂದೇ ಸೃಷ್ಟಿಯಾಗಿರುತ್ತವೆ. ಇಂತಹ ಕನ್ನದಾಣಗಳ ಬಗ್ಗೆ ಸಾಕಷ್ಟು ಎಚ್ಚರದಿಂದಿರಬೇಕು. ಯಾವುದಾದರೂ ಆಡಿಯೊ, ವಿಡಿಯೊ ಇಲ್ಲವೇ ಪಿಡಿಎಫ್‌ ಫೈಲ್‌ ಡೌನ್‌ಲೋಡ್‌ ಮಾಡಬೇಕಿದ್ದರೆ ಸರ್ಚ್ ಎಂಜಿನ್‌ನಲ್ಲಿ ಹುಡುಕುವುದು ಸಹಜ.

ಸರ್ಚ್‌ ಎಂಜಿನ್‌ನ ರಿಸಲ್ಟ್‌ ಲಿಸ್ಟ್‌ನಲ್ಲಿ ಬರುವ ಎಲ್ಲಾ ಜಾಲತಾಣಗಳೂ ಸುರಕ್ಷಿತವಲ್ಲ. ‘ಇಲ್ಲಿ ನಿಮ್ಮ ಇಮೇಲ್‌ ಐಡಿ, ಪಾಸ್‌ವರ್ಡ್‌ ನೀಡಿ ಲಾಗ್‌ಇನ್‌ ಆಗಿ. ನೀವು ಹುಡುಕುತ್ತಿರುವ ಫೈಲ್‌ ಡೌನ್‌ಲೋಡ್‌ ಮಾಡಿಕೊಳ್ಳಿ’ ಎಂದು ಕಾಣಿಸಿಕೊಳ್ಳುವ ನೋಟಿಫಿಕೇಷನ್‌ಗಳ ಬಗ್ಗೆ ಎಚ್ಚರದಿಂದಿರಿ. ಇಂತಹ ಪಾಪ್‌ ಅಪ್‌ಗಳು ಕುತಂತ್ರಿಗಳು ನಿಮಗೆ ಹಾಕುತ್ತಿರುವ ಗಾಳವೂ ಆಗಿರಬಹುದು.

ನೀವು ಯಾವುದೇ ಜಾಲತಾಣಕ್ಕೆ ಭೇಟಿ ನೀಡಬೇಕೆಂದರೂ ಮೊದಲು ಆ ಜಾಲತಾಣ ಸುರಕ್ಷಿತವೇ ಎಂಬುದನ್ನು ಖಚಿತಪಡಿಸಿ ಕೊಳ್ಳಬೇಕಾದ್ದು ಅಗತ್ಯ. ನಿಮ್ಮ ಆ್ಯಂಟಿವೈರಸ್‌ ಪ್ಯಾಕ್‌ನಲ್ಲಿ ಬ್ರೌಸರ್‌ ಸೆಕ್ಯೂರಿಟಿಗೂ ಆದ್ಯತೆ ನೀಡಿ. ಇದರಿಂದ ನೀವು ಸರ್ಚ್‌ ಎಂಜಿನ್‌ನಲ್ಲಿ ಹುಡುಕುತ್ತಿರುವ ಜಾಲತಾಣ ಸುರಕ್ಷಿತವೇ ಅಲ್ಲವೇ ಎಂಬುದನ್ನು ಪತ್ತೆ ಮಾಡಬಹುದು. ಸುರಕ್ಷಿತವಲ್ಲದ ಜಾಲತಾಣಗಳಿಗೆ ಯಾವ ಕಾರಣಕ್ಕೂ ಭೇಟಿ ನೀಡಬೇಡಿ.

ಯಾವುದೇ ಅಂತರ್ಜಾಲ ಸೇವೆಗೆ ಇಮೇಲ್‌ ಐಡಿ ನೀಡಬೇಕಿದ್ದರೆ ಅದರ ವಿಶ್ವಾಸಾರ್ಹತೆಯ ಬಗ್ಗೆ ತಿಳಿದುಕೊಂಡು ಮುಂದುವರಿಯುವುದು ಒಳ್ಳೆಯದು. ಅಲ್ಲದೆ ನಿಮ್ಮ ಮೇಲ್‌ ಐಡಿಗೆ ನೀಡಿರುವ ಪಾಸ್‌ವರ್ಡ್‌ ಅನ್ನೇ ಇತರೆ ಜಾಲತಾಣಗಳ ಸೇವೆಗೆ ನೀಡುವುದು ಅಪಾಯಕಾರಿ. ಇದರಿಂದ ನಿಮ್ಮ ಮೇಲ್‌ಗೆ ಕನ್ನ ಹಾಕುವವರಿಗೆ ನೀವೇ ದಾರಿ ಮಾಡಿಕೊಟ್ಟಂತಾಗುತ್ತದೆ. ಹೀಗಾಗಿ ಯಾವುದೇ ಅಂತರ್ಜಾಲ ಸೇವೆ ಇಮೇಲ್‌ ಐಡಿ ನೀಡುವ ಮುನ್ನ ಸುರಕ್ಷತೆಯ ವಿಚಾರ ನಿಮ್ಮ ಗಮನದಲ್ಲಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT