ಭಾನುವಾರ, ಡಿಸೆಂಬರ್ 8, 2019
21 °C

ಡೀಮ್ಡ್‌ ಅರಣ್ಯ ಸಂರಕ್ಷಣೆ ಅತಿ ಮುಖ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡೀಮ್ಡ್‌ ಅರಣ್ಯ ಸಂರಕ್ಷಣೆ ಅತಿ ಮುಖ್ಯ

ಶಿರಸಿ: ಡೀಮ್ಡ್ ಅರಣ್ಯ ಪ್ರದೇಶವನ್ನು ಅರಣ್ಯದ ವ್ಯಾಪ್ತಿಯಿಂದ ಹೊರಗಿಡ ಬಾರದು ಎಂದು ಒತ್ತಾಯಿಸಿ ವೃಕ್ಷಲಕ್ಷ ಆಂದೋಲನ ಸಂಘಟನೆಯು ಕೆನರಾ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

‘ರೈತರ ಸೊಪ್ಪಿನ ಬೆಟ್ಟಗಳು ಡೀಮ್ಡ್‌ ಅರಣ್ಯ ಪ್ರದೇಶಕ್ಕೆ ಸೇರ್ಪಡೆಯಾಗಿ ವೆಯೇ’ ಎಂದು ವೃಕ್ಷಲಕ್ಷ ಆಂದೋಲ ನದ ಅಧ್ಯಕ್ಷ ಅನಂತ ಅಶೀಸರ ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಸಿಸಿಎಫ್ ಅಶೋಕ ಬಸರಕೋಡ ಅವರು ಸೊಪ್ಪಿನ ಬೆಟ್ಟಗಳು ಸಂರಕ್ಷಿತ ಅರಣ್ಯ ಪಟ್ಟಿಯಲ್ಲಿವೆ ಎಂದರು.

ಡೀಮ್ಡ್‌ ಅರಣ್ಯ ವ್ಯಾಪ್ತಿಯಲ್ಲಿ ಕರಾವಳಿಯ ಕಾಂಡ್ಲಾ ಕಾಡುಗಳು, ಅರಣ್ಯ ದಟ್ಟವಾಗಿರುವ ಹಾಡಿಗಳನ್ನು ಸೇರ್ಪಡೆ ಮಾಡಬೇಕು ಎಂದು ಆರ್.ವಿ.ಭಾಗ್ವತ್ ಶಿರಸಿಮಕ್ಕಿ, ಬಾಲ ಚಂದ್ರ ಸಾಯಿಮನೆ, ನರಸಿಂಹ ವಾನಳ್ಳಿ, ಗಣೇಶ, ಗಣಪತಿ ಮುಂಡಿಗೇಸರ, ಉಮಾಪತಿ.ಕೆ.ವಿ, ಗಣಪತಿ. ಕೆ ಇದ್ದರು.

‘ಡೀಮ್ಡ್ ಅರಣ್ಯವನ್ನು ಅರಣ್ಯ ವ್ಯಾಪ್ತಿಯಲ್ಲೇ ಇಡಬೇಕು. ಪರಿಭಾವಿತ ಅರಣ್ಯಗಳು (ಡೀಮ್ಡ್), ಜಲಮೂಲ ಗಳು, ಪಶ್ಚಿಮಘಟ್ಟದ ಜೀವವೈವಿಧ್ಯತೆ ಇರುವ ಪ್ರದೇಶ ಇವುಗಳನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಬಾರದು.

