ಶನಿವಾರ, ಡಿಸೆಂಬರ್ 7, 2019
25 °C

ನಾಕುದಾಮೊಹಲ್ಲಾದಲ್ಲಿ ಕಡಲ್ಕೊರೆತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಕುದಾಮೊಹಲ್ಲಾದಲ್ಲಿ ಕಡಲ್ಕೊರೆತ

ಕಾರವಾರ: ‘ಸದಾಶಿವಗಡದ ನಾಕುದಾ ಮೊಹಲ್ಲಾ ಭಾಗದಲ್ಲಿ ಕಡಲ ಕೊರೆತ ಉಂಟಾಗಿದ್ದು, ಸ್ಥಳೀಯ ಜನಪ್ರತಿನಿಧಿ ಗಳು ಈ ಬಗ್ಗೆ ಕ್ರಮವಹಿಸುತ್ತಿಲ್ಲ’ ಎಂದು ಸ್ಥಳೀಯ ನಿವಾಸಿ ಅಮ್ಜದ್ ಅಲಿ ಶೇಖ್ ದೂರಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಮೂರು ತಿಂಗಳ ಹಿಂದೆ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಸತೀಶ್‌ ಸೈಲ್‌ ಅವರು, ಬಂಡು ನಿರ್ಮಾಣ ಮಾಡಿಕೊಡು ವುದಾಗಿ ತಿಳಿಸಿದ್ದರು. ಆದರೆ ಈವರೆಗೆ ಅದು ಕಾರ್ಯಗತವಾಗಿಲ್ಲ’ ಎಂದರು.

‘ಸಮುದ್ರದಲ್ಲಿ ಅಲೆಗಳ ಅಬ್ಬರ ದಿನೇ ದಿನೇ ಹೆಚ್ಚುತ್ತಿದ್ದ ಈ ಭಾಗದಲ್ಲಿ ವಾಸಿಸುತ್ತಿರುವ ಜನರಿಗೆ ಆತಂಕ ಎದುರಾಗಿದೆ. ಈಗಾಗಲೇ ಸ್ಥಳೀಯರೇ ಅಲ್ಲಿ ತಾತ್ಕಾಲಿಕವಾಗಿ ಬಂಡು ನಿರ್ಮಾಣ ಕೈಗೊಂಡಿದ್ದಾರೆ.

ಆದರೆ ಜನಪ್ರತಿನಿಧಿ ಹಾಗೂ ಅಧಿಕಾರಿಗಳು, ಜಿಲ್ಲಾಡಳಿತ ಈ ಬಗ್ಗೆ ಪರಿಶೀಲನೆ ನಡೆಸಿ, ಆದಷ್ಟು ಶೀಘ್ರವೇ ಕಡಲ್ಕೊರೆತದಿಂದಾಗುವ ಅನಾಹುತ ತಪ್ಪಿಸಲು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರತಿಕ್ರಿಯಿಸಿ (+)