ಶುಕ್ರವಾರ, ಡಿಸೆಂಬರ್ 6, 2019
18 °C

ಐನ್‌ಸ್ಟೀನ್‌ ಐಕ್ಯೂ ಮೀರಿಸಿದ ಆರ್ನವ್‌ ಶರ್ಮಾ

ಪಿಟಿಐ Updated:

ಅಕ್ಷರ ಗಾತ್ರ : | |

ಐನ್‌ಸ್ಟೀನ್‌ ಐಕ್ಯೂ ಮೀರಿಸಿದ ಆರ್ನವ್‌ ಶರ್ಮಾ

ಲಂಡನ್‌: ‘ಮೆನ್ಸಾ’ ಐಕ್ಯೂ ಪರೀಕ್ಷೆಯಲ್ಲಿ ಭಾರತ ಸಂಜಾತ 11 ವರ್ಷದ ಆರ್ನವ್‌ ಶರ್ಮಾ ಭೌತವಿಜ್ಞಾನಿಗಳಾದ ಆಲ್ಬರ್ಟ್‌ ಐನ್‌ಸ್ಟೀನ್‌ ಹಾಗೂ ಸ್ಟಿಫನ್‌ ಹಾಕಿಂಗ್‌ ಅವರನ್ನು ಮೀರಿಸಿದ್ದಾನೆ. ಆ ಮೂಲಕ ದೇಶದ ಅತ್ಯಂತ ಬುದ್ಧಿವಂತ ಮಕ್ಕಳಲ್ಲಿ ಒಬ್ಬ ಅನ್ನಿಸಿಕೊಂಡಿದ್ದಾನೆ.

ದಕ್ಷಿಣ ಇಂಗ್ಲೆಂಡಿನ ರೀಡಿಂಗ್‌ ಪಟ್ಟಣದ ಆರ್ನವ್‌ ಕೆಲವು ವಾರಗಳ ಹಿಂದೆ ಯಾವುದೇ ಪೂರ್ವ ತಯಾರಿ ನಡೆಸದೇ, ಅತ್ಯಂತ ಕ್ಲಿಷ್ಟಕರ ಪರೀಕ್ಷೆಯಲ್ಲಿ 162 ಅಂಕ ಗಳಿಸಿದ್ದಾನೆ. ಇದು ಗರಿಷ್ಠ ಅಂಕವಾಗಿದೆ. ‘ಮೆನ್ಸಾ ಪರೀಕ್ಷೆ ಕಠಿಣವಾಗಿರುತ್ತದೆ. ನಾನು ತೇರ್ಗಡೆಯಾಗುತ್ತೇನೆ ಎಂದು ವಿಶ್ವಾಸವಿರಲಿಲ್ಲ. ಪರೀಕ್ಷೆ ಬರೆಯಲು ಎರಡೂವರೆ ಗಂಟೆಯಲ್ಲಿ ಮುಗಿಸಿದೆ’ ಎಂದು ಆರ್ನವ್‌ ತಿಳಿಸಿದ್ದಾನೆ.

‘ಆರ್ನವ್‌ನ ಅಜ್ಜಿ ಇವನ ಭವಿಷ್ಯದ ಬಗ್ಗೆ ಮೊದಲೇ ನುಡಿದಿದ್ದರು. ಅವನು ಎರಡೂವರೆ ವರ್ಷದಲ್ಲಿದ್ದಾಗ ನಮಗೆ ಆತನ ಗಣಿತ ಜ್ಞಾನದ ಅರಿವಾಯಿತು. ಅಲ್ಲಿಂದ ನೂರಕ್ಕೆ ನೂರು ಅಂಕ ಗಳಿಸುತ್ತಿದ್ದ’ ಎಂದು ತಾಯಿ ಮೀಶಾ ಧಮೀಜಾ ಶರ್ಮಾ ಅವರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)