ಶನಿವಾರ, ಡಿಸೆಂಬರ್ 14, 2019
22 °C

ಮಿದುಳಿನ ಕಾರ್ಯವೈಖರಿಗೆ ವಿಡಿಯೊಗೇಮ್‌ ಕುತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಿದುಳಿನ ಕಾರ್ಯವೈಖರಿಗೆ ವಿಡಿಯೊಗೇಮ್‌ ಕುತ್ತು

ವಿಡಿಯೊ ಗೇಮ್‌ ಗೀಳು ಮಿದುಳಿನ ಆಕಾರ ಮತ್ತು ಕಾರ್ಯಗಳ ಮೇಲೂ ಪರಿಣಾಮ ಬೀರುತ್ತದೆ ಎಂಬ ಸಂಗತಿಯನ್ನು ಸಂಶೋಧನೆಯೊಂದು ಸಾಬೀತುಪಡಿಸಿದೆ. ಸ್ಪೇನ್‌ನ ಕ್ಯಾಟಲೋನಿಯಾ ವಿಶ್ವವಿದ್ಯಾಲಯದ ತಜ್ಞರು ನಡೆಸಿರುವ ಸಂಶೋಧನೆಯ ಪ್ರಕಾರ, ವಿಡಿಯೊ ಗೇಮ್‌ಗಳು ಅದನ್ನು ಆಡುವ ವ್ಯಕ್ತಿಯ ನಡವಳಿಕೆಗಳ ಮೇಲೆ ಪರಿಣಾಮ ಬೀರುತ್ತವೆ.

ವಿಡಿಯೊಗೇಮ್ ಅತಿಯಾಗಿ ಆಡುವುದರಿಂದ ವ್ಯಕ್ತಿಯ ಏಕಾಗ್ರತೆ ಕುಂದಬಹುದು ಎನ್ನುತ್ತಾರೆ ಅವರು. ಕಂಪ್ಯೂಟರ್‌ಗಳಿಗೆ ಸೀಮಿತವಾಗಿದ್ದ ಗೇಮ್‌ಗಳು ಮೊಬೈಲ್‌ಗಳಿಗೆ ಲಗ್ಗೆ ಇಟ್ಟಿದ್ದೂ ನಡವಳಿಕೆಗಳ ಬದಲಾವಣೆಗೆ ಕಾರಣ ಎಂಬ ವಿಶ್ಲೇಷಣೆ ತಜ್ಞರದ್ದು. 

ಪ್ರತಿಕ್ರಿಯಿಸಿ (+)