ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಧವ್‌ಗೆ ದೂತಾವಾಸ ಸಂಪರ್ಕ: ಮನವಿ

Last Updated 1 ಜುಲೈ 2017, 19:30 IST
ಅಕ್ಷರ ಗಾತ್ರ

ನವದೆಹಲಿ/ ಇಸ್ಲಾಮಾಬಾದ್:  ಸೇನಾ ನ್ಯಾಯಾಲಯದಿಂದ ಮರಣ ದಂಡನೆ ಗುರಿ ಆಗಿರುವ ಭಾರತ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಭಾರತೀಯ ದೂತಾವಾಸ ಕಚೇರಿಯನ್ನು ಸಂಪರ್ಕಿಸಲು ಅವಕಾಶ ನೀಡಬೇಕು ಎಂದು ಭಾರತವು ಮತ್ತೊಮ್ಮೆ ಪಾಕಿಸ್ತಾನ ಸರ್ಕಾರಕ್ಕೆ ಮನವಿ ಮಾಡಿದೆ.

ಎರಡೂ ರಾಷ್ಟ್ರಗಳು, ತಮ್ಮ ಜೈಲುಗಳಲ್ಲಿರುವ ಕೈದಿಗಳ ಪಟ್ಟಿಯನ್ನು ವಿನಿಮಯ ಮಾಡಿಕೊಳ್ಳುವ ಸಂದರ್ಭದಲ್ಲಿ ಈ ಮನವಿ ಮಾಡಲಾಗಿದೆ. ಜಾಧವ್ ಜತೆಗೆ ಹಮೀದ್ ನೆಹಾಲ್ ಅನ್ಸಾರಿ ಅವರಿಗೂ ದೂತಾವಾಸ ಕಚೇರಿ ಸಂಪರ್ಕಿಸಲು ಅವಕಾಶ ಮಾಡಿಕೊಡಲು ಕೋರಲಾಗಿದೆ.

ಗೂಢಚರ್ಯೆ ನಡೆಸಿರುವ ಮತ್ತು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ ಆಪಾದನೆಯನ್ನು ಹೊರಿಸಿ ಪಾಕಿಸ್ತಾನದ ಸೇನಾ ನ್ಯಾಯಾಲಯವು ಜಾಧವ್ ಅವರಿಗೆ ಈ ವರ್ಷದ ಏಪ್ರಿಲ್‌ನಲ್ಲಿ ಮರಣ ದಂಡನೆ ವಿಧಿಸಿದೆ.

ಭಾರತವು ಇದನ್ನು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರಿಂದ ಶಿಕ್ಷೆಗೆ ತಡೆಯಾಜ್ಞೆ ದೊರಕಿದೆ. ಅಫ್ಗಾನಿಸ್ತಾನದಿಂದ ಆಕಸ್ಮಾತ್‌ ಆಗಿ ಪಾಕಿಸ್ತಾನ ಗಡಿ ದಾಟಿದ್ದ ಮುಂಬೈ ನಿವಾಸಿ ಅನ್ಸಾರಿ ವಿರುದ್ಧವೂ ಗೂಢಚರ್ಯೆ ನಡೆಸಿರುವ ಆರೋಪ ಹೊರಿಸಿ ಶಿಕ್ಷಿಸಲಾಗಿದೆ.

ಪಾಕ್‌ ಜೈಲಿನಲ್ಲಿ 546 ಭಾರತೀಯರು
500 ಮೀನುಗಾರರು ಸೇರಿದಂತೆ ಒಟ್ಟು 546 ಭಾರತೀಯ ಪ್ರಜೆಗಳು ಪಾಕಿಸ್ತಾನದ ಜೈಲುಗಳಲ್ಲಿ ಇದ್ದಾರೆ. ಒಪ್ಪಂದದ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ಪ್ರತಿ ಜನವರಿ ಮತ್ತು ಜುಲೈಯಲ್ಲಿ ಕೈದಿಗಳ ಪಟ್ಟಿಯನ್ನು ವಿನಿಮಯ ಮಾಡಿಕೊಳ್ಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT