ಭಾರತೀಯ ರೈಲ್ವೆ ಲೋಗೊ ಇರುವ ಸಮವಸ್ತ್ರಗಳನ್ನು ಖ್ಯಾತ ವಸ್ತ್ರ ವಿನ್ಯಾಸಕಿ ರಿತು ಬೇರಿ ವಿನ್ಯಾಸಗೊಳಿಸಿದ್ದಾರೆ. ಅರ್ಧ ಮತ್ತು ಉದ್ದನೆಯ ತೋಳಿನ ಕಪ್ಪು–ಹಳದಿ ಬಣ್ಣದ ಟೀ–ಷರ್ಟ್ ಅನ್ನು ಮುಖ್ಯ ಕಚೇರಿ ಸಿಬ್ಬಂದಿಗೆ, ಕಪ್ಪು–ಬಿಳುಪು ಬಣ್ಣದ ಟೀ–ಷರ್ಟ್ ಅನ್ನು ಕೇಟರಿಂಗ್ ಸಿಬ್ಬಂದಿಗೆ, ಹಳದಿ–ಹಸಿರು ಬಣ್ಣದ ಅರ್ಧ ಹೊಳೆಯುವ ಜಾಕೆಟ್ ಟಿಟಿಇ, ಭದ್ರತಾ ಸಿಬ್ಬಂದಿ ಮತ್ತು ಚಾಲಕರಿಗಾಗಿ ತಯಾರಾಗಿದೆ.