ಶುಕ್ರವಾರ, ಡಿಸೆಂಬರ್ 13, 2019
17 °C

ಕಾಂಚಾಣಕೆ ಮನಸೋತ ಕನ್ನಿಕೆಯರು

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

ಕಾಂಚಾಣಕೆ ಮನಸೋತ ಕನ್ನಿಕೆಯರು

ಶ್ರೀದೇವಿ

ಬೋನಿ ಕಪೂರ್ ಮತ್ತು ನಟಿ ಶ್ರೀದೇವಿ ನಡುವೆ ವಯಸ್ಸಿನ ಅಂತರ ಮರೆಮಾಚಿ ಪ್ರೇಮಾಂಕುರವಾಗಲು ಕಾಂಚಾಣವೇ ಕಾರಣವಂತೆ. ಹಣವಿದೆ ಎನ್ನುವ ಕಾರಣಕ್ಕೆ ತಂದೆಯ ವಯಸ್ಸಿನವರೊಂದಿಗೆ ವೈವಾಹಿಕ ಬದುಕಿಗೆ ಕಾಲಿಡುವುದೇ ಎನ್ನುವ ಟೀಕೆಗಳನ್ನು ಶ್ರೀದೇವಿ ಮೌನವಾಗಿ ಸ್ವೀಕರಿಸಿದ್ದುಂಟು.

***

ವಿದ್ಯಾ ಬಾಲನ್

ಸೌಂದರ್ಯ ಹಾಗೂ ಪ್ರತಿಭೆಗೆ ಸಾಕ್ಷಿಯಾದ ವಿದ್ಯಾ ಹಾಗೂ ಶ್ರೀಮಂತಿಕೆ ಹೆಸರಾದ ಸಿದ್ಧಾರ್ಥ ಜೋಡಿಯಾಗಲು ಸಮಾನ ಆಸಕ್ತಿ–ಅಭಿರುಚಿಯೇ ಕಾರಣವಾಗಿರಬಹುದು. ಆದಾಗ್ಯೂ ವಿದ್ಯಾ ಇಂಪ್ರೆಸ್‌ ಆಗಲು ಸಿದ್ಧಾರ್ಥ್‌ ಅವರ ಆರ್ಥಿಕ ಭದ್ರತೆಯೂ ಮುಖ್ಯ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

***

ಸೆಲಿನಾ ಜೇಟ್ಲಿ

ಸೆಲಿನಾ ಜೇಟ್ಲಿ ಬಿಟೌನ್‌ನಲ್ಲಿ ಅಷ್ಟೇನೂ ಚಿರಪರಿಚಿತವಲ್ಲದ ಹೆಸರು. ಸಿಗುವ ಕೆಲವೇ ಅವಕಾಶಗಳಿಂದ ಸೆಲಿನಾ ಗಳಿಕೆಯೂ ತೃಪ್ತಿದಾಯಕವಾಗಿರಲಿಲ್ಲ. ಇಲ್ಲಿ ನೆಲೆಕಂಡುಕೊಳ್ಳಲು, ಆಮೂಲಕ ಬದುಕಿಗೊಂದು ಭದ್ರತೆ ಸಿಗಲು ಅದೆಷ್ಟು ವಸಂತಗಳನ್ನು ದಾಟಬೇಕಿತ್ತೊ. ಆದರೆ ಸೆಲಿನಾ ಶ್ರೀಮಂತ ಪೀಟರ್ ಹಾಗ್ ಅವರನ್ನು ವರಿಸಲು ನಿರ್ಧರಿಸಿದ್ದು ಅವರ ಬದುಕಿನ ದೊಡ್ಡ ತಿರುವು.

***

ಕಿಮ್ ಶರ್ಮಾ

‘ಮೊಹಬ್ಬತೇ’ ಸಿನಿಮಾ ನೋಡಿದವರಿಗೆ ಬಳಕುವ ಬಳ್ಳಿಯಂತಹ ಈ ಬೆಡಗಿಯ ನೆನಪಿದ್ದೇ ಇರುತ್ತದೆ. ತನ್ನ ಸಿನಿಮಾಗಳಿಗಿಂತ ಅಫೇರ್‌ಗಳ ಮೂಲಕ ಸುದ್ದಿಯಲ್ಲಿದ್ದಿದ್ದೇ ಹೆಚ್ಚು ಈ ಹುಡುಗಿ.

