ಭಾನುವಾರ, ಡಿಸೆಂಬರ್ 8, 2019
21 °C

‘ಶಕುನಿ ಸಂತಾನ ಹೆಚ್ಚುತ್ತಿದೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಶಕುನಿ ಸಂತಾನ ಹೆಚ್ಚುತ್ತಿದೆ’

ಶ್ರೀನಿವಾಸಪುರ:‘ ಕಾಂಗ್ರೆಸ್‌ ಪಕ್ಷದಲ್ಲಿ ಶಕುನಿಗಳ ಸಂತಾನ ಹೆಚ್ಚುತ್ತಿದೆ. ರಾಜಕಾರಣಿಗಳು ಲಾಭ -ನಷ್ಟದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ರಾಜಕೀಯ ಹರಾಜಿನ ಸರಕಾಗಿದೆ. ಅಂತಹ ರಾಜಕಾರಣ ನನಗೆ ಬೇಡ’ ಎಂದು ಆರೋಗ್ಯ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದರು.

ತಾಲ್ಲೂಕಿನ ಗಂಗನ್ನಗಾರಿಪಲ್ಲಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಏಕಲವ್ಯ ವಸತಿ ಶಾಲೆ ಉದ್ಘಾಟಿಸಿ ಮಾತನಾಡಿದ ಅವರು,‘ ಸಂಸದ ಕೆ.ಎಚ್‌.ಮುನಿಯಪ್ಪ ಅವರು, ನನ್ನನ್ನು ಕರ್ಣನಾಗದೆ ಅರ್ಜುನ ಆಗಬೇಕು. ತಾವು ಕೃಷ್ಣನಾಗುವುದಾಗಿ ಹೇಳಿದ್ದಾರೆ.

ಆದರೆ ಕಾಂಗ್ರೆಸ್‌ ಪಕ್ಷದಲ್ಲಿ ಹಾವಾಡಿಗರು ಹೆಚ್ಚಾಗಿದ್ದಾರೆ. ರಾಜಕಾರಣ ವ್ಯಾಪಾರವಾಗಿದೆ. ಇಂದಿರಾಗಾಂಧಿ ಅವರಂಥ ರಾಜಕಾರಣಿ ಬೇಕಾಗಿದೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)