ಶುಕ್ರವಾರ, ಡಿಸೆಂಬರ್ 6, 2019
19 °C

ಸಾಮಾಜಿಕ ನ್ಯಾಯ ಕಲ್ಪಿಸಿದ ಸಮಾಜ ಸುಧಾರಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಮಾಜಿಕ ನ್ಯಾಯ ಕಲ್ಪಿಸಿದ ಸಮಾಜ ಸುಧಾರಕ

ಕನಕಪುರ: ನಾಡಪ್ರಭು ಕೆಂಪೇಗೌಡರು ಸರ್ವ ಧರ್ಮ ಮತ್ತು ಎಲ್ಲಾ ಜಾತಿಗಳನ್ನು ಪ್ರೋತ್ಸಾಹಿಸಿ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟ ಸಮಾಜ ಸುಧಾರಕ ಎಂದು ಆದಿ ಚುಂಚನಗಿರಿ ರಾಮನಗರ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮಿ ಹೇಳಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ನಾಡ ಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದರು.

ಅವರ ಜಯಂತಿಯನ್ನು ಎಲ್ಲಾ ಧರ್ಮದವರು ಮತ್ತು ಜಾತಿಯವರು ಒಟ್ಟಾಗಿ ನಾಡಹಬ್ಬವನ್ನಾಗಿ ಆಚರಣೆ ಮಾಡಿದಾಗ ಅವರ ಜಯಂತಿಗೆ ಅರ್ಥ ಬರುತ್ತದೆ ಎಂದು ಅಭಿಪ್ರಾಯಪಟ್ಟರು.

‘ಗೌಡರು ಉದ್ಯಾನ ನಗರಿ ಬೆಂಗಳೂರು ನಿರ್ಮಿಸುವುದರ ಜತೆಗೆ ನೂರಾರು ಕೆರೆಕಟ್ಟೆಗಳನ್ನು ಕಟ್ಟಿದ್ದಾರೆ, ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಅವರ ಸಾಮಾಜಿಕ ಪರಿಕಲ್ಪನೆಯನ್ನು ನಾವು ಮೈಗೊಡಿಸಿಕೊಂಡು ಅವರು ಕಟ್ಟಿರುವ ಕೆರೆಕಟ್ಟೆಗಳನ್ನು ಜೀರ್ಣೋದ್ಧಾರ ಮಾಡಬೇಕು’ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ರವಿ ಮಾತನಾಡಿ ನಾಡಪ್ರಭು ಕೆಂಪೇಗೌಡರು ಮಾಡಿರುವ ಸಾಧನೆ ಸಾಮಾನ್ಯವಾದು ದಲ್ಲ ಅವಿಸ್ಮರಣೀಯ. ಅಂತಹ ಮಹಾ ಪುರಷರ ಹೆಸರನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಟ್ಟಿದ್ದಾರೆ ಎಂದರು. 

ರೂರಲ್‌ ಕಾಲೇಜಿನ ಪ್ರಾಂಶುಪಾಲ ಡಾ.ಮುನಿರಾಜಪ್ಪ ಕೆಂಪೇಗೌಡರ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿ ದಕ್ಷಿಣ ಭಾರತದ ಸಾಂಸ್ಕೃತಿಕ ರಾಯಭಾರಿಯೆಂದು ಕರೆಸಿಕೊಂಡವರು ನಾಡಪ್ರಭು ಕೆಂಪೇಗೌಡರು ಎಂದರು.ಹತ್ತು ಹಲವು ರೀತಿಯಲ್ಲಿ ಸಮಾಜದ ಉನ್ನತಿಗೆ ಶ್ರಮಿಸಿರುವ ಅವರ ಚರಿತ್ರೆ ಮೇಲೆ ಇನ್ನಷ್ಟು ಬೆಳಕು ಚೆಲ್ಲಬೇಕಿದೆ ಎಂದರು.

