ಶುಕ್ರವಾರ, ಡಿಸೆಂಬರ್ 6, 2019
17 °C

ಉತ್ತರಕನ್ನಡ, ಹುಬ್ಬಳ್ಳಿಯಲ್ಲಿ ಸಾಧಾರಣ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತರಕನ್ನಡ, ಹುಬ್ಬಳ್ಳಿಯಲ್ಲಿ ಸಾಧಾರಣ ಮಳೆ

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಸಿದ್ದಾಪುರ ಹಾಗೂ ಯಲ್ಲಾಪುರದಲ್ಲಿ ಶನಿವಾರ ಉತ್ತಮ ಮಳೆಯಾಗಿದೆ. ಕುಮಟಾ, ಹೊನ್ನಾವರ ಹಾಗೂ ಹಳಿಯಾಳದಲ್ಲಿ ಆಗಾಗ ಜಿಟಿಜಿಟಿ ಮಳೆ ಸುರಿದಿದೆ. 

ಶನಿವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 21.89 ಸೆಂ.ಮೀ. ಮಳೆಯಾಗಿದ್ದು, ಸರಾಸರಿ 1.99 ಸೆಂ.ಮೀ. ಮಳೆ ದಾಖಲಾಗಿದೆ.

ಅಂಕೋಲಾ 21 ಮಿ.ಮೀ, ಭಟ್ಕಳ 25 ಮಿ.ಮೀ, ಹಳಿಯಾಳ 9.2 ಮಿ.ಮೀ, ಹೊನ್ನಾವರ 13.1 ಮಿ.ಮೀ, ಕಾರವಾರ 15.3 ಮಿ.ಮೀ, ಕುಮಟಾ 18.4 ಮಿ.ಮೀ, ಮುಂಡಗೋಡ 11.6 ಮಿ.ಮೀ, ಸಿದ್ದಾಪುರ 27.8 ಮಿ.ಮೀ, ಶಿರಸಿ 27.5 ಮಿ.ಮೀ, ಜೊಯಿಡಾ 22.6 ಮಿ.ಮೀ, ಯಲ್ಲಾಪುರ 29.2 ಮಿ.ಮೀ. ಮಳೆಯಾಗಿದೆ.

ಹುಬ್ಬಳ್ಳಿಯಲ್ಲಿ ಬೆಳಿಗ್ಗೆ ತುಂತುರು ಮಳೆಯಾಗಿದೆ. ಮಂಗಳೂರು, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ.

ಪ್ರತಿಕ್ರಿಯಿಸಿ (+)