ಶನಿವಾರ, ಡಿಸೆಂಬರ್ 14, 2019
25 °C

ಶ್ರೀಕಾಂತ್‌, ಪುಲ್ಲೇಲ ಗೋಪಿಚಂದ್‌ಗೆ ಸನ್ಮಾನ

ಪಿಟಿಐ Updated:

ಅಕ್ಷರ ಗಾತ್ರ : | |

ಶ್ರೀಕಾಂತ್‌, ಪುಲ್ಲೇಲ ಗೋಪಿಚಂದ್‌ಗೆ ಸನ್ಮಾನ

ನವದೆಹಲಿ: ಇಂಡೊನೇಷ್ಯಾ ಮತ್ತು ಆಸ್ಟ್ರೇಲಿಯಾ ಓಪನ್‌ ಸರಣಿಗಳ ಪ್ರಶಸ್ತಿ ಗೆದ್ದಿರುವ ಕಿದಂಬಿ ಶ್ರೀಕಾಂತ್ ಮತ್ತು ಭಾರತ ಬ್ಯಾಡ್ಮಿಂಟನ್‌ ತಂಡದ ಮುಖ್ಯ ಕೋಚ್ ಪುಲ್ಲೇಲ ಗೋಪಿಚಂದ್ ಅವರನ್ನು ಕೇಂದ್ರ ಕ್ರೀಡಾ ಸಚಿವ ವಿಜಯ್‌ ಗೋಯೆಲ್ ಅವರು ಶನಿವಾರ ಸನ್ಮಾನಿಸಿದರು.

‘ಸತತ ಪ್ರಯತ್ನದ ಫಲವಾಗಿ ಶ್ರೀಕಾಂತ್‌ ಅವರು ಭಾರತ ಬ್ಯಾಡ್ಮಿಂಟನ್‌ನಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ಅವರ ಸಾಧನೆಗೆ ಪುಲ್ಲೇಲ ಗೋಪಿ ಚಂದ್‌ ಕಾರಣರಾಗಿದ್ದಾರೆ’ ಎಂದು ಗೋಯೆಲ್ ಹೇಳಿದರು.

ಕ್ರೀಡಾ ಸಚಿವಾಲಯ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರದ ಸಹಕಾರವನ್ನು ನೆನೆದ ಶ್ರೀಕಾಂತ್ ಹಾಗೂ ಗೋಪಿಚಂದ್‌ ಧನ್ಯವಾದ ಸಲ್ಲಿಸಿದರು.

ಪ್ರತಿಕ್ರಿಯಿಸಿ (+)