ಸ್ಪೇನ್‌ನ ಸುಂದರ ಶ್ರೀಮಂತ ಕಾರ್ಲೋಸ್, ಕಿಮ್ ಶರ್ಮಾಳ ಮುಗ್ಧ ಸೌಂದರ್ಯಕ್ಕೆ ಸೋತದ್ದು ಇತಿಹಾಸ. ನಂತರ ಕಾರ್ಲೋಸ್‌ಕ್ಕಿಂತ ಶ್ರೀಮಂತನಿಗೆ ಕಿಮ್‌ ಎರಡನೇ ಬಾರಿ ಮನಸೋತಳು. ಅವರೇ ಅಲಿ ಪುಂಜಾನಿ. ಕಾರ್ಲೋಸ್‌ಗೆ ವಿದಾಯ ಹೇಳಿ ಅಲಿ ಜೊತೆಗೆ ಸಪ್ತಪದಿ ತುಳಿಯಲು ಕಿಮ್‌ ಮುಂದೆ ಬೇರೆ ಯಾವ ಕಾರಣವೂ ಇರಲಿಲ್ಲ. ಹಣದಲ್ಲಿ ಆ ಇಬ್ಬರಿಗೂ ಇದ್ದ ಅಂತರವೇ ಈ ಹೆಜ್ಜೆಗೆ ಪ್ರೇರಣೆ ಎಂದವು ಬಿಟೌನ್‌ ಮೂಲಗಳು.

***

ಆಯೇಷಾ ಟಾಕಿಯಾ

ಆಯೇಷಾ ಟಾಕಿಯಾ ಗೊತ್ತಲ್ಲವೇ? ‘ಸಲಾಮ್ ಎ ಇಶ್ಕ್’ ಮೂಲಕ ಗುರುತಿಸಿಕೊಂಡ ನಟಿ. ಪ್ರಭುದೇವ ನಿರ್ದೇಶನದ ‘ವಾಂಟೆಡ್‌’ನಲ್ಲಿಯೂ ಅಭಿನಯಿಸಿದ್ದರು. ಫರಾನ್ ಆಜ್ಮಿಗಾಗಿ ಹೊಸ ಧರ್ಮವನ್ನೂ ಸ್ವೀಕರಿಸಿದರು ಆಯೇಷಾ. ಇದರ ಹಿಂದೆ ಫರಾನ್‌ನ ಶ್ರೀಮಂತಿಕೆಗಿಂತ ದೊಡ್ಡ ಕಾರಣವಿಲ್ಲ ಎಂದವರುಂಟು. ಫರಾನ್‌ ಉತ್ತರ ಪ್ರದೇಶದ ಖ್ಯಾತ ರಾಜಕೀಯ ಮುಖಂಡ ಅಬು ಆಜ್ಮಿ ಮಗ. ಸ್ವತಃ ಉದ್ಯಮಿಯೂ ಆಗಿರುವ ಫರಾನ್‌ ಹೆಸರಿನಲ್ಲಿ ಮುಂಬೈನಲ್ಲಿ ಅನೇಕ ರೆಸ್ಟೊರೆಂಟ್‌ಗಳಿವೆ.

***

ಟೀನಾ ಅಂಬಾನಿ

ಟೀನಾ ಮುನಿಮ್ ಅಂದರೆ ಈ ಕಾಲದವರಿಗೆ ಬೇಗನೇ ಅರ್ಥವಾಗಲಿಕ್ಕಿಲ್ಲ. 80ರ ದಶಕದಲ್ಲಿ ಸಿನಿಪ್ರಿಯರ ಕನಸಿನ ರಾಣಿಯಾಗಿದ್ದ ಟೀನಾ, ಈಗ ಟೀನಾ ಅಂಬಾನಿ ಎಂದೇ ಚಿರಪರಿಚಿತ. ಟೀನಾ ಅಂಬಾನಿಯಾಗಿ ಈಗಲೂ ಜಗತ್ತಿನ ಗಮನ ಸೆಳೆಯುತ್ತಿರುವ ಟೀನಾ ಅನಿಲ್‌ಗೆ ಮನಸೋತಿದ್ದು ಅವರ ಬಳಿ ಇದ್ದ ದುಡ್ಡಿಗಷ್ಟೇ ಅಲ್ಲ, ಅವರ ಗುಣಕ್ಕೆಂದು ಹೇಳಿಕೊಂಡಿದ್ದುಂಟು.

***

ಅಮೃತಾ ಅರೋರಾ

ಅಮೃತಾ ಅರೋರಾ ಸೌಂದರ್ಯಕ್ಕೆ ಮಾರುಹೋದ ಶಕೀಲ್ ಲಡಾಖ್ ತಮ್ಮ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದು ಅಮೃತಾ ಸಾಂಗತ್ಯಕ್ಕೆ ದಾಂಪತ್ಯದ ಹೆಸರು ಕೊಟ್ಟರು. ಅಮೃತಾ ತಮ್ಮ ಸೌಂದರ್ಯದಿಂದ ಶಕೀಲ್‌ ಮನಸ್ಸು ಕದ್ದರೆ, ಶಕೀಲ್‌ ತಮ್ಮ ಅಗಣಿತ ಶ್ರೀಮಂತಿಕೆಯಿಂದ ಅಮೃತಾ ಹೃದಯ ಗೆದ್ದರು ಎನ್ನುವ ಮಾತುಗಳು ಹರಿದಾಡಿದವು.

ಪ್ರತಿಕ್ರಿಯಿಸಿ (+)