ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದ ಜೈಲುಗಳಲ್ಲಿ ಬಂಧಿಯಾಗಿರುವ ಭಾರತೀಯ ಕೈದಿಗಳ ಸಂಖ್ಯೆ 546

Last Updated 1 ಜುಲೈ 2017, 14:36 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಪಾಕಿಸ್ತಾನದ ಜೈಲುಗಳಲ್ಲಿ ಬಂಧಿಯಾಗಿರುವ ಭಾರತೀಯ ಕೈದಿಗಳ ಪಟ್ಟಿಯನ್ನು ಪಾಕಿಸ್ತಾನ ಸರ್ಕಾರವು ಇಸ್ಲಾಮಾಬಾದ್‌ನಲ್ಲಿರುವ ಭಾರತದ ರಾಯಭಾರಿ ಕಚೇರಿಗೆ ಶನಿವಾರ ಕಳುಹಿಸಿಕೊಟ್ಟಿದೆ.

ಎರಡು ರಾಷ್ಟ್ರಗಳ ನಡುವೆ ಮೇ 21, 2008ರಲ್ಲಿ ಮಾಡಿಕೊಂಡ ಕೌನ್ಸಲರ್ ಪ್ರವೇಶ ಒಪ್ಪಂದದ ಪ್ರಕಾರ ಈ ಪಟ್ಟಿಯನ್ನು ಭಾರತದ ಹೈಕಮೀಷನರ್ ಗೌತಮ್ ಬಂಬಾವಾಲೆ ಅವರಿಗೆ ಕಳುಹಿಸಲಾಗಿದೆ.

ಈ ಪಟ್ಟಿ ಪ್ರಕಾರ 494 ಮೀನುಗಾರರು ಮತ್ತು 52 ನಾಗರಿಕರು ಸೇರಿದಂತೆ ಒಟ್ಟು 546 ಮಂದಿ ಭಾರತೀಯ ಕೈದಿಗಳು ಪಾಕಿಸ್ತಾನದ ಜೈಲಿನಲ್ಲಿ ಬಂಧಿಯಾಗಿದ್ದಾರೆ.

ಅಲ್ಲದೇ ಭಾರತ ಸರ್ಕಾರವು ಕೂಡ ಭಾರತದ ಜೈಲಿನಲ್ಲಿರುವ ಪಾಕಿಸ್ತಾನಿ ಕೈದಿಗಳ ಪಟ್ಟಿಯನ್ನು ನವದೆಹಲಿಯಲ್ಲಿರುವ ಪಾಕಿಸ್ತಾನದ ಹೈ ಕಮಿಷನರ್‌ ಕಚೇರಿಗೆ ಕಳುಹಿಸಿದೆ.

ಕೌನ್ಸಲರ್ ಪ್ರವೇಶ ಒಪ್ಪಂದದ ಪ್ರಕಾರ ಭಾರತ ಮತ್ತು ಪಾಕಿಸ್ತಾನ ತಮ್ಮ ದೇಶಗಳ ಜೈಲಿನಲ್ಲಿರುವ ಕೈದಿಗಳ ಮಾಹಿತಿಯ ಪಟ್ಟಿಯನ್ನು ವರ್ಷದಲ್ಲಿ ಎರಡು ಬಾರಿ (ಜನವರಿ 1 ಮತ್ತು ಜುಲೈ 1ರಂದು) ವಿನಿಮಯ ಮಾಡಿಕೊಳ್ಳಬೇಕು.

ಪಾಕಿಸ್ತಾನ ಜನವರಿ 1ರಂದು ಭಾರತಕ್ಕೆ ಕಳುಹಿಸಿಕೊಟ್ಟ ಪಟ್ಟಿ ಪ್ರಕಾರ ಪಾಕಿಸ್ತಾನದ ಜೈಲುಗಳಲ್ಲಿ 54 ನಾಗರಿಕರು ಮತ್ತು 297 ಮೀನುಗಾರರು ಸೇರಿದಂತೆ ಒಟ್ಟು 351 ಕೈದಿಗಳಿದ್ದರು. ಇವರಲ್ಲಿ 219 ಭಾರತೀಯ ಕೈದಿಗಳನ್ನು 2017ರ ಜನವರಿ 6ರಂದು ಪಾಕಿಸ್ತಾನ ಬಿಡುಗಡೆಗೊಳಿಸಿತ್ತು. ಉಳಿದ 77 ಮಂದಿಯನ್ನು ಜುಲೈ 10ರಂದು ಬಿಡುಗಡೆ ಮಾಡಲಾಗುವುದು ಎಂದು ಪಾಕಿಸ್ತಾನ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT