ಜಿಎಸ್ಟಿ ವ್ಯವಸ್ಥೆ ಯಶಸ್ವಿಯಾಗಲ್ಲ ಎಂದಿದ್ದರು ಮೋದಿ!

ನವದೆಹಲಿ: ‘ಜಿಎಸ್‌ಟಿ ಕೇವಲ ಆರ್ಥಿಕ ಬದಲಾವಣೆಗೆ ಸೀಮಿತವಾಗಿಲ್ಲ. ಸಾಮಾಜಿಕ ಬದಲಾವಣೆಗೂ ನಾಂದಿ ಹಾಡಲಿದೆ. ಅತ್ಯಂತ ಸಂಕೀರ್ಣ ಸ್ವರೂಪದ ತೆರಿಗೆ ವ್ಯವಸ್ಥೆಯಿಂದ ಭಾರತಕ್ಕೆ ಆರ್ಥಿಕ ವಿಮೋಚನೆ ಸಿಗಲಿದೆ. ಕಪ್ಪುಹಣ, ತಪ್ಪುಲೆಕ್ಕಗಳಿಗೆ ಕಡಿವಾಣ ಬೀಳಲಿದೆ’ ಜಿಎಸ್‌ಟಿ ಎಂದರೆ ‘ಗುಡ್ ಸಿಂಪಲ್ ಟ್ಯಾಕ್ಸ್’ (ಉತ್ತಮ ಮತ್ತು ಸರಳ ತೆರಿಗೆ)- ಗುರುವಾರ ಮಧ್ಯರಾತ್ರಿ ಜಿಎಸ್‍ಟಿ ಜಾರಿ ಮಾಡುವ ಹೊತ್ತಲ್ಲಿ ಪ್ರಧಾನಿ ಮೋದಿ ಹೇಳಿದ ಮಾತುಗಳಿವು.
ಆದರೆ ವರ್ಷಗಳ ಹಿಂದೆ ನರೇಂದ್ರ ಮೋದಿಯವರು ಜಿಎಸ್‍ಟಿ ವ್ಯವಸ್ಥೆಯನ್ನು ವಿರೋಧಿಸಿದ್ದರು.
'ಜಿಎಸ್‍ಟಿ ಬಗ್ಗೆ ಬಿಜೆಪಿ ಮತ್ತು ಗುಜರಾತ್ ಸರ್ಕಾರದ ನಿಲುವು ಸ್ಪಷ್ಟವಾಗಿದೆ. ಜಿಎಸ್‌ಟಿ ಎಂದಿಗೂ ಯಶಸ್ವಿಯಾಗುವುದಿಲ್ಲ' ಎಂದಿದ್ದರು ಮೋದಿ.
ಗುರುವಾರ ಜಿಎಸ್‍ಟಿ ವ್ಯವಸ್ಥೆ ಜಾರಿ ಮಾಡಲು ಕೇಂದ್ರ ಸರ್ಕಾರ ಅಣಿಯಾಗುತ್ತಿದ್ದಂತೆ ಕಾಂಗ್ರೆಸ್, ಮೋದಿಯವರ ಹಳೆ ವಿಡಿಯೊವೊಂದನ್ನು ಟ್ವೀಟ್ ಮಾಡಿತ್ತು.
This is what Modi ji & the BJP really think of GST #GSTTamasha pic.twitter.com/WyXMEEwOv5
— INC India (@INCIndia) June 30, 2017
'ದೇಶದಾದ್ಯಂತವಿರುವ ತೆರಿಗೆದಾರರಿಗೆ ತಾಂತ್ರಿಕ ವಲಯದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸದೇ ಜಿಎಸ್ಟಿ ಜಾರಿ ಮಾಡಲು ಸಾಧ್ಯವಿಲ್ಲ, ಅದು ಅಸಾಧ್ಯ, ಯಾಕೆಂದರೆ ಜಿಎಸ್ಟಿ ವ್ಯವಸ್ಥೆ ರೂಪೀಕರಿಸಿರುವುದೇ ಹಾಗೆ' ಎಂದು ಮೋದಿ ಹೇಳಿರುವುದು ಈ ವಿಡಿಯೊದಲ್ಲಿದೆ.
Modi ji how quickly you forget your own words. Why are you rolling out GST without developing the proper infrastructure #GSTTamasha pic.twitter.com/5urSMepFN3
— INC India (@INCIndia) June 30, 2017
ಮೋದಿಯವರ ವಿಡಿಯೊ ಟ್ವೀಟ್ ಮಾಡಿರುವ ಕಾಂಗ್ರೆಸ್, ಮೋದಿಯವರೇ, ನೀವು ನಿಮ್ಮ ಮಾತುಗಳನ್ನು ಅದೆಷ್ಟು ಬೇಗ ಮರೆತಿರಿ ಎಂಬ ಪ್ರಶ್ನೆಯೊಂದಿೆ #GSTTamasha ಹ್ಯಾಷ್ ಟ್ಯಾಗ್ ಹಾಕಿ ಟ್ವೀಟ್ಗಳನ್ನು ಮಾಡಿದೆ.