ಸೋಮವಾರ, ಡಿಸೆಂಬರ್ 16, 2019
25 °C

ಮುನಿದ ವರುಣ: ಕೃಷಿ ಕಾರ್ಯಕ್ಕೆ ಹಿನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುನಿದ ವರುಣ: ಕೃಷಿ ಕಾರ್ಯಕ್ಕೆ ಹಿನ್ನಡೆ

ರಾಮನಗರ: ವರುಣನ ಅವಕೃಪೆಯಿಂದಾಗಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದ್ದು, ನಿರೀಕ್ಷೆಯ ಅರ್ಧದಷ್ಟೂ ಜಮೀನಿನಲ್ಲಿ ಬಿತ್ತನೆ ಕಾರ್ಯ ನಡೆದಿಲ್ಲ.

ಪ್ರಸಕ್ತ ಮುಂಗಾರಿನಲ್ಲಿ 1.1ಲಕ್ಷ ಹೆಕ್ಟೇರ್‌ನಷ್ಟು ಜಮೀನಿನಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. ಆದರೆ ಈವರೆಗೆ ಕೇವಲ 6,362 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಕೃಷಿ ಚಟುವಟಿಕೆ ನಡೆದಿದೆ. ಉಳಿದ ಕಡೆ ರೈತರು ಉತ್ತು–ಬಿತ್ತು ಹೊಲಗಳನ್ನು ಹದಮಾಡಿಕೊಂಡಿದ್ದರೂ ಮಳೆಯ ಅನಿಶ್ಚಿತತೆಯಿಂದಾಗಿ ಕಾಳು ಚೆಲ್ಲಲು ಮುಂದಾಗುತ್ತಿಲ್ಲ.

ಪೂರ್ವ ಮುಂಗಾರಿನಲ್ಲಿ ಬಿತ್ತನೆ ಮಾಡಲಾಗಿದ್ದ ಎಳ್ಳು, ಅವರೆ, ನೆಲಕಡಲೆಗಳು ತೇವಾಂಶದ ಕೊರತೆ  ಕಾರಣ ಒಣಗುತ್ತಿವೆ. ತೊಗರಿ, ಹಲ ಸಂದೆ, ನೆಲಗಡಲೆ ಬಿತ್ತನೆಯಲ್ಲೂ ತೀವ್ರ ಹಿನ್ನಡೆ ಆಗಿದೆ. ಕಳೆದ ಮೂರು ವರ್ಷಗಳ ಕಾಲ ಜಿಲ್ಲೆಯಲ್ಲಿ ಸತತ ಬರಗಾಲವಿದ್ದು, ಇದು ಈ ಬಾರಿಯೂ ಮರುಕಳಿಸಬಹುದು ಎಂದು ಎಂಬ ಆತಂಕದಲ್ಲಿ ರೈತ ಸಮುದಾಯ ಮಳೆಗಾಗಿ ಕಾಯತೊಡಗಿದೆ.

ಕೈಕೊಟ್ಟ ವರುಣ: ಜಿಲ್ಲೆಯಾದ್ಯಂತ ಮುಂಗಾರು ಪೂರ್ವ ಮಳೆಯು ಫಲ ಪ್ರದವಾಗಿದ್ದು, ಭಾರಿ ನಿರೀಕ್ಷೆ ಮೂಡಿ ಸಿತ್ತು. ಆದರೆ ಜೂನ್‌ನಲ್ಲಿ

ವಾಡಿಕೆ -72ಮಿಲಿಮೀಟರ್ ಮಳೆಗೆ ಪ್ರತಿಯಾಗಿ ಕೇವಲ 40 ಮಿ.ಮೀ. ಮಳೆ ಸುರಿದಿದೆ. ಇದರಿಂದ ರೈತರು ಕೃಷಿ ಕಾರ್ಯಕ್ಕೆ ಇಳಿಯಲು ಹಿಂಜರಿಯುತ್ತಿದ್ದಾರೆ. ಜಿಲ್ಲೆಯ ಪ್ರಮುಖ ಬೆಳೆಯಾದ ರಾಗಿ ಸಾಮಾನ್ಯವಾಗಿ ಜುಲೈನಲ್ಲಿ ಬಿತ್ತನೆ ಆಗಲಿದ್ದು, ಇನ್ನೂ ಕೃಷಿ ಚಟುವಟಿಕೆಗೆ ಅವಕಾಶ ಇದ್ದೇ ಇದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯ ನಿರೀಕ್ಷೆಯೂ ಇದೆ ಎನ್ನುತ್ತಾರೆ ಜಿಲ್ಲಾ ಕೃಷಿ ಅಧಿಕಾರಿಗಳು.

**

ಜುಲೈ ತಿಂಗಳಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು ರಾಗಿ ಬಿತ್ತಲಿದ್ದು, ಆ ಸಮಯದಲ್ಲಿ ಉತ್ತಮ ಮಳೆ ಆಗುವ ನಿರೀಕ್ಷೆ ಇದೆ

-ಎಸ್‌.ಎಂ. ದೀಪಜಾ

ಜಂಟಿ ನಿರ್ದೇಶಕಿ, ಕೃಷಿ ಇಲಾಖೆ

ಪ್ರತಿಕ್ರಿಯಿಸಿ (+)