ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ: ಜೀನ್ಸ್‌ ಉದ್ದಿಮೆದಾರರು ನಿರಾಳ

Last Updated 1 ಜುಲೈ 2017, 6:26 IST
ಅಕ್ಷರ ಗಾತ್ರ

ಬಳ್ಳಾರಿ: ಜೀನ್ಸ್‌ ಸಿದ್ಧ ಉಡುಪು ಉದ್ಯ ಮದಲ್ಲಿ ರಾಜ್ಯದ ಗಡಿ ಮೀರಿ ಗಮನ ಸೆಳೆದಿರುವ ಇಲ್ಲಿನ ಉದ್ದಿಮೆದಾರರಲ್ಲಿ ಸರಕು ಸೇವಾ ತೆರಿಗೆ ಪದ್ಧತಿಯು (ಜಿಎಸ್‌ಟಿ) ನಿರಾಳ ಭಾವ ಮೂಡಿಸಿದೆ. ಇದುವರೆಗೆ ಕೇಂದ್ರ ಮತ್ತು ರಾಜ್ಯದ ಎರಡು ತೆರಿಗೆಗಳನ್ನು ಉದ್ದಿಮೆದಾರರು ಪಾವತಿಸುತ್ತಿದ್ದ ಅವರು ಇನ್ನು ಮುಂದೆ ಒಂದೇ ತೆರಿಗೆಯನ್ನು ಪಾವತಿಸಲಿದ್ದಾರೆ.

ಇನ್‌ಪುಟ್‌ ಟ್ಯಾಕ್ಸ್‌ ಲಾಭ: ‘ಉದ್ದಿಮೆ ದಾರರು ಖರೀದಿಸುವ ಬಟ್ಟೆ ಮತ್ತು ಸಲಕರಣೆಗಳ ಮೇಲೆ ಹೊಸ ತೆರಿಗೆ ಪದ್ಧತಿಯು ಹಲವು ಬಗೆಯ ತೆರಿಗೆ ಗಳನ್ನು ವಿಧಿಸಿದೆ. ಆದರೆ ಪೂರೈಸುವ ವರು ಅದನ್ನು ಪಾವತಿಸಬೇಕು. ಉದ್ದಿಮೆ ದಾರರು ಸಿದ್ಧ ಉಡುಪುಗಳನ್ನು ಮಾರುವಾಗ ಈ ತೆರಿಗೆಯನ್ನು ಸೇರಿಸಿಯೇ ದರ ನಿಗದಿ ಮಾಡುತ್ತಾರೆ. ಅದು ಅವರಿಗೆ ಲಾಭಕರ. ಹೀಗಾಗಿ ಜಿಎಸ್‌ಟಿಯಿಂದ ಅನನುಕೂಲವೇನೂ ಆಗಿಲ್ಲ’ ಎನ್ನುತ್ತಾರೆ ಉದ್ದಿಮೆದಾರ ಮಲ್ಲಿಕಾರ್ಜುನ.

’ಬಟ್ಟೆ, ಝಿಪ್‌, ದಾರ, ಪ್ಲಾಸ್ಟಿಕ್‌ ಚೀಲ, ಗುಂಡಿಗಳು ಸೇರಿದಂತೆ ಉಡು ಪಿಗೆ ಬೇಕಾದ ಸಲಕರಣೆಗಳ ಮೇಲಿನ ತೆರಿಗೆಯು ಲಾಭದಾಯಕ ವಾಗಲಿದೆ. ಆದರೆ ಉಡುಪು ತಯಾ ರಿಸುವುದಕ್ಕೆ ಸಂಬಂಧಿಸಿದಂತೆ ನೀಡಬೇಕಾದ ರಸೀದಿಯ ಮೇಲೆ ಸೇವಾ ತೆರಿಗೆ ವಿಧಿಸಿದರೆ ತೊಂದರೆ ಆಗಬಹುದು. ಈ ಬಗ್ಗೆ ಸ್ಪಷ್ಟತೆ ಇಲ್ಲ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಡೀ ವರ್ಷಕ್ಕೆ ಬೇಕಾಗುವಷ್ಟು ರಸೀದಿ ಪುಸ್ತಕಗಳನ್ನು ಇನ್ನು ಬಳಸುವಂತಿಲ್ಲ. ಹೊಸ ಮಾದರಿಯ ರಸೀದಿಯನ್ನೇ ನೀಡಬೇಕಾಗಿದೆ’ ಎಂದರು. ‘ನಗರದಲ್ಲಿ 500 ಜೀನ್ಸ್‌ ಸಿದ್ಧ ಉಡುಪು ತಯಾರಿಕಾ ಘಟಕಗಳಿವೆ. ಜಿಎಸ್‌ಟಿಯಿಂದ ಕಾರ್ಮಿಕರ ಕೂಲಿಯ ಮೇಲೆ ಯಾವ ಪರಿಣಾಮವೂ ಇಲ್ಲ’ ಎಂದರು.

