ಶುಕ್ರವಾರ, ಡಿಸೆಂಬರ್ 6, 2019
18 °C

ರಾಣಿ ಪಾತ್ರದಲ್ಲಿ ಕತ್ರೀನಾ

Published:
Updated:
ರಾಣಿ ಪಾತ್ರದಲ್ಲಿ ಕತ್ರೀನಾ

ಅಮೀರ್‌ಖಾನ್‌ ಅವರ ಭಿನ್ನ ಲುಕ್‌ನಿಂದಾಗಿ ಗಮನಸೆಳೆದಿದ್ದ ‘ಥಗ್ಸ್‌ ಆಫ್ ಹಿಂದೊಸ್ತಾನ್’ ಚಿತ್ರ ಈಗ ಮತ್ತೊಂದು ಕಾರಣದಿಂದ ಸುದ್ದಿಯಾಗುತ್ತಿದೆ.

ಬಿ–ಟೌನ್‌ನ ಹಾಟ್ ನಟಿ ಕತ್ರೀನಾ ಈ ಚಿತ್ರದಲ್ಲಿ ವೀರರಾಣಿಯ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ.

ಇಲ್ಲಿಯವರೆಗೆ ಕಮರ್ಷಿಯಲ್‌ ಚಿತ್ರಗಳಲ್ಲಷ್ಟೇ ಕಾಣಿಸಿಕೊಂಡಿರುವ ಕತ್ರೀನಾ, ಮೊದಲ ಬಾರಿಗೆ ಕಲಾತ್ಮಕ  ಪಾತ್ರದಲ್ಲಿ ನಟಿಸಿದ್ದಾರೆ. ಅಮೀರ್‌ ಖಾನ್ ಅವರೊಂದಿಗೆ ಕತ್ರೀನಾಗೆ ಇದು ಎರಡನೇ ಚಿತ್ರ, ಈ ಮುಂಚೆ ಇಬ್ಬರೂ ಒಟ್ಟಿಗೆ ನಟಿಸಿದ್ದ ‘ಧೂಮ್–3’ ಚಿತ್ರ ಉತ್ತಮ ಗಳಿಕೆಯನ್ನೇ ಕಂಡಿತ್ತು.

‘ಥಗ್ಸ್‌ ಆಫ್ ಹಿಂದೊಸ್ತಾನ್’ ಚಿತ್ರದಲ್ಲಿ ಸ್ಟಾರ್ ನಟರ ದಂಡೇ ಇದ್ದು, ಅಮೀರ್, ಕತ್ರೀನಾ ಅವರೊಂದಿಗೆ ಅಮಿತಾಭ್‌ ಬಚ್ಚನ್‌, ಜಾಕಿ ಶ್ರಾಫ್, ದಬಂಗ್ ಖ್ಯಾತಿಯ ಫಾತಿಮಾ ಸನಾ ಶೇಕ್ ಅವರೂ ನಟಿಸುತ್ತಿದ್ದಾರೆ.

ಆದಿತ್ಯ ಚೋಪ್ರಾ ನಿರ್ಮಿಸುತ್ತಿರುವ ಈ ಚಿತ್ರವನ್ನು ವಿಜಯ್‌ ಕೃಷ್ಣ ಆಚಾರ್ಯ ನಿರ್ದೇಶಿಸಿದ್ದಾರೆ. ಚಿತ್ರ ಮುಂದಿನ ವರ್ಷ ದೀಪಾವಳಿಗೆ ಬಿಡುಗಡೆ ಆಗಲಿದೆ.

ಪ್ರತಿಕ್ರಿಯಿಸಿ (+)