ಶುಕ್ರವಾರ, ಡಿಸೆಂಬರ್ 13, 2019
17 °C

ಜುಲೈ 10ಕ್ಕೆ ಕೋಚ್‌ ಆಯ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಜುಲೈ 10ಕ್ಕೆ ಕೋಚ್‌ ಆಯ್ಕೆ

ಕೋಲ್ಕತ್ತ: ‘ಜುಲೈ 10 ರಂದು ಭಾರತ ಕ್ರಿಕೆಟ್‌ ತಂಡದ  ನೂತನ ಮುಖ್ಯ ಕೋಚ್‌ ಆಯ್ಕೆ ಪ್ರಕ್ರಿಯೆ ನಡೆಯಲಿದೆ’ ಎಂದು ಬಿಸಿಸಿಐ ಕ್ರಿಕೆಟ್‌ ಸಲಹಾ ಸಮಿತಿಯ ಸದಸ್ಯ ಸೌರವ್‌ ಗಂಗೂಲಿ ಶನಿವಾರ ತಿಳಿಸಿದ್ದಾರೆ.

‘ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಜುಲೈ 9 ಕಡೆಯ ದಿನವಾಗಿದ್ದು ಮರು ದಿನ (ಜುಲೈ 10) ಮುಂಬೈನಲ್ಲಿ ಸಂದರ್ಶನ ನಡೆಸಲು ತೀರ್ಮಾನಿಸಿದ್ದೇವೆ’ ಎಂದು ಸೌರವ್‌ ಹೇಳಿದ್ದಾರೆ.

ಅನಿಲ್‌ ಕುಂಬ್ಳೆ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ವೀರೇಂದ್ರ ಸೆಹ್ವಾಗ್‌, ಟಾಮ್‌ ಮೂಡಿ, ಲಾಲ್‌ಚಂದ್‌ ರಜಪೂತ್‌, ರಿಚರ್ಡ್‌ ಪೈಬಸ್‌ ಮತ್ತು ದೊಡ್ಡ ಗಣೇಶ್‌ ಅವರು ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ಭಾರತ ತಂಡದ ನಿರ್ದೇಶಕರಾಗಿದ್ದ ರವಿಶಾಸ್ತ್ರಿ ಅವರೂ ಅರ್ಜಿ ಹಾಕಲಿದ್ದಾರೆ  ಎನ್ನಲಾಗಿದೆ. ಸಚಿನ್‌ ತೆಂಡೂಲ್ಕರ್‌ ಮತ್ತು ವಿವಿಎಸ್‌ ಲಕ್ಷ್ಮಣ್‌ ಅವರೂ ಸಲಹಾ ಸಮಿತಿಯಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)