ಗುರುವಾರ , ಡಿಸೆಂಬರ್ 12, 2019
17 °C
ಗೆಜ್ಜಲಗೆರೆ, ಇಂಡುವಾಳು ಬಳಿ ರೈತರ ಆಕ್ರೋಶ, ನೀರು ನಿಲ್ಲಿಸಲು ಆಗ್ರಹ

ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ

ಮಂಡ್ಯ: ಕೆಆರ್ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿ ವಿವಿಧ ಗ್ರಾಮಗಳ ಜನರು ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಬಳಿ ಭಾನುವಾರ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು  ಪ್ರತಿಭಟನೆ ನಡೆಸಿದರು.

ಅರ್ಧ ಗಂಟೆ ಹೆದ್ದಾರಿ ತಡೆ ಮಾಡಿದ ಕಾರಣ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಭಾನುವಾರವಾದ ಕಾರಣ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಒಂದು ಕಿ.ಮೀವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಜಿಲ್ಲೆಯಲ್ಲಿ ಸತತ ಮೂರು ವರ್ಷಗಳಿಂದ ಬರ ಆವರಿಸಿದೆ.  ಮುಂಗಾರು ಮಳೆಯೂ ಸರಿಯಾಗಿ ಸುರಿಯುತ್ತಿಲ್ಲ.  ಇಂತಹ ಸಂಕಷ್ಟ ಕಾಲದಲ್ಲಿ ರಾಜ್ಯ ಸರ್ಕಾರ  ತಮಿಳುನಾಡಿಗೆ ನೀರು ಹರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಬೇಕು. ಇಲ್ಲದಿದ್ದರೆ ಜಾನುವಾರು ಹಾಗೂ ಎತ್ತಿನಗಾಡಿಗಳನ್ನು ಹೆದ್ದಾರಿಗೆ ತಂದು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಮಂಡ್ಯದ ರೈತ ಸಂಘ (ಮೂಲ ಸಂಘಟನೆ) ಕಾರ್ಯಕರ್ತರು ಭಾನುವಾರ ಇಂಡುವಾಳು ಬಳಿ ಬೆಂಗಳೂರು–ರಾಷ್ಟ್ರೀಯ ಹೆದ್ದಾರಿ ತಡೆದು  ಪ್ರತಿಭಟನೆ ನಡೆಸಿದರು.

ಪ್ರತಿಕ್ರಿಯಿಸಿ (+)