ಡೀಮ್ಡ್ ಅರಣ್ಯವನ್ನು ಅರಣ್ಯ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಕಳೆದ ಜೂನ್‌ 22ರಂದು ಕೈಗೊಂಡ ಸಚಿವ ಸಂಪುಟದ ನಿರ್ಣಯವನ್ನು ಕೈಬಿಡಬೇಕು. ಈಗಾಗಲೇ ಶೇ 50ರಷ್ಟು ಡೀಮ್ಡ್ ಅರಣ್ಯ ನಾಶವಾಗಿದೆ. ದೇವರ ಕಾಡು, ಕಾನು, ಬೆಟ್ಟ, ಹಾಡಿ, ಭೂಮಿ, ಇನಾಂ ಭೂಮಿ, ಕಾವಲ್‌ಗಳ ಹೆಸರಿನಲ್ಲಿ ಪರಿಭಾವಿತ ಅರಣ್ಯಗಳಿವೆ.

2002ರಲ್ಲಿ ರಾಜ್ಯದಲ್ಲಿ 9,94,881 ಹೆಕ್ಟೇರ್ ಅರಣ್ಯ ವನ್ನು ಡೀಮ್ಡ್ ಅರಣ್ಯ ಎಂದು ಘೋಷಣೆ ಮಾಡಲಾಗಿತ್ತು. 2014ರಲ್ಲಿ ಜಿಲ್ಲಾ ಮಟ್ಟದಲ್ಲಿ ಇದನ್ನು ಪುನರ್ ವಿಮರ್ಶೆ ಮಾಡಿದ ನಂತರ ಡೀಮ್ಡ್ ಅರಣ್ಯ ವ್ಯಾಪ್ತಿ ಯನ್ನು 5,17,485 ಹೆಕ್ಟೇರ್‌ಗೆ ಇಳಿಸಲಾಗಿತ್ತು. 2017 ರಲ್ಲಿ ಡೀಮ್ಡ್ ವ್ಯಾಪ್ತಿ ರಾಜ್ಯದಲ್ಲಿ 4,98,991 ಹೆಕ್ಟೇರ್‌ಗೆ ಇಳಿದಿದೆ. ಇದರಿಂದ ಡೀಮ್ಡ್ ಅರಣ್ಯದ ಅಸ್ತಿತ್ವವೇ ಇಲ್ಲದಂತಾಗು ವುದು’ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಡೀಮ್ಡ್ ಅರಣ್ಯ ರಕ್ಷಣೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಆದರೆ ರಾಜ್ಯ ಸರ್ಕಾರ ಕಂದಾಯ ಅರಣ್ಯಗಳನ್ನು ಅರಣ್ಯವೇ ಅಲ್ಲ ಎಂದು ಘೋಷಣೆ ಮಾಡಲು ಹೊರಟಿದೆ. ಇದು ಅಕ್ಷಮ್ಯ ಅಪರಾಧವಾಗಿದೆ. ಚಿಕ್ಕ ಮಗಳೂರು ಜಿಲ್ಲೆಯಲ್ಲಿ 2002ರಲ್ಲಿ 1,43,733 ಹೆಕ್ಟೇರ್ ಇದ್ದ ಪರಿಭಾವಿತ ಅರಣ್ಯ 2014ರಲ್ಲಿ 53,401 ಹೆಕ್ಟೇರ್‌ಗೆ ಇಳಿಕೆಯಾಗಿದೆ. ನಾಡಿಗೆ ನೀರು ನೀಡುವ ಕಾಡು ನಾಶವಾಗಬಾರದು ಎಂದು ಮನವಿಯಲ್ಲಿ ವಿವರಿಸಲಾಗಿದೆ.

* *

ಕರಾವಳಿ ಪರಿಸರದ ಉಳಿವಿಗೆ ಬಹುದೊಡ್ಡ ಕಾಣಿಕೆ ನೀಡುವ ಕಾಂಡ್ಲಾ ಕಾಡುಗಳು ಡೀಮ್ಡ್ ಅರಣ್ಯಗಳಾಗಿವೆ. ಇವುಗಳ ನಾಶಕ್ಕೆ ಅವಕಾಶ ನೀಡಬಾರದು

ಅನಂತ ಅಶೀಸರ

ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ

ಪ್ರತಿಕ್ರಿಯಿಸಿ (+)