ಶನಿವಾರ, ಡಿಸೆಂಬರ್ 7, 2019
16 °C

ಇನ್ಫೊಸಿಸ್‌ನ ಸ್ವತಂತ್ರ ನಿರ್ದೇಶಕರಾಗಿ ಸುಂದರಂ ನೇಮಕ

Published:
Updated:
ಇನ್ಫೊಸಿಸ್‌ನ ಸ್ವತಂತ್ರ ನಿರ್ದೇಶಕರಾಗಿ ಸುಂದರಂ ನೇಮಕ

ನವದೆಹಲಿ: ಇನ್ಫೊಸಿಸ್‌ನ ಸ್ವತಂತ್ರ ನಿರ್ದೇಶಕರಾಗಿ ಡಿ. ಸುಂದರಂ ಅವರು ನೇಮಕವಾಗಿದ್ದಾರೆ. ಆಡಳಿತ ಮಂಡಳಿಯ ಶಿಫಾರಸಿನ ಮೇಲೆ ಸುಂದರಂ ಅವರನ್ನು ನೇಮಕ ಮಾಡಲಾಗಿದೆ. ಜುಲೈ 14 ರಿಂದ ಅವರು ಹೊಣೆಗಾರಿಕೆ ನಿಭಾಯಿಸಲಿದ್ದಾರೆ ಎಂದು ಕಂಪೆನಿ ಪ್ರಕಟಣೆ ತಿಳಿಸಿದೆ.

ಸುಂದರಂ ಅವರು ಸದ್ಯ ಟಿವಿಎಸ್‌ ಕ್ಯಾಪಿಟಲ್‌ ಫಂಡ್ಸ್‌ ಲಿಮಿಟೆಡ್‌ನ ಉಪಾಧ್ಯಕ್ಷರಾಗಿದ್ದಾರೆ. ‘ಹಣಕಾಸು ಮತ್ತು ತಂತ್ರಗಾರಿಕೆ ವಿಷಯಕ್ಕೆ ಸಂಬಂಧಿಸಿದಂತೆ ಸುಂದರಂ ಅವರು ಕಾರ್ಯನಿರ್ವಹಿಸಲಿದ್ದಾರೆ’ ಎಂದು ಇನ್ಫೊಸಿಸ್ ಅಧ್ಯಕ್ಷ ಆರ್.ಶೇಷಸಾಯಿ ಅವರು ತಿಳಿಸಿದ್ದಾರೆ

ಪ್ರತಿಕ್ರಿಯಿಸಿ (+)