ಬೈಕ್‌ ಬೆಲೆ ಇಳಿಕೆ: ಆಟೋಮೊಬೈಲ್ ಕ್ಷೇತ್ರದ ಸಾಮಗ್ರಿಗಳ ಮೇಲಿನ ತೆರಿಗೆ ಶೇ 30ರಿಂದ ಶೇ 28ಕ್ಕೆ ಇಳಿದಿದೆ. ಅಂದರೆ ಶೇ 2ರಷ್ಟು ತೆರಿಗೆ ಕಡಿಮೆಯಾಗಿರುವು ದರಿಂದ, ಬೈಕ್‌ಗಳ ಬೆಲೆ ಕಡಿಮೆಯಾಗು ತ್ತದೆ ಎನ್ನುತ್ತಾರೆ ಅನ್ನಪೂರ್ಣ ಆಟೋ  ಮೊಬೈಲ್ಸ್‌ನ ಸಿ.ಸಂತೋಷ್‌. ಅವರು ಹೀರೋ ಕಂಪೆನಿಯ ವಾಹನ ಗಳನ್ನು ಮಾರಾಟ ಮಾಡುತ್ತಾರೆ.

₹1 ಲಕ್ಷ ಮೌಲ್ಯದ 150 ಸಿ.ಸಿ ಸಾಮರ್ಥ್ಯದ ಬೈಕ್‌ ದರ ಕನಿಷ್ಠ ₹2 ಸಾವಿರ ಕಡಿಮೆಯಾಗಬಹುದು. ₹50 ಸಾವಿರ ಮೌಲ್ಯದ ಬೈಕ್‌ ದರ ₹1 ಸಾವಿರ ಕಡಿಮೆಯಾಗುವ ಸಾಧ್ಯತೆ ಇದೆ. ಇದು ಬೈಕ್‌ ಖರೀದಿದಾರರನ್ನು ಹೆಚ್ಚೇನೂ ಉತ್ತೇಜಿಸಲಾರದು’ ಎಂದರು.

ಗೊಂದಲ: ‘ಇನ್‌ಪುಟ್‌ ಟ್ಯಾಕ್ಸ್‌ ಬಗ್ಗೆ ಸ್ಪಷ್ಟತೆ ಇಲ್ಲವಾಗಿದೆ. ಆ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡುವುದಾಗಿ ಕಂಪೆನಿ ಯು ಹೇಳಿದೆ. ಅಲ್ಲೀವರೆಗೂ, ಲಾಭ–ನಷ್ಟದ ಕುರಿತು ಏನನ್ನೂ ಹೇಳಲಾಗು ವುದಿಲ್ಲ’ ಎಂದರು.

ಹೋಟೆಲ್‌ ಕ್ಷೇತ್ರ ಡೋಲಾಯಮಾನ: ‘ವಾರ್ಷಿಕ ₹75 ಲಕ್ಷಕ್ಕಿಂತ ಕಡಿಮೆ ವಹಿವಾಟು ನಡೆಸುವ ಹೋಟೆಲ್‌ಗಳು ಶೇ 5ರಷ್ಟು ಮತ್ತು ಅದಕ್ಕಿಂತ ಹೆಚ್ಚು ವಹಿವಾಟು ನಡೆಸುವ ಹೋಟೆಲ್‌ಗಳು ಶೇ 12ರಷ್ಟು ತೆರಿಗೆ ಪಾವತಿಸಬೇಕಾ ಗುತ್ತದೆ. ಇದುವರೆಗೆ ಶೇ 4ರಷ್ಟು ತೆರಿಗೆ ಯನ್ನಷ್ಟೇ ಹೋಟೆಲ್‌ಗಳು ಪಾವತಿಸಬೇಕಾಗಿತ್ತು. ಈಗ ಅದರ ಮೂರು ಪಟ್ಟು ಹೆಚ್ಚಾಗಿರುವುದು ಡೋಲಾಯಮಾನ ಪರಿಸ್ಥಿತಿಯನ್ನು ನಿರ್ಮಿಸಿದೆ’ ಎನ್ನುತ್ತಾರೆ  ನಗರದ ಪ್ರಸಿದ್ಧ ಮಯೂರ ಹೋಟೆಲ್‌ನ ಎಚ್‌,ಎಸ್‌.ಮಧುಸೂದನ್.

