ಬುಧವಾರ, ಡಿಸೆಂಬರ್ 11, 2019
25 °C

ಏಕವಚನ ಬಳಕೆ: ಬಿಎಸ್‌ವೈಗೆ ಸಚಿವ ಎಂ.ಬಿ.ಪಾಟೀಲ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏಕವಚನ ಬಳಕೆ: ಬಿಎಸ್‌ವೈಗೆ ಸಚಿವ ಎಂ.ಬಿ.ಪಾಟೀಲ ಎಚ್ಚರಿಕೆ

ವಿಜಯಪುರ:  ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಎ.ಬಿ.ಸಿ.ಡಿ ಗೊತ್ತಿಲ್ಲ. ಯಾರೋ ಚಿಲ್ಲರೆ ಜನ ಚೀಟಿಯಲ್ಲಿ ಬರೆದುಕೊಟ್ಟಿದ್ದನ್ನು ಹೇಳುತ್ತಿದ್ದಾರೆ. ಅವರು ಏಕವಚನದಲ್ಲಿ ನಿಂದಿಸುವುದನ್ನು ನಿಲ್ಲಿಸದಿದ್ದರೆ ನಾನೂ ಅವರ ವೈಯಕ್ತಿಕ, ರಾಜಕೀಯ ಜೀವನದ ಬಗ್ಗೆ ಏಕವಚನದಲ್ಲಿ ಮಾತನಾಡಬೇಕಾಗುತ್ತದೆ ಎಂದು ಸಚಿವ ಎಂ.ಬಿ. ಪಾಟೀಲ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಮ್ಮೆ ವಾಗ್ದಾಳಿ ಆರಂಭಗೊಂಡರೆ ನಾನು ಏನು ಮಾತನಾಡುತ್ತೇನೆ; ಅದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದು ನನಗೇ ಗೊತ್ತಿರುವುದಿಲ್ಲ’ ಎಂದು ಸಚಿವ ಎಂ.ಬಿ.ಪಾಟೀಲ ಕಿಡಿಕಾರಿದರು.

‘ಗುಂಡ್ಲುಪೇಟೆ ಚುನಾವಣೆ ಬಳಿಕ ಯಡಿಯೂರಪ್ಪ ಏಕವಚನದಲ್ಲಿ ವಾಗ್ದಾಳಿ ಆರಂಭಿಸಿದ್ದಾರೆ. ಎರಡು ಬಾರಿ ಸಹಿಸಿಕೊಂಡಿದ್ದೇನೆ. ನನ್ನ ತಾಳ್ಮೆ ಪರೀಕ್ಷಿಸಬಾರದು.  ಪುನರಾವರ್ತನೆಯಾದರೆ ಸಹಿಸುವುದಿಲ್ಲ’ ಎಂದು ಎಚ್ಚರಿಸಿದರು.

ಪ್ರತಿಕ್ರಿಯಿಸಿ (+)