ಶುಕ್ರವಾರ, ಡಿಸೆಂಬರ್ 6, 2019
17 °C

ಜಿಎಸ್‌ಟಿ: ವಾಹನಗಳ ಬೆಲೆ ಇಳಿಕೆ

Published:
Updated:
ಜಿಎಸ್‌ಟಿ: ವಾಹನಗಳ ಬೆಲೆ ಇಳಿಕೆ

ನವದೆಹಲಿ: ಜಿಎಸ್‌ಟಿಯಿಂದ ಆಗುವ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಮಾರುತಿ ಸುಜುಕಿ, ಟೊಯೊಟಾ ಕಿರ್ಲೋಸ್ಕರ್‌, ಜೆಎಲ್‌ಆರ್‌ ಮತ್ತು ಬಿಎಂಡಬ್ಲ್ಯು ಕಂಪೆನಿಗಳು ವಾಹನಗಳ ಬೆಲೆಯನ್ನು ಕನಿಷ್ಠ ₹2,300 ರಿಂದ ಗರಿಷ್ಠ ₹2 ಲಕ್ಷದವರೆಗೂ ಇಳಿಕೆ ಮಾಡಿವೆ.

ಪ್ರಮುಖ ಕಂಪೆನಿ ಮಾರುತಿ ಸುಜುಕಿ ಇಂಡಿಯಾ, ತಕ್ಷಣದಿಂದಲೇ ಜಾರಿ ಬರುವಂತೆ ತನ್ನ ಎಲ್ಲಾ ಮಾದರಿಯ ಕಾರುಗಳ ಬೆಲೆಯಲ್ಲಿ ಶೇ 3ರಷ್ಟು ಇಳಿಕೆ ಮಾಡಿದೆ. ಟಾಟಾ ಮೋಟಾರ್ಸ್‌ ಒಡೆತನದ ಜಾಗ್ವರ್‌ ಲ್ಯಾಂಡ್‌ ರೋವರ್‌ ಶೇ 7 ರವರೆಗೂ ಬೆಲೆ ಇಳಿಕೆ ಮಾಡಿದೆ.

ಹೈಬ್ರಿಡ್‌ಗಳ ಬೆಲೆ ಏರಿಕೆ: ಮಾರುತಿ ಸುಜುಕಿ, ಟೊಯೊಟಾ ಮತ್ತು ಬಿಎಂಡಬ್ಲ್ಯು ಕಂಪೆನಿಗಳು ಹೈಬ್ರಿಡ್‌ ಮಾದರಿಗಳ ಬೆಲೆಯಲ್ಲಿ ಏರಿಕೆ ಮಾಡಿವೆ.

ಮಾರುತಿ ಸುಜುಕಿ ಕಂಪೆನಿ ತನ್ನ ಸಿಯಾಜ್ ಮತ್ತು ಎರ್ಟಿಗಾ ಮಾದರಿಗಳ,  ಡೀಸೆಲ್ ಮೈಕ್ರೊ ಹೈಬ್ರಿಡ್‌ ಅವತರಣಿಕೆಗಳ ಬೆಲೆಯನ್ನು ₹ 1ಲಕ್ಷಕ್ಕಿಂತಲೂ ಹೆಚ್ಚು ಏರಿಕೆ ಮಾಡಿದೆ.

‘ಅರೆ ಹೈಬ್ರಿಡ್‌ (ಮೈಕ್ರೊ, ಮೈಲ್ಡ್‌) ವಾಹನಗಳಿಗೆ ನೀಡುತ್ತಿದ್ದ ತೆರಿಗೆ ವಿನಾಯಿತಿ, ಜಿಎಸ್‌ಟಿ ಅಡಿ ರದ್ದಾಗಿರುವುದೇ ಬೆಲೆ ಏರಿಕೆಗೆ ಕಾರಣ. ಇದೂ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ’ ಎಂದು ಕಂಪೆನಿ ಹೇಳಿದೆ.

ಹೈಬ್ರಿಡ್‌ನಲ್ಲಿ ಟೊಯೊಟಾ ಕ್ಯಾಮ್ರಿ ಮತ್ತು ಪ್ರಿಯಸ್‌ ₹3.5 ಲಕ್ಷಕ್ಕಿಂತ ಹೆಚ್ಚು. ಬಿಎಂಡಬ್ಲ್ಯು ಐ8 ₹4.8 ಲಕ್ಷ ದಿಂದ ₹2.28 ಲಕ್ಷದವರೆಗೆ ಏರಿಕೆ ಮಾಡಿವೆ.

ಪ್ರತಿಕ್ರಿಯಿಸಿ (+)