ಶನಿವಾರ, ಡಿಸೆಂಬರ್ 14, 2019
22 °C

ಗೋರಕ್ಷಕರಿಂದ ಮುಸ್ಲಿಂ ವ್ಯಾಪಾರಿ ಹತ್ಯೆ ಪ್ರಕರಣ: ಸ್ಥಳೀಯ ಬಿಜೆಪಿ ನಾಯಕ ಸೇರಿ ಇಬ್ಬರ ಬಂಧನ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಗೋರಕ್ಷಕರಿಂದ ಮುಸ್ಲಿಂ ವ್ಯಾಪಾರಿ ಹತ್ಯೆ ಪ್ರಕರಣ: ಸ್ಥಳೀಯ ಬಿಜೆಪಿ ನಾಯಕ ಸೇರಿ ಇಬ್ಬರ ಬಂಧನ

ರಾಮಗಢ: ಗೋಮಾಂಸ ಸಾಗಾಟ ಮಾಡುತ್ತಿದ್ದ ಅನುಮಾನದಲ್ಲಿ ವ್ಯಾಪಾರಿಯೊಬ್ಬರನ್ನು ಹತ್ಯೆ ಮಾಡಿದ ಆರೋಪಕ್ಕೆ ಸಂಬಂಧಿಸಿ ಸ್ಥಳೀಯ ಬಿಜೆಪಿ ನಾಯಕ ನಿತ್ಯಾನಂದ ಮಹತೊ ಮತ್ತು ಸಂತೋಷ್ ಸಿಂಗ್ ಎಂಬುವವರನ್ನು ಬಂಧಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಬ್ಬ ಆರೋಪಿ ಛೋಟು ರಾಣಾ ನ್ಯಾಯಾಲಯಕ್ಕೆ ಶರಣಾಗಿದ್ದಾರೆ ಎಂದು ಪೊಲೀಸ್ ಸುಪರಿಂಟೆಂಡೆಂಟ್ ಕಿಶೋರ್ ಕೌಶಲ್ ತಿಳಿಸಿದ್ದಾರೆ.

ಗೋಮಾಂಸ ಸಾಗಾಟ ಮಾಡುತ್ತಿದ್ದಾರೆಂದು ಶಂಕಿಸಿ ಹಜಾರಿಬಾಗ್ ಜಿಲ್ಲೆಯ ಮೌನಾ ಗ್ರಾಮದ ಮುಸ್ಲಿಂ ಸಮುದಾಯದ 40 ವರ್ಷ ವಯಸ್ಸಿನ ಮಾಂಸ ವ್ಯಾಪಾರಿಯೊಬ್ಬರ ಮೇಲೆ ಗುಂಪೊಂದು ಇತ್ತೀಚೆಗೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಜತೆಗೆ, ಅವರ ವಾಹನಕ್ಕೂ ಬೆಂಕಿಹಚ್ಚಿತ್ತು. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಾಪರಿ ನಂತರ ಮೃತಪಟ್ಟಿದ್ದರು.

ಘಟನೆಯಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರಿಸ್ಥಿತಿ ನಿಯಂತ್ರಿಸಲು ಜಿಲ್ಲಾಡಳಿತ ಹೆಚ್ಚಿನ ಭದ್ರತೆ ಒದಗಿಸಿತ್ತು. ಕೇಂದ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿಯನ್ನೂ ಸ್ಥಳಕ್ಕೆ ಕಳುಹಿಸಲಾಗಿತ್ತು.

ಪ್ರತಿಕ್ರಿಯಿಸಿ (+)