ಜನಪದ ಕಲಾವಿದ ಚಿಕ್ಕಮರೀಗೌಡ, ಪ್ರಗತಿಪರ ರೈತ ದಾಸಪ್ಪ,  ಸರ್ಕಲ್‌ ಇನ್‌ಸ್ಪೆಕ್ಟರ್‌ ಸಿದ್ದೇಗೌಡ, ಕಂದಾಯ ಇಲಾಖೆಯ ವಿ.ಎ.ರಾಮಚಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆಯ ವಾರ್ಡನ್ ಸಿದ್ದೇಗೌಡ, ಆರ್‌.ಇ.ಎಸ್‌. ಪ್ರಾಂಶುಪಾಲ ಡಾ.ಮುನಿರಾಜಪ್ಪ ಅವರನ್ನು ಸನ್ಮಾನಿಸಲಾಯಿತು.

ನಗರಸಭೆ ಅಧ್ಯಕ್ಷ ಕೆ.ಎನ್.ದಿಲೀಪ್, ಉಪಾಧ್ಯಕ್ಷ ಕೆ.ಜಗನ್ನಾಥ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶ್ರೀಕಂಠಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಚ್.ಕೆ. ನಾಗರಾಜು, ಭಾಗ್ಯಮ್ಮ ಶಾಂತರಾಜು, ಎಂ.ಎನ್.ನಾಗರಾಜು, ಡಿ.ಎಚ್. ಜಯ ರತ್ನ, ಖಾದಿ ಗ್ರಾಮೋದ್ಯೋಗ ಮಹಾ ಮಂಡಳಿ ಅಧ್ಯಕ್ಷೆ ಸುಕನ್ಯರಂಗಸ್ವಾಮಿ, ಎ.ಪಿ.ಎಂ.ಸಿ ಅಧ್ಯಕ್ಷ ಟಿ.ರವಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಧನಲಕ್ಷ್ಮಿ, ಬಿಜೆಪಿ ಮುಖಂಡ ನಾಗರಾಜು, ತಹಶೀಲ್ದಾರ್ ಆರ್. ಯೋಗಾನಂದ್, ಇ.ಒ. ರಾಮಕೃಷ್ಣಪ್ಪ, ಆರ್.ಐ.ಜಗದೀಶ್, ಗ್ರಾಮಲೆಕ್ಕಾಧಿಕಾರಿ ಚಂದ್ರೇಗೌಡ ಇದ್ದರು.

ಸಾಹಿತ್ಯ, ಕಲೆಗೆ ರಾಜಾಶ್ರಯ

ಕೆಂಪೇಗೌಡರು 15ನೇ ಶತಮಾನದಲ್ಲಿಯೇ ಬೆಂಗಳೂರು ನಗರ ಹೇಗಿರಬೇಕು, ಯಾವ ರೀತಿ ಅಭಿವೃದ್ಧಿಯಾಗಬೇಕೆಂಬ ಪರಿಕಲ್ಪನೆಯೊಂದಿಗೆ ನಿರ್ಮಿಸಿದ್ದರು ಎಂದು ಅನ್ನದಾನೇಶ್ವರನಾಥ ಸ್ವಾಮಿ ಹೇಳಿದರು. 

ವಾಣಿಜ್ಯ ಕೆಂದ್ರವನ್ನಾಗಿ ಪ್ರತಿಯೊಂದು ಜಾತಿಗೂ ಉತ್ತಮ ಮಾರುಕಟ್ಟೆ ಕಲ್ಪಿಸಿಕೊಡಲು ಕಸುಬಿಗೆ ಆಧಾರವಾಗಿ ಪೇಟೆಗಳನ್ನು ನಿರ್ಮಿಸಿದ್ದರು. ಎಲ್ಲಾ ಜಾತಿಗಳಿಗೆ, ಸಾಹಿತ್ಯ, ಸಾಂಸ್ಕೃತಿಕ ಕಲೆಗಳಿಗೆ ರಾಜಾಶ್ರಯ ನೀಡಿದ್ದವರು ಎಂದರು.

ಪ್ರತಿಕ್ರಿಯಿಸಿ (+)