ಶುಕ್ರವಾರ, ಡಿಸೆಂಬರ್ 13, 2019
16 °C

‘ಕಾಳ’ ಚಿತ್ರೀಕರಣಕ್ಕೆ ಬ್ರೇಕ್‌ ಹಾಕಿದ ರಜನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕಾಳ’ ಚಿತ್ರೀಕರಣಕ್ಕೆ ಬ್ರೇಕ್‌ ಹಾಕಿದ ರಜನಿ

ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರು ‘ಕಾಳ ಕರಿಕಾಳನ್‌’ ಚಿತ್ರೀಕರಣದಿಂದ ಸಣ್ಣ ಬ್ರೇಕ್‌ ತೆಗೆದುಕೊಂಡಿದ್ದಾರೆ. ಕಾರಣ ಇಷ್ಟೇ... ವೈದ್ಯಕೀಯ ತಪಾಸಣೆಗಾಗಿ ಅವರು ಮಗಳು ಐಶ್ವರ್ಯಾಳೊಂದಿಗೆ ಅಮೆರಿಕಕ್ಕೆ ತೆರಳಲಿದ್ದಾರೆ.

ರಜನಿಕಾಂತ್‌ ಆರೋಗ್ಯ ಸರಿಯಿಲ್ಲ ಎಂಬ ಗಾಳಿಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ ರಜನಿಕಾಂತ್‌ ಅಮೆರಿಕಕ್ಕೆ ಹಾರುವ ಸುದ್ದಿ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಆದರೆ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದ್ದು, ನಿಯಮಿತ ವೈದ್ಯಕೀಯ ತಪಾಸಣೆಗಷ್ಟೇ ಹೋಗುವುದಾಗಿ ಆಪ್ತ ಮೂಲಗಳು ಹೇಳಿವೆ. ಕಳೆದ ವರ್ಷವೂ ಇದೇ ಸಮಯದಲ್ಲಿ ಅವರು ಅಮೆರಿಕಕ್ಕೆ ತೆರಳಿ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡಿದ್ದರು.

ಜುಲೈ 10ರೊಳಗೆ ರಜನಿ  ಚೆನ್ನೈಗೆ ವಾಪಸಾಗಿ, ‘ಕಾಳ’ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಪ.ರಂಜಿತ್‌ ನಿರ್ದೇಶಿಸಿದ್ದಾರೆ.

ಪ್ರತಿಕ್ರಿಯಿಸಿ (+)