‘ನಮ್ಮದು ₹75 ಲಕ್ಷಕ್ಕಿಂತ ಹೆಚ್ಚು ವಹಿವಾಟಿರುವ ಹೋಟೆಲ್‌. ಹೆಚ್ಚು ತೆರಿಗೆ ಪಾವತಿಸುತ್ತೇವೆ ಎಂದು ದಿಢೀರನೆ ಪದಾ ರ್ಥಗಳ ದರಗಳನ್ನು ಹೆಚ್ಚಿಸಲು ಆಗುವು ದಿಲ್ಲ. ಹಾಗೆ ಮಾಡಿದರೆ ಗ್ರಾಹಕರನ್ನು ಕಳೆದುಕೊಳ್ಳಬೇಕಾಗುತ್ತದೆ’ ಎಂದರು.

‘ಕಡಿಮೆ ತೆರಿಗೆ ಪಾವತಿಸುವ ಹೋಟೆಲ್‌ಗಳಲ್ಲಿ ಪದಾರ್ಥಗಳ ದರ ಕಡಿಮೆ ಇರುವುದರಿಂದ, ನಮ್ಮ ಗ್ರಾಹ ಕರೂ ಅಲ್ಲಿಗೇ ಹೋಗುವ ಸಾಧ್ಯತೆಯೂ ಉಂಟು. ತಕ್ಷಣ ದರ ಹೆಚ್ಚಿಸದೆ ಗ್ರಾಹಕ ರನ್ನು ಹಿಡಿದಿಟ್ಟು ಕೊಳ್ಳುವ ಹೊಸ ಸವಾಲು ನಮಗೆ ಎದುರಾಗಿದೆ’ ಎಂದರು.

‘₹ 750ರಿಂದ 1 ಸಾವಿರದವರೆಗೆ ಬಾಡಿಗೆ ನಿಗದಿಯಾದ ಕೊಠಡಿಗಳಿರುವ ವಸತಿಗೃಹಗಳು ಇಲ್ಲೀವರೆಗೆ ಶೇ 4ರಷ್ಟು ತೆರಿಗೆಯನ್ನು ಪಾವತಿಸಬೇಕಾಗಿತ್ತು. ಇನ್ನು ಮುಂದೆ ಪಾವತಿಸಬೇಕಾಗಿಲ್ಲ. ಆದರೆ ₹ 1 ಸಾವಿರಕ್ಕಿಂತ ಹೆಚ್ಚು ದರವುಳ್ಳ ವಸತಿಗೃಹಗಳು ಶೇ 18ರಷ್ಟು ತೆರಿಗೆ ಪಾವತಿಸಬೇಕು. ಅಂಥವರಿಗೆ ನಷ್ಟವೂ ಹೆಚ್ಚು. ಅದರ ಭಾರವೆಲ್ಲ ಗ್ರಾಹಕರ ಮೇಲೆಯೇ ಬೀಳುತ್ತದೆ’ ಎಂದು ವಿಶ್ಲೇಷಿಸಿದರು.

* * 

ಜೀನ್ಸ್‌ ಸಿದ್ಧ ಉಡುಪು ತಯಾರಿಸುವುದಕ್ಕೆ ಸಂಬಂಧಿಸಿದಂತೆ ನೀಡಬೇಕಾದ ರಶೀದಿಯ ಮೇಲೆ ಸೇವಾ ತೆರಿಗೆ ವಿಧಿಸಿದರೆ ತೊಂದರೆ ಆಗಬಹುದಷ್ಟೇ
ಮಲ್ಲಿಕಾರ್ಜುನ
ಜೀನ್ಸ್‌ ಸಿದ್ಧ ಉಡುಪು ಉದ್ದಿಮೆದಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT